Just In
Don't Miss!
- News
ಹರಿದ್ವಾರ ಕುಂಭಮೇಳ 2021: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
- Sports
ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್
- Finance
ಜನವರಿ 1ರಿಂದ 22ರ ತನಕ ಎಫ್ ಪಿಐನಿಂದ ರು. 18,456 ಕೋಟಿ ಹೂಡಿಕೆ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
RCB ಪದಕ್ಕೆ ಹೊಸ ಅರ್ಥ ನೀಡಿದ ನಿರ್ದೇಶಕ ಸುನಿ
ಆರ್.ಸಿ.ಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಸದ್ಯ 2019ನೇ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡ ಹೀನಾಯವಾದ ಪರಿಸ್ಥಿತಿಯಲ್ಲಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಆಡಿರುವ 9 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದು ನಿರಾಳವಾಗಿದೆ. ಆರ್.ಸಿ.ಬಿ ಗೆದ್ರೆ ಸಾಕು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಪ್ರತಿ ಪಂದ್ಯದಲ್ಲೂ ಟೆನ್ಷನ್ ಹೆಚ್ಚಾಗ್ತಿದೆ. ಗೆದ್ದೇಬಿಟ್ಟೆವೂ ಎಂದು ಬೀಗುತ್ತಿದ್ದರೇ ಅಷ್ಟರಲ್ಲೇ ಸೋಲಿನ ಭಯ ತೋರಿಸುತ್ತೆ ವಿರಾಟೆ ಪಡೆ.
ಮುಂಬೈ ವಿರುದ್ಧ ಸೋತ RCB ತಂಡದ ಹಣೆಬರಹ ಹೇಳಿದ ಸಿಂಪಲ್ ಸುನಿ
ನಿನ್ನೆ ನಡೆದ ಪಂದ್ಯದಲ್ಲೂ ಅದೇ ಆಯ್ತು. ಕೆಕೆಆರ್ ತಂಡಕ್ಕೆ 213ರನ್ ಬೃಹತ್ ಮೊತ್ತವನ್ನ ಗುರಿಯಾಗಿ ನೀಡಿದ ಆರ್.ಸಿ.ಬಿ ಬೌಲಿಂಗ್ ನಲ್ಲೂ ಉತ್ತಮ ದಾಳಿ ಮಾಡಿ, ಒಂದು ಹಂತದಲ್ಲಿ ಗೆಲುವು ತಮ್ಮದಾಗಿಸಿಕೊಂಡಿತ್ತು. ಆದ್ರೆ, ಅಂತಿಮ ಓವರ್ ಗಳಲ್ಲಿ ರಸೆಲ್ ಅಬ್ಬರಕ್ಕೆ ಮತ್ತೆ ಸೋಲಿನ ಕಡೆ ಮುಖ ಮಾಡಿತ್ತು. ಹೇಗೋ ಸಮಯೋಚಿತ ಆಟದಿಂದ ಗೆಲ್ಲುವು ಸಿಕ್ತು. ಇದೆಲ್ಲ ಬಿಡಿ, ನಿರ್ದೇಶಕ ಸುನಿ ಆರ್.ಸಿ.ಬಿ ಪದಕ್ಕೆ ಹೊಸ ಅರ್ಥ ನೀಡಿದ್ದಾರೆ. ಏನ್ ಅದು ಮುಂದೆ ಓದಿ.....

ಆರ್.ಸಿ.ಬಿ ಅಂದ್ರೆ ಏನರ್ಥ?
ಆರ್.ಸಿ.ಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಲ್ಲಾ. 'ರಾಯಲ್ ಚಾಲೆಂಜರ್ಸ್ ಬಾಯಿಗೆ ಬರಿಸೋದು' ಎಂದರ್ಥ. ಆರ್.ಸಿ.ಬಿ ಸದ್ಯದ ಆಟ ನೋಡ್ತಿದ್ರೆ ಸುನಿ ಅವರ ಮಾತು ನೂರಕ್ಕೆ ನೂರರಷ್ಟು ನಿಜ. ಗೆಲ್ಲುವು ಪಂದ್ಯವನ್ನ ಊಹೆಗೆ ನಿಲುಕದ ರೀತಿ ಸೋತಿದ್ದಾರೆ. ಸುಲಭವಾಗಿ ಗೆಲ್ಲುವ ಪಂದ್ಯವನ್ನ ಸೋಲುವ ಹಂತಕ್ಕೆ ತಂದು ಮತ್ತೆ ಗೆದ್ದಿದ್ದಾರೆ.

ನಂಬಿಕೆನೇ ಇಲ್ಲದಂತಾಗಿದೆ
ಮೊದಲು ಬ್ಯಾಟ್ ಮಾಡಿದ ಆರ್.ಸಿ.ಬಿ ತಂಡ ಒಳ್ಳೆಯ ಟಾರ್ಗೆಟ್ ನೀಡಿತ್ತು. ಆದ ನಿರ್ದೇಶಕ ಸುನಿ ಅವರ ಟ್ವೀಟ್ ನೋಡಿ ಹೇಗಿತ್ತು. 'ಕೊಹ್ಲಿ ಶತಕ.... "ಆರ್.ಸಿ.ಬಿ" ದ್ವಿಶತಕ..ಅಭಿಮಾನಿಗಳು ಪುಳಕ.."ಮುಂದೆ ಮಾತಾಡೋಣ ಸಿರಾಜ್ ಬೌಲಿಂಗ್ ಬಳಿಕ' ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲಿಗೆ ಎಷ್ಟೆ ಗುರಿ ನೀಡಿದ್ರು ಬೌಲಿಂಗ್ ಮೇಲೆ ನಂಬಿಕೆ ಇಲ್ಲ ಅನ್ನೋದಕ್ಕೆ ಇದು ಉದಾಹರಣೆ.
ಮುಂದಿನ ಪಂದ್ಯದಲ್ಲಿ ಆರ್.ಸಿ.ಬಿ ಗೆಲ್ಲೊ ಲಕ್ಷಣಗಳಿವೆ: ಸುನಿ ಭವಿಷ್ಯ

ಪಂದ್ಯಕ್ಕೆ ಮುನ್ನ ಸುನಿ ಮಾತು
ಆರ್.ಸಿ.ಬಿ ಮತ್ತು ಕೆಕೆಆರ್ ಪಂದ್ಯ ಆರಂಭಕ್ಕೂ ಮುನ್ನವೇ ಅಭಿಮಾನಿಗಳಿಗೆ ಎಲ್ಲೋ ಒಂದು ಕಡೆ ಆತಂಕ. ಈ ಪಂದ್ಯವಾದರೂ ಗೆಲ್ಲುತ್ತಾರಾ ಅಥವಾ ಇಲ್ವಾ ಎಂಬ ಅನುಮಾನ. ಅದಕ್ಕೆ ಮೊದಲೇ ರೆಡಿಯಾಗಿದ್ದರು. 'ಗೆದ್ದರೆ ನಮಗೆ #goodfriday ಗೆಲ್ಲದಿದ್ದರೆ ಈ ಮ್ಯಾಚ್ #GoodFriday'ಗೆ' ಎಂದು ಸುನಿ ಫಿಕ್ಸ್ ಆಗಿದ್ದರು.

ಫ್ಲೇ ಆಫ್ ಲೆಕ್ಕಾಚಾರ ನಡೆಯುತ್ತಿದೆ
ಆರ್.ಸಿ.ಬಿ ತಂಡದ ಮೇಲೆ ಇಷ್ಟೊಂದು ವಿಶ್ವಾಸ ಇಟ್ಟುಕೊಂಡಿರುವ ಸುನಿ ಪಂದ್ಯ ಗೆದ್ದ ಮೇಲೆ ಇನ್ನೊಂದು ಮಾತು ಹೇಳಿದ್ದಾರೆ. ಶುಭಾಶಯವನ್ನ ನಮಗೆ ನಾವೇ ಹೇಳಿಕೊಳ್ಳೋಣ. ಆರ್.ಸಿ.ಬಿ ಫ್ಯಾನ್ಸ್ ನ ಡಿಸ್ಟರ್ಬ್ ಮಾಡಬೇಡಿ. ಎಲ್ಲರೂ ಫ್ಲೇ ಆಫ್ ಲೆಕ್ಕಾಚಾರದಲ್ಲಿದ್ದಾರೆ' ಎಂದಿದ್ದಾರೆ. ಆರ್.ಸಿ.ಬಿಯ ಮುಂದಿನ ಪಂದ್ಯ ಚೆನ್ನೈ ವಿರುದ್ಧ ಭಾನುವಾರ ನಡೆಯಲಿದೆ.