For Quick Alerts
  ALLOW NOTIFICATIONS  
  For Daily Alerts

  'ಉದ್ವರ್ಘ' ಶೂಟಿಂಗ್ ಮುಗಿಸಿದ ಸುನೀಲ್ ಕುಮಾರ್ ದೇಸಾಯಿ

  |

  ಸಸ್ಪೆನ್ಸ್ ಥ್ರಿಲ್ಲರ್ ಗಳ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು ಹೊಸ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಭಾರಿ ಕುತೂಹಲ ಮೂಡಿಸಿರುವ 'ಉದ್ಘರ್ಷ' ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆದು ಪ್ರೇಕ್ಷಕರೆದುರು ಬರಲು ಸಜ್ಜಾಗುತ್ತಿದೆ.

  ಈಗಾಗಲೇ ಡಬ್ಬಿಂಗ್, ಎಡಿಟಿಂಗ್ ಕೂಡ ಮುಗಿಸಿರುವ ದೇಸಾಯಿ ಮತ್ತು ತಂಡ ತೆರೆಗೆ ಬರಲು ತಯಾರಿ ನಡೆಸಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಉದ್ಘರ್ಷ ಹೆಸರಿನಿಂದ ಚಿತ್ರ ತೆರೆಕಾಣಲಿದ್ದು, ತಮಿಳಿನಲ್ಲಿ ಉಚ್ಚಕಟ್ಟಮ್ ಅಂತಾ ಹೆಸರಿಡಲಾಗಿದೆ.

  ಅಂದು ತರ್ಕ, ಉತ್ಕರ್ಷ, ನಿಷ್ಕರ್ಷ...ಇಂದು ಉದ್ಘರ್ಷ ಅಂದು ತರ್ಕ, ಉತ್ಕರ್ಷ, ನಿಷ್ಕರ್ಷ...ಇಂದು ಉದ್ಘರ್ಷ

  ಮಿಸ್ಟರ್ ವರ್ಲ್ಡ್‍ ಸಿಂಗಮ್ -3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್, 'ಕಬಾಲಿ' ಖ್ಯಾತಿಯ ಧನ್ಸಿಕಾ, ತಾನ್ಯಾ ಹೋಪ್, ಕಬೀರ್ ಸಿಂಗ್ ದುಹಾನ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ಕಿಶೋರ್, ವಂಶಿಕೃಷ್ಣ, ಶ್ರವಣ್ ರಾಘವೇಂದ್ರ, ಶ್ರದ್ಧಾ ದಾಸ್, ಮತ್ತು ಅತಿಥಿ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಸೇರಿದಂತೆ ಬಹುದೊಡ್ಡ ತಾರಾಗಣವನ್ನ ಒಳಗೊಂಡಿದೆ.

  ಸುನೀಲ್ ಕುಮಾರ್ ದೇಸಾಯಿ ಸಂದರ್ಶನ: ನಾನು, ನನ್ನ ಬರ್ತಡೇ ಮತ್ತು 'ಉದ್ಘರ್ಷ' ಸುನೀಲ್ ಕುಮಾರ್ ದೇಸಾಯಿ ಸಂದರ್ಶನ: ನಾನು, ನನ್ನ ಬರ್ತಡೇ ಮತ್ತು 'ಉದ್ಘರ್ಷ'

  ಇನ್ನು ಚಿತ್ರದ ಬಹುತೇಕ ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದ್ದು, ಬೆಂಗಳೂರು, ಹೈದರಾಬಾದ್ ಹಾಗೂ ಕೇರಳದಲ್ಲೂ ಕೆಲ ದೃಶ್ಯಗಳ ಚಿತ್ರೀಕರಣವಾಗಿದೆ. ಈ ಚಿತ್ರವನ್ನು ಡಿ ಕ್ರಿಯೇಷನ್ಸ್ ಅಡಿಯಲ್ಲಿ ದೇವರಾಜ್ .R ನಿರ್ಮಿಸುತ್ತಿದ್ದು, ಅವರ ಮಿತ್ರರಾದ ಮಂಜುನಾಥ್ .ಡಿ , ತಿರುಮಲೈ , ರಾಜೇಂದ್ರ ಕುಮಾರ್ ಸಹ ನಿರ್ಮಾಪಕರರಾಗಿ ಕೈ ಜೋಡಿಸಿದ್ದಾರೆ.

  M.S ಧೋನಿ , ಬೇಬೀ, ಏ ವೆಡ್ನೆಸ್ಡೇ ಖ್ಯಾತಿಯ ಸಂಜೋಯ್ ಚೌದುರಿ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಷ್ಣು ವರ್ಧನ್ ಹಾಗೂ P.ರಾಜನ್ ಅವರ ಛಾಯಾಗ್ರಹಣವಿದೆ. ಇನ್ನು ಚಿತ್ರಕ್ಕೆ B.S ಕೆಂಪರಾಜು ಅವರು ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ

  Sunil kumar desai udgarsha movie shooting complete

  ತರ್ಕ, ಉತ್ಕರ್ಷ, ನಿಷ್ಕರ್ಷ, ಸಂಘರ್ಷ, ಮರ್ಮ, ಕ್ಷಣ ಕ್ಷಣ ಮುಂತಾದ ಸೂಪರ್ ಹಿಟ್ ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಚಿತ್ರಗಳನ್ನು ಕನ್ನಡ ಬೆಳ್ಳಿತೆರೆ ಮೇಲೆ ತಂದಂಥ ಸುನೀಲ್ ಕುಮಾರ್ ದೇಸಾಯಿ ಈಗ 'ಉದ್ಘರ್ಷ'ದೊಂದಿಗೆ ಬರ್ತಿದ್ದಾರೆ.

  English summary
  Kannada Senior Director sunil kumar desai directional udgarsha movie shooting has completed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X