»   » ತುರ್ತು ನಿರ್ಗಮನದಲ್ಲಿ ಸಿಲುಕಿರುವ ಐವರು ನಾಯಕಿಯರು

ತುರ್ತು ನಿರ್ಗಮನದಲ್ಲಿ ಸಿಲುಕಿರುವ ಐವರು ನಾಯಕಿಯರು

Posted By:
Subscribe to Filmibeat Kannada

ತುರ್ತು ನಿರ್ಗಮನ ಅಂದ ತಕ್ಷಣ ಏನಾದರು ಅಪಾಯ ಆದಾಗ ಜೀವ ಉಳಿಸಿಕೊಳ್ಳಬೇಕು ಎನ್ನುವ ಸ್ಥಿತಿ ಬಂದಾಗ ಮೊದಲಿಗೆ ನೆನಪಾಗುವ ಪದ. ಆದರೆ ಚಿತ್ರರಂಗದ ಐವರು ನಾಯಕಿಯರು ತುರ್ತು ನಿರ್ಗಮನದ ಎಲ್ಲಿದೆ ಅಂತ ಹುಡುಕುತ್ತಿದ್ದಾರಂತೆ. ಆಗಂತ ಇವರೆಲ್ಲರೂ ಈ ಜಾಗವನ್ನ ಹುಡುಕುತ್ತಿರುವುದು ನಿಜ ಜೀವನದಲ್ಲಿ ಅಲ್ಲ, ಸಿನಿಮಾದಲ್ಲಿ.

ತುರ್ತು ನಿರ್ಗಮನ 'ಎಕ್ಸ್‌ಕ್ಯೂಸ್ ಮಿ' ಸುನೀಲ್ ರಾವ್ ಅಭಿನಯದ ಚಿತ್ರ. ಎಂಟು ವರ್ಷದ ನಂತರ ಮತ್ತೆ ಸುನೀಲ್ ರಾವ್ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು ವಿಶೇಷ ಎಂದರೆ ಸಿನಿಮಾದಲ್ಲಿ ಐವರು ನಾಯಕಿಯರು ಅಭಿನಯ ಮಾಡುತ್ತಿದ್ದಾರೆ. ಚಿತ್ರೀಕರಣ ಆರಂಭ ಆಗುವ ಮುಂಚೆಯೇ ವಿಭಿನ್ನವಾದ ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದ ನಿರ್ದೇಶಕ ಹೇಮಂತ್ ಕುಮಾರ್ ಸಿನಿಮಾದ ಐವರು ನಾಯಕಿಯರಿಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದಾರೆ.

Sunil Rao acted as a hero in Thurthu nirgamana movie

ಸಂಯುಕ್ತ ಹೆಗ್ಡೆ, ಸುಧಾರಾಣಿ, ಅರುಣಾ ಬಾಲ್ ರಾಜ್, ಹಿತಾ ಚಂದ್ರಶೇಖರ್ ಹಾಗೂ ಅಮೃತಾ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದ್ದಾರೆ.

Sunil Rao acted as a hero in Thurthu nirgamana movie

ಆಗಸ್ಟ್​ನಲ್ಲಿ ಸಿನಿಮಾ ರಿಲೀಸ್ ಮಾಡುವ ಗುರಿ ಇರಿಸಿಕೊಂಡಿದೆ ಚಿತ್ರತಂಡ. ಮಲಯಾಳಂನ ಖ್ಯಾತ ಸಂಕಲನಕಾರ ಬಿ. ಅಜಿತ್​ಕುಮಾರ್ ಈ ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ. ಛಾಯಾಗ್ರಹಣ ಪ್ರಯಾಗ್ ಮುಕುಂದನ್ ಅವರದು. ಹೇಮಂತ್ ಹಾಗೂ ಭರತ್ ಕುಮಾರ್ ಜಂಟಿಯಾಗಿ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

English summary
Kannada actress Samyukta Hegde, Sudhirani, Aruna BallRaj, Hita Chandrashekhar and Amrita have acted in Thurthu nirgamana Kannada movie. Sunil Rao acted as a hero in Thurthu nirgamana movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X