Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಡಿಂಗರ ಬಿಲ್ಲಿ' ಅವತಾರವೆತ್ತಿದ ಸನ್ನಿ ಲಿಯೋನಿ: ಮಂಡ್ಯ ಹುಡುಗರು ದಿಲ್ ಖುಷ್
ಬಾಲಿವುಡ್ ನಟಿ ಸನ್ನಿ ಲಿಯೋನಿ ಕನ್ನಡಿಗರಿಗೆ ಹಳೆಯ ಪರಿಚಯ. ಈಗಾಗಲೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು ಹೋಗಿದ್ದಾರೆ. ಸನ್ನಿ ಲಿಯೋನಿ ಈಗ ಮತ್ತೆ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಕನ್ನಡದ ಸಿನಿಮಾವೊಂದಕ್ಕೆ ಸದ್ದಿಲ್ಲದೆ ಬಂದು ಹೆಜ್ಜೆ ಹಾಕಿ ಹೋಗಿದ್ದಾರೆ. ಸನ್ನಿಯ ಈ ಹೊಸ ಸಾಂಗ್ ಹೇಗಿರುತ್ತೋ? ನಾವು ಯಾವಾಗ ನೋಡುತ್ತೇವೋ? ಅಂತ ಸನ್ನಿ ಅಭಿಮಾನಿಗಳು ಕಾದು ಕೂತಿದ್ದಾರೆ.
ಸನ್ನಿ ಲಿಯೋನಿ ನಟನೆಗೂ ಸೈ. ಹೆಜ್ಜೆ ಹಾಕುವಿದಕ್ಕೂ ಸೈ. ಅದರಲ್ಲೂ ದಕ್ಷಿಣ ಭಾರತದ ಕಡೆ ಮುಖ ಮಾಡಿದ್ದಾರೆ ಅಂದರೆ, ಮುಗೀತು ಸನ್ನಿ ಅಭಿಮಾನಿಗಳ ಕಣ್ಣಿಗೂ ಹಬ್ಬ. ಕಿವಿಗಳೂ ಹಬ್ಬ. ಈಗಾಗಲೇ ಕನ್ನಡಿಗರಿಗೆ 'ಸೇಸಮ್ಮ'ನಾಗಿ ಸನ್ನಿ ಲಿಯೋನಿ ಪರಿಚಯ. ಆದ್ರೀಗ 'ಡಿಂಗರ ಬಿಲ್ಲಿ' ಅವತಾರ ಎತ್ತಲು ಬರುತ್ತಿದ್ದಾರೆ.
ಮಂಡ್ಯ
ಹುಡುಗರ
ಪ್ರೀತಿಗೆ
ಸನ್ನಿ
ಲಿಯೋನಿ
ಫಿದಾ,
ಗೌರವ
ನೀಡಲು
ನಿರ್ಧಾರ!
ಬಾಲಿವುಡ್‌ನ ಬೋಲ್ಡ್ ನಟಿ ಸಾಂಗ್‌ಗಳು ಸೋತಿದ್ದೇ ಇಲ್ಲ. ಒಂದು ಲುಕ್ ಕೊಟ್ಟು, ಟ್ಯೂನ್‌ಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಬಂದರೆ, ಮುಗಿದೇ ಹೋಯ್ತು. ಹುಡುಗರ ಎದೆ ಝಲ್ ಎನ್ನುವುದು ಗ್ಯಾರಂಟಿ. ಇನ್ನು ಕರ್ನಾಟಕದಲ್ಲಿ ಸನ್ನಿಗಾಗಿ ಅಭಿಮಾನಿ ಸಂಘವೇ ಹುಟ್ಟಿಕೊಂಡಿದೆ. ಇವರ 'ಡಿಂಗರ ಬಿಲ್ಲಿ' ಸಾಂಗ್ ಅನ್ನು ಹೇಳದೆ ಇರುತ್ತಾರಾ? ಅಷ್ಟಕ್ಕೂ ಈ ಡಿಂಗರ ಬಿಲ್ಲಿ ಸಾಂಗ್‌ನ ಹೈಲೈಟ್ ಏನು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

'ಸೇಸಮ್ಮ' ಅಲ್ಲ 'ಡಿಂಗರ ಬಿಲ್ಲಿ'
ಕನ್ನಡದಲ್ಲಿ ಹೊಸಬರದ್ದೇ ಸಿನಿಮಾವೊಂದು ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ಚಾಂಪಿಯನ್'. ಇದೇ ಸಿನಿಮಾದ ಒಂದು ಐಟಂ ಸಾಂಗಿಗಾಗಿ ಚಿತ್ರತಂಡ ಸನ್ನಿ ಲಿಯೋನಿಯನ್ನು ಕರೆದುಕೊಂಡು ಬಂದಿತ್ತು. ಸನ್ನಿ ಲಿಯೋನಿ ಕೂಡ ಸದ್ದಿಲ್ಲದೆ ಸೈಲೆಂಟ್ ಆಗಿ ಬಂದು ಹೆಜ್ಜೆ ಹಾಕಿ ಹೋಗಿದ್ದಾರೆ. ಅಷ್ಟಕ್ಕೂ ಸನ್ನಿ ಲಿಯೋನಿ ಹೆಜ್ಜೆ ಹಾಕಿರುವ ಹಾಡು ಕೂಡ ಮಜವಾಗಿದೆ. 'ಡಿಂಗರ ಬಿಲ್ಲಿ' ಅಂತ ಹೆಜ್ಜೆ ಹಾಕಿರುವ ಸೇಸಮ್ಮನ ನೋಡಿ ಸನ್ನಿ ಫ್ಯಾನ್ಸ್ ಫಿದಾ ಆಗುವುದು ಗ್ಯಾರಂಟಿ.
ಮಂಡ್ಯದಲ್ಲಿ
ಅದ್ಧೂರಿಯಾಗಿ
ಸನ್ನಿ
ಲಿಯೋನಿ
ಹುಟ್ಟುಹಬ್ಬ
ಆಚರಿಸಿದ
ಅಭಿಮಾನಿಗಳು

ಅಜನೀಶ್ ಟ್ಯೂನ್‌ಗೆ ಸನ್ನಿ ಸ್ಟೆಪ್ಸ್
ಸನ್ನಿ ಲಿಯೋನಿ ಐಟಂ ಸಾಂಗ್‌ಗೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕೊಟ್ಟಿದ್ದಾರೆ. ಬಾಲಿವುಡ್ ಸುಂದರಿ ಸನ್ನಿ ಲಿಯೋನಿಯಿಂದ ಇಮ್ರಾನ್ ಸರ್ದಾರಿಯಾ ಕುಣಿದು ಕುಪ್ಪಳಿಸುವಂತಹ ಹೆಜ್ಜೆ ಹಾಕಿಸಿದ್ದಾರೆ. ಈ ಕಾರಣಕ್ಕೆ 'ಡಿಂಗರ ಬಿಲ್ಲಿ' ಸಾಂಗ್ ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಲಿಸ್ಟ್ ಸೇರಲಿದೆ ಅನ್ನೋ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಸನ್ನಿ ಲಿಯೋನಿ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ಖುಷಿಗೆ ಚಿತ್ರತಂಡ 'ಡಿಂಗರ ಬಿಲ್ಲಿ' ಸಾಂಗ್ ಬಿಡುಗಡೆ ಮಾಡಿದೆ.

'ಚಾಂಪಿಯನ್' ಜೊತೆ ಅದಿತಿ ಪ್ರಭುದೇವ
ಚಾಂಪಿಯನ್ ಸಿನಿಮಾ ಶಾಹುರಾಜ್ ಶಿಂಧೆ ನಿರ್ದೇಶಿದ್ದಾರೆ. ಸಚಿನ್ ಧನ್‌ಪಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಇವರೊಂದಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಎಂಜಿನಿಯರಿಂಗ್ ಸ್ಟುಡೆಂಟ್ ಜೀವನದಲ್ಲಿ ನಡೆಯುವ ಕೆಲವು ಘಟನೆಗಳನ್ನು ಯಾವ ರೀತಿ ತಿರುವು ಪಡೆದುಕೊಳ್ಳುತ್ತವೆ ಎಂಬುದು ಈ ಸಿನಿಮಾದ ಕಥೆ. ಕನ್ನಡ ಹಾಗೂ ಮರಾಠಿಯಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾದಲ್ಲಿ ಸನ್ನಿ ಲಿಯೋನಿ ಎಂಟ್ರಿ ಚಿತ್ರತಂಡಕ್ಕೆ ಮಸ್ತ್ ಬೂಸ್ಟ್ ನೀಡಲಿದೆ.
ಬರ್ತ್‌ಡೇ
ಬ್ಯೂಟಿ
ಸನ್ನಿ
ಲಿಯೋನಿ
ಬಗ್ಗೆ
ಈ
ಇಂಟ್ರಸ್ಟಿಂಗ್
ವಿಷಯಗಳು
ನಿಮಗೆ
ಗೊತ್ತಾ?

ಮಂಡ್ಯ ಹುಡುಗರ ಸೆಲೆಬ್ರೆಷನ್ ಇರುತ್ತಾ?
ಸನ್ನಿ ಲಿಯೋನಿ ಹುಟ್ಟುಹಬ್ಬದಂದು ಮಂಡ್ಯದ ಸನ್ನಿ ಲಿಯೋನಿ ಅಭಿಮಾನಿಗಳು ರಕ್ತದಾನ, ಅನ್ನದಾನ ಮಾಡಿದ್ದರು. ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದರು. ಈಗ ಬಹಳ ದಿನಗಳ ಬಳಿಕ ಸನ್ನಿ ಲಿಯೋನಿ ಹೆಜ್ಜೆ ಹಾಕಿದ ಕನ್ನಡದ ಹಾಡೊಂದು ಬಿಡುಗಡೆಯಾಗುತ್ತಿದೆ. ಈ ಹಾಡನ್ನು ನೋಡಿದ ಬಳಿಕ ಮಂಡ್ಯ ಹುಡುಗರು ಯಾವ ರೀತಿ ಸೆಲೆಬ್ರೆಟ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.