»   » ಮಂಡ್ಯ ಹೈದನ ಜತೆ ಸೇಸಮ್ಮ ಸನ್ನಿ ಜಿಂಗ್ ಚಾಕ್ ಸ್ಟೆಪ್

ಮಂಡ್ಯ ಹೈದನ ಜತೆ ಸೇಸಮ್ಮ ಸನ್ನಿ ಜಿಂಗ್ ಚಾಕ್ ಸ್ಟೆಪ್

By: ಜೀವರನಸಿಕ
Subscribe to Filmibeat Kannada

ಮಂಡ್ಯ ಹೈದ ಅಂತೂ ಇಂತೂ ಸನ್ನಿ ಲಿಯೋನ್ ರನ್ನ ಕನ್ನಡ ಸಿನಿಮಾದಲ್ಲಿ ಕುಣಿಸಿದ್ದಾರೆ. ಭಾನುವಾರ ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಕುಣಿದಿರೋ ಸನ್ನಿ ಮತ್ತು ಪ್ರೇಮ್ ಲಿರಿಕ್ಸ್ ಗೆ ಅರ್ಜುನ್ ಜನ್ಯ ಸಂಗೀತಕ್ಕೆ ಫಿದಾ ಆಗಿದ್ದಾರೆ. ನೆಲಮಂಗಲ ಬಳಿ ಇರೋ ಮೋಹನ್ ಬಿ.ಕೆರೆ ಅವರ ಸ್ಟುಡಿಯೋದಲ್ಲಿ ಸನ್ನಿ ಡಾನ್ಸ್ ಸಾಗಿದೆ.

ಹೆಚ್ಚೂ ಕಡಿಮೆ ಹಾಟ್ ಹಾಟ್ ಕಾಸ್ಟ್ಯೂಮ್ ನಲ್ಲಿ ಸನ್ನಿ ಕಾಣಿಸಿಕೊಂಡಿದ್ರೆ ಜೋಗಿ ಪ್ರೇಮ್ 'ಡಿಕೆ'ಯ ಖದರ್ ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದಾರೆ. ನಾವು ಹಿಂದೇನೇ ಹೇಳಿದ ಹಾಗೆ ಸನ್ನಿ ಜೊತೆ ಗೆಸ್ಟ್ ಎಂಟ್ರಿ ಇರುತ್ತಾ ಅಥ್ವವಾ ಪ್ರೇಮ್ ಕುಣೀತಾರ ಅನ್ನೋದು ಈಗ ಗೊತ್ತಾಗಿದೆ.

ಸ್ವತಃ ಪ್ರೇಮ್ ಸನ್ನಿ ಸಾಂಗಲ್ಲಿ ಎಂಟ್ರಿಕೊಡ್ತಾರೆ. ಮೂರು ದಿನಗಳ ಕಾಲ ಪ್ರೇಮ್ ಲಿರಿಕ್ಸ್ ಬರೆದಿರೋ "ಬಾಗಿಲು ತೆಗಿಯೇ ಸೇಸಮ್ಮ" ಹಾಡಿಗೆ ಕುಣೀತಾ ಇದ್ದು, ಈಗಾಗಲೇ ಎರಡು ದಿನ ಮುಗಿದಿದೆ. ಸ್ಲೈಡ್ ನಲ್ಲಿ ನೋಡಿ ಸೇಸಮ್ಮನ ವಿಶೇಷ ಚಿತ್ರಗಳು. [ಚಿತ್ರಗಳು: ಪ್ರತೀಕ್ ಜೈನ್]

ಕನ್ನಡದಲ್ಲಿ ಸ್ಟೆಪ್ ಹಾಕಿದ ಬಾಲಿವುಡ್ ಐಟಂ ಬಾಂಬ್

ಇನ್ನು ಮಳೆಗಾಲದಲ್ಲಿ ಬೆಂಗಳೂರಲ್ಲಿ ಸನ್ನಿ ಪಡ್ಡೆಗಳ ಮೈ ಮನಸ್ಸಲ್ಲಿ ಬೆವರು ಹರಿಸ್ತಿದ್ದಾರೆ. ಬಾಲಿವುಡ್ ಐಟಂ ಬಾಂಬ್ ಕನ್ನಡದಲ್ಲೂ ನೋಡೋ ಸಮಯ ದೂರವಿಲ್ಲ.

ಬಹಳ ಎಚ್ಚರಿಕೆಯಿಂದ ಮಾಡುತ್ತಿರುವ ಹಾಡು

ಬಾಗಿಲು ತೆಗಿಯೇ ಸೇಸಮ್ಮ ಅಂತ ಶುರುವಾಗೋ ಲಿರಿಕ್ಸ್ ಗಳನ್ನ ಸ್ವತಃ ಪ್ರೇಮ್ ಸನ್ನಿಯ ಐಟಂ ಸಾಂಗ್ ಗಾಗಿ ಬರೆದಿದ್ದಾರೆ. ಚಿತ್ರದಲ್ಲಿರೋ ಐದು ಹಾಡುಗಳಲ್ಲಿ ಈ ಹಾಡನ್ನ ಬಹಳ ಎಚ್ಚರಿಕೆಯಿಂದ ಮಾಡಲಾಗಿದೆಯಂತೆ.

ಐಟಂ ಸ್ಟೆಪ್ ಹಾಕಿದ ಮಾದಕ ಬೆಡಗಿ

ಮಾದಕ ಮೈಮಾಟದ ನೀಲಿ ಚಿತ್ರಗಳ ಪೋಲಿರಾಣಿ ಸನ್ನಿ ಲಿಯೋನ್ ಡಿ ಕೆ ಚಿತ್ರದಲ್ಲಿ ಐಟಂ ಸ್ಟೆಪ್ ಹಾಕಿದ್ದಾರೆ. ಸನ್ನಿ ಐಟಂ ಡಾನ್ಸ್ ಮಾಡೋದೇನೂ ಬೇಡ, ಅವ್ರು ಡಾನ್ಸ್ ಮಾಡಿದ್ರೇನೇ ಅದು ಐಟಂ ಡಾನ್ಸ್ ಅಂತಿದ್ದಾರೆ ಪಡ್ಡೆಗಳು. (ಚಿತ್ರದಲ್ಲಿ ಸನ್ನಿ ಜೊತೆ ಪ್ರೇಮ್ ಪುತ್ರ ಸೂರ್ಯ)

ಇಷ್ಟಕ್ಕೂ 'ಡಿಕೆ' ಎಂದರೆ ಯಾರು ಶಿವ

ಡಿಕೆ ಅಂತ ಹೆಸರಿಟ್ಟಿರೋ ಟೀಂ ಆಬ್ ಕಿ ಬಾರ್ ಮೇರಾ ಸರ್ಕಾರ್ ಅಂತಿದೆ. ಇನ್ನು ರಾ ಲವ್ ಸ್ಟೋರಿ ಅಂತ ಬೇರೆ ಬರೆದುಕೊಂಡಿದೆ. ರಾಜಕೀಯದಲ್ಲಿ ಲವ್ ಸ್ಟೋರೀನಾ? ಡಿಕೆಶಿ ಅವರದ್ದಾ ಅಂದ್ರೆ, ನೋ ನೋ ನಮಗ್ಗೊತ್ತಿಲ್ಲ ಅಂತಾರೆ ಪ್ರೇಮ್ ಅಂಡ್ ರಕ್ಷಿತಾ ಪ್ರೇಮ್.

ಸಖತ್ ಡಿಫರೆಂಟ್ ಕಥೆ ಅಂತಿದೆ ಡಿಕೆ ಟೀಂ

ಆದ್ರೆ ಡಿ ಕೆ ಚಿತ್ರದ ನಿರ್ಮಾಪಕಿ ರಕ್ಷಿತಾ ಫುಲ್ ಖುಷಿಯಲ್ಲಿ ಕಾಸು ಹಾಕ್ತಿದ್ದಾರೆ. ಯಾಕಂದ್ರೆ ಇಲ್ಲಿ ಪ್ರೇಮ್ ರನ್ನ ಸಖತ್ ಡಿಫ್ರೆಂಟಾಗಿ ತೋರಿಸೋ ಕಥೆ ಇಟ್ಕೊಂಡಿದ್ದಾರೆ ನಿರ್ದೇಶಕ ಉದಯಪ್ರಕಾಶ್. ಡಿಕೆ ಸಿನಿಮಾಗೆ ಸನ್ನಿ ಲಿಯೋನ್ ಬಂದು ಕುಣೀತಾರೆ ಎಂಬ ಸುದ್ದಿ ಕಡೆಗೂ ನಿಜವಾಗಿದೆ.

English summary
Bollywood hottie Sunny Leone shaks a leg in an item number for a film 'DK', which is directed by Uday Prakash. Sunny making her Kannada debut with this item song in 'DK'. The song "Bagilu Tegeye Sesamma..." (Open the door Sesamma) picturised on 3, 4th August, 2014.
Please Wait while comments are loading...