For Quick Alerts
  ALLOW NOTIFICATIONS  
  For Daily Alerts

  ವೆಂಕಟ್ 'ಹುಚ್ಚು' ಪ್ರೀತಿ ಬಗ್ಗೆ 'ಸೂಪರ್ ಜೋಡಿ' ರಚನಾ ಬಿಚ್ಚಿಟ್ಟ ರಿಯಲ್ ಕಹಾನಿ

  By Bharath Kumar
  |

  ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಟಳು ಎಂದು ನಟ, ನಿರ್ದೇಶಕ ಹುಚ್ಚ ವೆಂಕಟ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 'ಸೂಪರ್ ಜೋಡಿ' ಖ್ಯಾತಿಯ ರಚನಾ ಅವರನ್ನ ಪ್ರೀತಿಸುತ್ತಿದ್ದು, ಮದುವೆಗೆ ನಿರಾಕರಿಸಿದ್ದಾರೆ ಎಂದು ಆರೋಪಿಸಿ ವೆಂಕಟ್ ಪಿನಾಯಲ್ ಕುಡಿದಿದ್ದರು.

  ಮತ್ತೊಂದೆಡೆ ನಟಿ ಹಾಗೂ 'ಸೂಪರ್ ಜೋಡಿ' ಶೋನಲ್ಲಿ ವೆಂಕಟ್ ಜೋಡಿ ಆಗಿದ್ದ ರಚನಾ ಅವರು ಈ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿದ್ದಾರೆ. ''ನಾನು ಲವ್ ಮಾಡಿಲ್ಲ, ಆದ್ರೆ, ಮದುವೆ ಆಗು ಎಂದು ಒತ್ತಾಯ ಮಾಡ್ತಿದ್ರು'' ಎಂದು ಬಹಿರಂಗ ಪಡಿಸಿದ್ದಾರೆ. ಇನ್ನು ರಚನಾ ಅವರ ಹೇಳುವ ಪ್ರಕಾರ, ಇದು ನಿನ್ನೆಯಿಂದ ಸೃಷ್ಟಿಯಾಗಿರುವ ಘಟನೆ ಅಲ್ಲ. ಇದಕ್ಕೆ ಹಲವು ತಿಂಗಳುಗಳ ಇತಿಹಾಸವಿದೆ.

  ಹೊಸ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್!

  ಹಾಗಾದ್ರೆ. ಹುಚ್ಚ ವೆಂಕಟ್ ಅವರ ಹುಚ್ಚು ಪ್ರೀತಿ ಬಗ್ಗೆ 'ಸೂಪರ್ ಜೋಡಿ' ರಚನಾ ಹೇಳಿದ್ದೇನು? ಯಾವಾಗನಿಂದ ಈ ಲವ್ ಕಹಾನಿ ಶುರುವಾಗಿತ್ತು? ಅಸಲಿಗೆ ಇವರಿಬ್ಬರ ಮಧ್ಯೆ ಏನಾಗಿತ್ತು ಎಂಬುದನ್ನ ರಚನಾ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ.....

  ನಾನು ವೆಂಕಟ್ ನ ಲವ್ ಮಾಡಿಲ್ಲ

  ನಾನು ವೆಂಕಟ್ ನ ಲವ್ ಮಾಡಿಲ್ಲ

  ''ಹುಚ್ಚ ವೆಂಕಟ್ ಅವರನ್ನ ನಾನು ಲವ್ ಮಾಡಿಲ್ಲ. ಹುಚ್ಚ ವೆಂಕಟ್ ಆತ್ಮಹತ್ಯೆ ಯತ್ನಕ್ಕೂ ನನಗೂ ಸಂಬಂಧವಿಲ್ಲ. ಯಾಕಂದ್ರೆ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕಡ್ಡಿ ಮುರಿದಾಗೆ ಮಾಧ್ಯಮಗಳ ಮುಂದೆ ನಟಿ ರಚನಾ ಸ್ಪಷ್ಟಪಡಿಸಿದ್ದಾರೆ.

  ಮದುವೆ ಆಗಿ ಎಂದು ಬೆನ್ನು ಬಿದ್ದಿದ್ದರು

  ಮದುವೆ ಆಗಿ ಎಂದು ಬೆನ್ನು ಬಿದ್ದಿದ್ದರು

  ''ಇಬ್ಬರು ಕೇವಲ ಸ್ಪರ್ಧಿಗಳಾಗಿ ಮಾತ್ರ ಇದ್ವಿ. ಆದ್ರೆ, ಹುಚ್ಚ ವೆಂಕಟ್ ಅವರು ನನ್ನನ್ನು ಮದುವೆ ಆಗಲು ಒತ್ತಾಯಿಸಿದರು. ನನಗೆ ಇಷ್ಟವಿರಲಿಲ್ಲ. ನನ್ನ ಮನೆಯವರೂ ಒಪ್ಪುವುದಿಲ್ಲ ಎಂದು ನೇರವಾಗಿ ನಿರಾಕರಿಸಿದ್ದೆ. ಪ್ರೀತಿ ಏನೂ ಇಲ್ಲ, ನಾನು ಯಾವ ಮಾತು ಕೊಟ್ಟಿಲ್ಲ'' - ರಚನಾ, ನಟಿ

  ಆತ್ಮಹತ್ಯೆ ಬೆದರಿಕೆ ಹಾಕಿದ್ದ ವೆಂಕಟ್

  ಆತ್ಮಹತ್ಯೆ ಬೆದರಿಕೆ ಹಾಕಿದ್ದ ವೆಂಕಟ್

  ರಚನಾ ಅವರು ಹುಚ್ಚ ವೆಂಕಟ್ ಅವರನ್ನ ಮದುವೆಯಾಗಲು ನಿರಾಕರಿಸಿದ್ದಾಗ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜೀವ ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ, ಪಿನಾಯಲ್ ಕುಡಿಯುವ ಮುಂಚೆಯೂ ಫೋನ್ ಮಾಡಿ, ಸಾಯುವುದಾಗಿ ಎಂದು ಬೆದರಿಕೆ ಹಾಕಿದ್ದರಂತೆ.

  'ಸೂಪರ್ ಜೋಡಿ'ಯಲ್ಲಿ ಪ್ರಪೋಸ್ ಮಾಡಿದ್ದರು

  'ಸೂಪರ್ ಜೋಡಿ'ಯಲ್ಲಿ ಪ್ರಪೋಸ್ ಮಾಡಿದ್ದರು

  'ಸೂಪರ್ ಜೋಡಿ' ಕಾರ್ಯಕ್ರಮ ಶುರುವಾದಾಗ ಕೆಲವು ವಾರಗಳು ಸಾಮಾನ್ಯವಾಗಿತ್ತು. ಆದ್ರೆ, ಮುಂದಿನ ವಾರಗಳಲ್ಲಿ ನನ್ನನ್ನು ಮದುವೆ ಆಗಲು ಕೇಳಿದರು. ನಾನು ಆಗಲ್ಲ ಎಂದಿದ್ದೆ, ಆದ್ರೂ, ಪದೇ ಪದೇ ಮದುವೆ ಆಗು ಎನ್ನುತ್ತಿದ್ದರು. ನಾನು ಸಾಮಾನ್ಯವಾಗಿ ಆಗಲ್ಲವೆಂದೆ. ಆಮೇಲೆ ಸುಮ್ಮನಾಗಿಬಿಡುತ್ತಿದ್ದರು''- ರಚನಾ, ನಟಿ

  'ಸೂಪರ್ ಜೋಡಿ' ಒಪ್ಪಿಕೊಳ್ಳಲು ಕಾರಣ

  'ಸೂಪರ್ ಜೋಡಿ' ಒಪ್ಪಿಕೊಳ್ಳಲು ಕಾರಣ

  ''ಮಹಿಳೆಯರಿಗೆ ಗೌರವ ಕೊಡ್ತಾರೆ, ಮಹಿಳೆಯರ ಪರವಾಗಿ ಹೋರಾಟ ಮಾಡ್ತಾರೆ, ಅವರ ಜೊತೆ ರಿಯಾಲಿಟಿ ಶೋ ಮಾಡಿದ್ರೆ ನಾನು ಸೇಫ್ ಆಗಿರುತ್ತೇನೆ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದೆ'' - ರಚನಾ

  ಹುಚ್ಚ ವೆಂಕಟ್ ಹೊಸ ಕಿರಿಕ್: ಫುಲ್ ರಾಂಗ್ ಆದ ರಾಗಿಣಿ

  English summary
  Huchcha Venkat's Super Jodi Reality Show Partner Rachana Gives Clarification About Huccha Venkat Love.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X