»   » ಸಾಮಾಜಿಕ ಜಾಲತಾಣಗಳಲ್ಲಿ ರಜನಿಕಾಂತ್ ಹವಾ ಬಲು ಜೋರು

ಸಾಮಾಜಿಕ ಜಾಲತಾಣಗಳಲ್ಲಿ ರಜನಿಕಾಂತ್ ಹವಾ ಬಲು ಜೋರು

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನ ಭೇಟಿ ಮಾಡಿ, ಮಾತನಾಡುವ ಕನಸು ಕೋಟ್ಯಾಂತರ ಅಭಿಮಾನಿಗಳಿಗಿದೆ. ಆದ್ರೆ, ಅದೆಷ್ಟು ಜನಕ್ಕೆ ತಾನೆ ಅದು ಈಡೇರುತ್ತೆ ಹೇಳಿ. 'ತಲೈವಾ' ಅಷ್ಟು ಸುಲಭವಾಗಿ ಎಲ್ಲರ ಕೈಗೂ ಸಿಕ್ಕಲ್ಲ.

ಆಗೊಮ್ಮೆ-ಈಗೊಮ್ಮೆ ಅಭಿಮಾನಿಗಳನ್ನ ಭೇಟಿ ಮಾಡಿದರೂ, ಫ್ಯಾನ್ಸ್ ಜೊತೆಗೆ ರಜನಿಕಾಂತ್ ಮಾತುಕತೆ ಕೊಂಚ ಕಮ್ಮಿಯೇ. ಹೀಗಿರುವಾಗಲೇ ದಕ್ಷಿಣ ಭಾರತದ ಸ್ಟಂಟ್ ಗಾಡ್ ರಜನಿಕಾಂತ್ ಟ್ವಿಟ್ಟರ್ ಲೋಕಕ್ಕೆ ಎಂಟ್ರಿಕೊಟ್ಟರು.

ಟ್ವಿಟ್ಟರ್ ನಲ್ಲಿ ಫ್ಯಾನ್ಸ್ ಜೊತೆಗೆ ಒಡನಾಟ ಇಟ್ಟುಕೊಂಡಿರುವ ರಜನಿಕಾಂತ್ ಇದೀಗ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಗೂ ಕಾಲಿಟ್ಟಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ರಜನಿಕಾಂತ್ ಅಕೌಂಟ್ ಕ್ರಿಯೇಟ್ ಆದ ಮರುಕ್ಷಣವೇ ಅಕೌಂಟ್ ವೆರಿಫೈ ಆಗಿದೆ. ಎಷ್ಟೇ ಆಗಲಿ, ಅದು ರಜನಿಕಾಂತ್ ಅಕೌಂಟ್ ಅಲ್ಲವೇ.?! ಮುಂದೆ ಓದಿರಿ...

ಫೇಸ್ ಬುಕ್ ಗೆ ಲಗ್ಗೆ ಇಟ್ಟ ರಜನಿಕಾಂತ್

'ವಣಕ್ಕಂ' (ನಮಸ್ಕಾರ) ಎಂದು ಪೋಸ್ಟ್ ಮಾಡುವ ಮೂಲಕ ನಿನ್ನೆಯಷ್ಟೇ ಫೇಸ್ ಬುಕ್ ಲೋಕಕ್ಕೆ ರಜನಿಕಾಂತ್ ಪದಾರ್ಪಣೆ ಮಾಡಿದ್ದಾರೆ.

ರಜನಿಯ '2.0' ಟೀಸರ್ ಲೀಕ್: ಬಹುತೇಕ ದೃಶ್ಯಗಳು ಬಹಿರಂಗ

ಒಂದೇ ದಿನದಲ್ಲಿ ಲಕ್ಷ ಫಾಲೋವರ್ಸ್

ಫೇಸ್ ಬುಕ್ ಗೆ ರಜನಿಕಾಂತ್ ಕಾಲಿಟ್ಟು ಇನ್ನೂ 24 ಗಂಟೆಗಳು ಕಳೆದಿಲ್ಲ. ಆಗಲೇ, ಫೇಸ್ ಬುಕ್ ನಲ್ಲಿ ರಜನಿಕಾಂತ್ ಗೆ 139,527 ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಹಾಗೇ ರಜನಿಕಾಂತ್ ಅಕೌಂಟ್ ಕೂಡ ವೆರಿಫೈ ಆಗಿದೆ. ಇದು ದಾಖಲೆ ಅಲ್ಲದೇ ಮತ್ತೇನು.?

ಟೀಸರ್: 'ಕಬಾಲಿ'ಗಿಂತ ಜೋರಾಗಿದೆ 'ಕಾಲ'ನ ರೌಡಿಸಂ

ಇನ್ಸ್ಟಾಗ್ರಾಮ್ ಗೆ ಕಾಲಿಟ್ಟ ರಜನಿಕಾಂತ್

'ವಣಕ್ಕಂ.. ವಂದುಟ್ಟೇನ್ ನು ಸೊಲ್ಲು' (ನಮಸ್ಕಾರ.. ಬಂದಿದ್ದೇನೆ ಎಂದು ಹೇಳು) ಎಂದು ಬರೆದುಕೊಂಡು 'ಕಬಾಲಿ' ಚಿತ್ರದ ಒಂದು ಫೋಟೋ ಹಾಕುವ ಮೂಲಕ ಜನಪ್ರಿಯ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಗೂ ರಜನಿಕಾಂತ್ ಕಾಲಿಟ್ಟಿದ್ದಾರೆ.

ರಜನಿಕಾಂತ್ ಸಿನಿಮಾ ಬಗ್ಗೆ ಹೀಗೊಂದು ಅನುಮಾನ ಶುರುವಾಗಿದೆ.!

ಸಾವಿರಾರು ಫಾಲೋವರ್ಸ್

ಇನ್ಸ್ಟಾಗ್ರಾಮ್ ಗೆ ಕಾಲಿಟ್ಟು ಒಂದು ದಿನ ಆಗಿದ್ರೂ, ಹಾಕಿರೋದು ಒಂದೇ ಒಂದು ಪೋಸ್ಟ್ ಆದರೂ, ರಜನಿಕಾಂತ್ ಗೆ ಅದಾಗಲೇ 33 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

English summary
Super Star Rajinikanth has opened his Facebook and Instagram account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada