twitter
    For Quick Alerts
    ALLOW NOTIFICATIONS  
    For Daily Alerts

    ಸೂಪರ್ ಸ್ಟಾರ್ ರಜನಿ ದರ್ಶನಕ್ಕೆ ನೂಕು ನುಗ್ಗಲು

    By ಜೇಮ್ಸ್ ಮಾರ್ಟಿನ್
    |

    ಬೆಂಗಳೂರಿಗೆ ಸೂಪರ್ ಸ್ಟಾರ್ ರಜನಿ ಕಾಂತ್ ಬಂದಿದ್ದಾರೆ. ಅದರಲ್ಲಿ ಏನು ವಿಶೇಷ. ರಜನಿಗೂ ಬೆಂಗಳೂರಿಗೂ ಕಳ್ಳು ಬಳ್ಳಿಯ ಸಂಬಂಧ ಇದೆಯಲ್ಲ ಎನ್ನಬಹುದು. ಈ ಬಾರಿ ರಜನಿ ಬಂದಿರುವುದು ಯಾವುದೇ ಚಿತ್ರದ ಪ್ರಚಾರಕ್ಕಾಗಿ ಅಥವಾ ವಿಹಾರಾರ್ಥವಾಗಿ ಅಲ್ಲ. ವಿಶ್ರಾಂತಿಗಾಗಿ ರಜನಿ ಬೆಂಗಳೂರು ಅವರು ಕಳೆದ ವಾರವೇ ಬಂದಿದ್ದಾರೆ.

    ಬೆಂಗಳೂರಿನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ವಿಶ್ರಾಂತಿ ಗೃಹದಲ್ಲಿ ರಜನಿ ಕಾಂತ್ ಅವರು ಸುಮಾರು 5-6 ದಿನಗಳಿಂದ ನೆಲೆಸಿದ್ದಾರೆ. ಅದರೆ, ರಜನಿ ಕಾಂತ್ ಅಲ್ಲಿ ನೆಲೆಸಿದ್ದ ಬಗ್ಗೆ ಸ್ಥಳೀಯರೂ ಗೊತ್ತಿರಲಿಲ್ಲ. ಬುಧವಾರ ಅಭಿಮಾನಿಗಳಿಗೆ ಹೇಗೂ ರಜನಿ ಇರುವಿಕೆ ಬಗ್ಗೆ ತಿಳಿದು ಬಂದಿದೆ. ತಕ್ಷಣವೇ ಅಭಿಮಾನಿಗಳು ರಜನಿ ಮನೆ ಮುಂದೆ ಜಮಾಯಿಸಿದ್ದಾರೆ.[ರಜನಿ ಬಗ್ಗೆ ನಿಮಗೆ ತಿಳಿಯದ 10 ಸಂಗತಿ]

    ಅಭಿಮಾನಿಗಳ ಒತ್ತಡಕ್ಕೆ ಮಣಿದ ರಜನಿ ಕಾಂತ್ ಅವರು ಮನೆಯ ಬಾಲ್ಕನಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳತ್ತ ಕೈ ಬೀಸಿದರು. ರಜನಿ ಕಂಡ ಕೂಡಲೇ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ರಜನಿ ಚಿತ್ರದ ಹಾಡುಗಳನ್ನು ಹಾಡುತ್ತಾ, ತಲೈವಾ, ಅಣ್ಣಾಚಿ, ಕಡವುಳೆ ಎಂದು ಕರೆಯುತ್ತಾ ನೀನೆ ದೈವ, ನೀನೇ ಅಣ್ಣ, ನೀನೆ ನಮಗೆ ದಿಕ್ಕು ಎಂದು ಸಂಭ್ರಮದಿಂದ ಬಾಲ್ಕನಿಯತ್ತ ಕೈ ಚಾಚಿ ಅಭಿಮಾನಿಗಳು ನೆಚ್ಚಿನ ತಾರೆಯನ್ನು ಕಂಡು ಪುನೀತರಾದರು.[ಕೊಚಾಡಿಯನ್ ಟೀಸರ್ ಸೂಪರ್ !]

    ರಜನಿ ಬಂದಿದ್ದು ವಿಶ್ರಾಂತಿ ಪಡೆಯಲು ಮಾತ್ರ

    ರಜನಿ ಬಂದಿದ್ದು ವಿಶ್ರಾಂತಿ ಪಡೆಯಲು ಮಾತ್ರ

    ಈಗಷ್ಟೇ ಕೋಚಾಡಿಯನ್ ಚಿತ್ರವನ್ನು ಮುಗಿಸಿ ಬಂದಿರುವ ರಜನಿಕಾಂತ್ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ರಜನಿ ಆರೋಗ್ಯದಲ್ಲಿ ಆಗಾಗ ಏರುಪೇರು ಕಂಡು ಬರುತ್ತಲೇ ಇದೆ. ಈ ಹಿಂದೆ ರಜನಿಕಾಂತ್ ಅನಾರೋಗ್ಯದ ನಿಮಿತ್ತ ಸಿಂಗಪುರದ ಮೌಂಟ್ ಎಲಿಜಬೇತ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಸಿಂಗಪುರದಲ್ಲಿ ಆರು ವಾರಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರಿಗೆ ಒಂದು ತಿಂಗಳ ಕಾಲ ವಿಶ್ರಾಂತಿ ಕೂಡಾ ಸೂಚಿಸಲಾಗಿತ್ತು. ಆದರೆ, ಆಗ ವಿಶ್ರಾಂತಿ ಸರಿಯಾಗಿ ಪಡೆದ ಸ್ಟಾರ್ ಗೆ ಮತ್ತೆ ಮತ್ತೆ ಅನಾರೋಗ್ಯ ಕಾಡುತ್ತಿದೆ.

    ಮಾರುವೇಷದಲ್ಲಿ ಬರುವ ರಜನಿಕಾಂತ್

    ಮಾರುವೇಷದಲ್ಲಿ ಬರುವ ರಜನಿಕಾಂತ್

    ರಜನಿಕಾಂತ್ ಬೆಂಗಳೂರಿಗೆ ಬಂದು ಹೋಗುವ ಕಥೆ ಕೇಳಿದರೆ ಒಂದು ಒಳ್ಳೆ ಸಿನಿಮಾ ಸ್ಕ್ರಿಪ್ಟ್ ಆಗುತ್ತದೆ. ಆಪ್ತ ಮಿತ್ರ ಬಹಾದ್ದೂರ್ ಜತೆಗೂಡಿ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ರಜನಿ ಸುತ್ತಾಡಿದ ಪ್ರಸಂಗಗಳು ನಡೆದಿವೆ. ಮಾಧ್ಯಮಗಳಿಗೆ ರಜನಿ ಬಂದು ಹೋದ ಮೇಲಷ್ಟೇ ಸುದ್ದಿ ತಿಳಿಯುತ್ತದೆ.

    ಬೆಂಗಳೂರಿಗೆ ಬಂದ ರಜನಿ ವಿದ್ಯಾರ್ಥಿ ಭವನ ದೋಸೆ, ಗವಿಪುರಂನ ಹಳೆ ಮನೆ, ಶಾಲೆ ನೋಡದೇ ಹೋಗುವುದಿಲ್ಲ. ಈಗಂತೂ ಗಾಲ್ಫ್ ಕೋರ್ಸ್ ರಸ್ತೆಯಲ್ಲಿನ ಅಪಾರ್ಟ್ಮೆಂಟ್ ರಜನಿ ಅವರ ಖಾಯಂ ನಿವಾಸವಾಗಿದೆ. ಗೆಳೆಯರೊಡನೆ ಸೇರಿ ರಾಘವೇಂದ್ರ ಸ್ವಾಮಿ ಮಠಕ್ಕೂ ರಜನಿ ಭೇಟಿ ಕೊಡುತ್ತಾರೆ

    ಮಾಧ್ಯಮಗಳ ಜತೆ ಸಂವಾದಕ್ಕೆ ರಜನಿ ನಿರಾಕರಣೆ

    ಮಾಧ್ಯಮಗಳ ಜತೆ ಸಂವಾದಕ್ಕೆ ರಜನಿ ನಿರಾಕರಣೆ

    ಅಭಿಮಾನಿಗಳ ಒತ್ತಡಕ್ಕೆ ಮಣಿದು ಮನೆಯಿಂದ ಹೊರಕ್ಕೆ ಕಾಣಿಸಿಕೊಂಡ ರಜನಿ ಅವರ ಬೆನ್ನು ಹತ್ತಿದ್ದ ಕನ್ನಡ ಖಾಸಗಿ ಸುದ್ದಿ ವಾಹಿನಿಯ ಮಾಧ್ಯಮ ಮಿತ್ರರಿಗೆ ರಜನಿ ಅವರೊಟ್ಟಿಗೆ ಮಾತನಾಡುವ ಅವಕಾಶ ಸಿಗಲೇ ಇಲ್ಲ.

    ದಯವಿಟ್ಟು ಬೇಡ, ಪ್ಲೀಸ್ ಹೊರಡಿ ಎಂದು ರಜನಿ ಎಲ್ಲರಿಗೂ ಕೈ ಮುಗಿಯುತ್ತಿದ್ದಂತೆ ರಜನಿ ಅವರ ರಕ್ಷಣಾ ಸಿಬ್ಬಂದಿಗಳು ಸೌಜನ್ಯ ಪೂರ್ವಕವಾಗಿ ಮಾಧ್ಯಮದವರನ್ನು ಹೊರಕ್ಕೆ ಕಳಿಸಿದ್ದಾರೆ. ಇತ್ತ ರಸ್ತೆಯಲ್ಲಿ ಅಭಿಮಾನಿಗಳು ರಜನಿಯನ್ನು ಕಣ್ತುಂಬ ನೋಡಲು ಊಟ ತಿಂಡಿ ಬಿಟ್ಟು ನಿಂತಿದ್ದಾರೆ.
    ಇಲ್ಲಿರುವ ಚಿತ್ರ:
    ಕಳೆದ ಬಾರಿ ಬೆಂಗಳೂರಿಗೆ ಬಂದಾಗ ತೆಗೆದಿದ್ದು

    ರಜನಿ ನನ್ನ ಮಗುವಿಗೆ ಹೆಸರಿಡುವ ತನಕ ಹೋಗಲಾರೆ

    ರಜನಿ ನನ್ನ ಮಗುವಿಗೆ ಹೆಸರಿಡುವ ತನಕ ಹೋಗಲಾರೆ

    ಆರು ತಿಂಗಳ ಕೂಸನ್ನು ಎತ್ತಿಕೊಂಡು ಬಂದಿರುವ ಮಹಿಳಾ ಅಭಿಮಾನಿಯೊಬ್ಬರು ರಜನಿ ಅಣ್ಣ ನನ್ನ ಮಗುವಿಗೆ ನಾಮಕರಣ ಮಾಡಬೇಕು. ಇದು ನಮ್ಮ ಆಸೆ. ಅವರು ಹೆಸರಿಡುವ ತನಕ ನಾನು ಕದಲುವುದಿಲ್ಲ ಎಂದಿದ್ದಾರೆ. ಈ ನಡುವೆ ಅಭಿಮಾನಿಗಳು ಸಾಗರೋಪಾದಿಯಾಗಿ ಹರಿದು ಬರುತ್ತಿರುವುದರಿಂದ ಸಂಚಾರ ದಟ್ಟಣೆ ಅಧಿಕವಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.

    ಡಬ್ಬಿಂಗ್ ಬಗ್ಗೆ ರಜನಿಕಾಂತ್ ನಿಲುವೇನು?

    ಡಬ್ಬಿಂಗ್ ಬಗ್ಗೆ ರಜನಿಕಾಂತ್ ನಿಲುವೇನು?

    ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಪರ -ವಿರೋಧ ನಿಂತಿರುವ ಎರಡು ಬಣಕ್ಕೂ ಆಪ್ತರಾಗಿರುವ ರಜನಿ ಕಾಂತ್ ಅವರು ಈಗ ಪಕ್ಕದ ರಾಜ್ಯದ ಅವಿಭಾಜ್ಯ ಅಂಗವಾಗಿದ್ದಾರೆ. ಈ ನಡುವೆ ಡಬ್ಬಿಂಗ್ ಬಗ್ಗೆ ರಜನಿ ಏನು ಹೇಳುತ್ತಾರೆ ಎಂಬುದರ ಬಗ್ಗೆ ಸಹಜ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.

    ರಜನಿ ಆಪ್ತ ನಟ ಅಂಬರೀಷ್ ಕೂಡಾ ರಜನಿ ಹಾಗೂ ಕನ್ನಡ ಚಿತ್ರರಂಗದ ಒಡನಾಟದ ಬಗ್ಗೆ ಮಾತನಾಡಿದರೆ ಹೊರತೂ ಡಬ್ಬಿಂಗ್ ಬಗ್ಗೆ ನಿಲುವು ಸ್ಪಷ್ಟಪಡಿಸಿಲ್ಲ. ಈ ಹಿಂದೆ ತಮಿಳು ಚಿತ್ರೋದ್ಯಮ ಬಂದ್ ನಡೆಸಿದ್ದಾಗ ರಜನಿ ಪೂರ್ಣ ಬೆಂಬಲ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

    English summary
    Rajinikanth's connection with Karnataka is well-known as he was brought up in Bangalore. Before he decided to take up acting career.Rajini often visits Bangalore in disguise. he meets his friends at his flat near the Golf Course and also visits Raghavendra Mutt with them. It is only in the recent years his visits have been leaked to media from his close aides
    Thursday, January 30, 2014, 13:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X