»   » ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್

Posted By:
Subscribe to Filmibeat Kannada
ರಜಿನಿಕಾಂತ್ ತಮ್ಮ ರಾಜಕೀಯ ಪ್ರವೇಶವನ್ನ ಖಚಿತಪಡಿಸಿದ್ದಾರೆ | Filmibeat Kananda

ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶವನ್ನು ಬಹಿರಂಗ ಪಡಿಸಿದ್ದಾರೆ. ರಜನಿ ರಿಯಲ್ ರಾಜಕೀಯಕ್ಕೆ ಬರುತ್ತಾರಾ.. ಇಲ್ವಾ.. ಎನ್ನುವ ಕುತೂಹಲಕ್ಕೆ ಅಂತು ಈಗ ಉತ್ತರ ಸಿಕ್ಕಿದೆ.

ಇಂದು (ಡಿಸೆಂಬರ್ 31) ಚೆನ್ನೈನಲ್ಲಿರುವ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ ರಜಿನಿ ರಾಜಕೀಯಕ್ಕೆ ಬರುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ತಾವು ಹೊಸ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡುವ ಬಗ್ಗೆ ಹೇಳಿದ್ದಾರೆ.

Superstar Rajinikanth confirms his entry into politics

ಈ ಹಿಂದೆ ಮೇ ತಿಂಗಳಿನಲ್ಲಿ ರಾಜಕೀಯದ ಬಗ್ಗೆ ಹೇಳಿಕೊಂಡಿದ್ದ ರಜನಿ ಆ ನಂತರ ಮೌನವಾಗಿದ್ದರು. ಡಿಸೆಂಬರ್ 12ಕ್ಕೆ ರಜಿನಿ ಹುಟ್ಟುಹಬ್ಬ ಇದ್ದು ಈ ವೇಳೆ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಹುಟ್ಟುಹಬ್ಬದ ಆಚರಣೆಯಿಂದ ದೂರ ಉಳಿದ ರಜನಿ ಇಂದು ರಾಜಕೀಯಕ್ಕೆ ಬರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.

''ದೇವರ ಆಶೀರ್ವಾದ ಮತ್ತು ಅಭಿಮಾನಿಗಳ ಬೆಂಬಲ ಎರಡು ಇದ್ದರೆ ನಾನು ಏನ್ನನ್ನೂ ಬೇಕಾದರೂ ಸಾಧಿಸಬಹುದು. ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಹೊಸ ಪಕ್ಷವನ್ನು ಘೋಷಣೆ ಮಾಡುತ್ತೇನೆ. ಈಗಿನ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ. ತಮಿಳುನಾಡಿನ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ'' ಎಂದು ಈ ಕಾರ್ಯಕ್ರಮದಲ್ಲಿ ರಜನಿಕಾಂತ್ ಹೇಳಿದ್ದಾರೆ.

English summary
In next assembly elections I will form a party and will contest all constituencies in Tamil Nadu : #Rajinikanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X