»   » ಶಿವಣ್ಣನಿಗೆ ಫಿಟ್ ಆಗಿ ಎಂದು ಹಾರೈಸಿದ ತಮಿಳು ಸೂಪರ್ ಸ್ಟಾರ್

ಶಿವಣ್ಣನಿಗೆ ಫಿಟ್ ಆಗಿ ಎಂದು ಹಾರೈಸಿದ ತಮಿಳು ಸೂಪರ್ ಸ್ಟಾರ್

Posted By:
Subscribe to Filmibeat Kannada

ನಟ ಸಾರ್ವ ಭೌಮ ಅವರ ಹಿರಿಯ ಪುತ್ರ ಶಿವರಾಜ್ ಕುಮಾರ್ ಅಂದರೆ ಗಾಂಧಿನಗರದ ಶಿವಣ್ಣ ಅಭಿಮಾನಿಗಳಿಗೆ ಒಂಥರಾ ಪ್ರೀತಿ ಗೌರವ ಇದ್ದೇ ಇದೆ. ಜೊತೆಗೆ ಶಿವಣ್ಣ ಅವರದು ಸಿಂಪಲ್ ಹಾಗೂ ಡೌನ್ ಟು ಅರ್ಥ್ ನೇಚರ್.

ಅಂದಹಾಗೆ ಡಾ.ರಾಜ್ ಕುಮಾರ್ ಕುಡಿ ಶಿವಣ್ಣ ಅವರು ಅಸ್ವಸ್ಥಗೊಂಡು ಮಂಗಳವಾರದಂದು (ಅಕ್ಟೋಬರ್ 6) ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆಗೆ ಸ್ಪಂದಿಸಿರುವ ಶಿವಣ್ಣ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.[ಮಲ್ಯ ಆಸ್ಪತ್ರೆಯಿಂದ 'ಮನಮೋಹಕ' ಶಿವಣ್ಣ ಮನೆಗೆ]

Superstar Rajinikanth's Concern For Hatrik Hero Shivarajkumar

ಇಂದು (ಅಕ್ಟೋಬರ್ 8) ಬೆಳಿಗ್ಗೆ 11.30ಕ್ಕೆ ನಟ ಶಿವರಾಜ್ ಕುಮಾರ್ ಅವರು ಬೆಂಗಳೂರಿನ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ರಾಜ್ ಕಮಾರ್ ಅವರು ಅಸ್ವಸ್ಥಗೊಂಡ ಸುದ್ದಿ ತಿಳಿದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ದೂರವಾಣಿ ಕರೆ ಮಾಡುವ ಮೂಲಕ ಶಿವಣ್ಣ ಅವರ ಆರೋಗ್ಯದ ಬಗ್ಗೆ ವಿಚಾರಿಸಿ, ನೀವು ಬೇಗನೇ ಫಿಟ್ ಅಂಡ್ ಫೈನ್ ಆಗಿ ಎಂದು ಹಾರೈಸಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ಹರಡುತ್ತಿದ್ದಂತೆ, ಅಭಿಮಾನಿಗಳು ಮಲ್ಯ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿ ತಮ್ಮ ಪ್ರೀತಿ-ಅಭಿಮಾನವನ್ನು ವ್ಯಕ್ತಪಡಿಸಿದರು. ಜೊತೆಗೆ ಶಿವಣ್ಣ ಅವರ ಆರೋಗ್ಯ ಬೇಗ ಸುಧಾರಿಸಲಿ ಎಂದು ದೇವರಿಗೆ ಪೂಜೆ ಸಲ್ಲಿಸಿದ್ದರು.['ವಜ್ರಕಾಯ' ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ]

ಅಲ್ಲದೇ ಇಂದು ಶಿವಣ್ಣ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಂದರ್ಭದಲ್ಲೂ, ಆಸ್ಪತ್ರೆಯ ಆವರಣದಲ್ಲಿ ಅಭಿಮಾನಿಗಳು ಶಿವರಾಜ್ ಕುಮಾರ್ ಅವರ ಮೇಲೆ ಹೂವಿನ ಮಳೆಗರೆವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಸ್ಯಾಂಡಲ್ ವುಡ್ ನ ಎಲ್ಲಾ ಸ್ಟಾರ್ ಗಳು ಹಾಗೂ ರಾಜಕೀಯ ನಾಯಕರುಗಳು ಮಲ್ಯ ಆಸ್ಪತ್ರೆಗೆ ಧಾವಿಸಿ ಶಿವಣ್ಣ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.

    English summary
    According to the sources, Tamil Superstar Rajinikanth. The versatile actor has given a telecall to Htrick Hero to make sure he is doing well and he has given his heartfelt regards and wishes for a healthy recovery. Now Shiva Rajkumar discharged from Mallya Hospital at 11.30 Am on Thursday (October 8). Shivarajkumar has suffered a mild heart attack and has been admitted to Mallya Hospital, Bengaluru On Tuesday (October 6th).
    Please Wait while comments are loading...

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada