For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಅವರ 159ನೇ ಚಿತ್ರದ ಟೈಟಲ್ ಘೋಷಣೆ

  By ಸೋನು ಗೌಡ
  |

  ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಲಿಂಗಾ' ಚಿತ್ರದ ಸೋಲಿನ ನಂತರ ಮತ್ತೆ 'ಕಬಲಿ' ಎಂಬ ಚಿತ್ರದ ಮೂಲಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಕಾಲಿವುಡ್ ಕ್ಷೇತ್ರಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

  ಈ ಮೊದಲು 'ಕಾಳಿ' ನಂತರ 'ಕನ್ನಭೀರನ್' ಅಂತೆಲ್ಲ ಟೈಟಲ್ ಇಟ್ಟುಕೊಂಡಿದ್ದ ನಿರ್ದೇಶಕ ಪ.ರಂಜಿತ್ ಅವರು ಕೊನೆಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರ 159ನೇ ಚಿತ್ರಕ್ಕೆ 'ಕಬಲಿ' ಅಂತ ಟೈಟಲ್ ಫೈನಲ್ ಮಾಡಿದ್ದಾರೆ. ಚಿತ್ರ ಸದ್ಯದಲ್ಲೇ ಸೆಟ್ಟೇರಲಿದ್ದು, ಮುಂದಿನ ತಿಂಗಳಲ್ಲಿ ಮಲೇಶಿಯಾದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.

  ಈ ಮೊದಲು ಸೂಪರ್ ಸ್ಟಾರ್ ಚಿತ್ರಕ್ಕೆ ಯಾವ ಟೈಟಲ್ ಕೊಡಬಹುದು ಅನ್ನುವ ಗೊಂದಲದಲ್ಲಿದ್ದ ನಿರ್ದೇಶಕ ಪ.ರಂಜಿತ್ ಅವರು ಕೊನೆಗೂ ಚಿತ್ರಕ್ಕೆ 'ಕಬಲಿ' ಅನ್ನೋ ಟೈಟಲ್ ಫೈನಲ್ ಮಾಡಿದ ಖುಷಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  ಚಿತ್ರದಲ್ಲಿ ರಜನಿಕಾಂತ್ ಅವರಿಗೆ ನಾಯಕಿಯಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿರುವ 'ಅಹಲ್ಯೆ' ಖ್ಯಾತಿಯ ರಾಧಿಕಾ ಆಪ್ಟೆ ಇದೇ ಮೊದಲ ಬಾರಿಗೆ ಸೂಪರ್ ಸ್ಟಾರ್ ಜೊತೆ ಮಿಂಚಲಿದ್ದಾರೆ.

  ಇನ್ನೂ ಸೂಪರ್ ಸ್ಟಾರ್ 159 ನೇ ಚಿತ್ರದ ಟೈಟಲ್ ನಲ್ಲಿ ಗೊಂದಲ ಉಂಟಾಗಲು ಕಾರಣವಾದ ಕೆಲವಾರು ಕಾರಣಗಳನ್ನು ತಿಳಿದುಕೊಳ್ಳಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

  'ಕಾಳಿ' ನೋ ಎಂದ ಸೂಪರ್ ಸ್ಟಾರ್

  'ಕಾಳಿ' ನೋ ಎಂದ ಸೂಪರ್ ಸ್ಟಾರ್

  ನಿರ್ದೇಶಕ ಪ.ರಂಜಿತ್ ಅವರು ಈ ಮೊದಲು ಚಿತ್ರಕ್ಕೆ 'ಕಾಳಿ' ಎಂದು ಟೈಟಲ್ ಕೊಟ್ಟಾಗ ಸ್ವತಃ ಸೂಪರ್ ಸ್ಟಾರ್ ಅವರೇ ನೋ ಎಂದರಂತೆ. ಕಾರಣ ಇಷ್ಟೆ ಇಂತಿಪ್ಪ 'ಕಾಳಿ' ಎನ್ನುವ ಟೈಟಲ್ ನಲ್ಲಿ ಈ ಮೊದಲೇ ರಜನಿಕಾಂತ್ ನಟಿಸಿದ್ದು, ಮತ್ತೆ ಅದೇ ಹೆಸರಿನಲ್ಲಿ ಬೇಡ ಅಂದರಂತೆ.

  'ಕನ್ನಬೀರನ್' ನಿರ್ದೇಶಕ ಅಮೀರ್ ಟೈಟಲ್

  'ಕನ್ನಬೀರನ್' ನಿರ್ದೇಶಕ ಅಮೀರ್ ಟೈಟಲ್

  ಅಂದಹಾಗೆ ಮೂಲಗಳ ಪ್ರಕಾರ ನಿರ್ದೇಶಕ ಅಮೀರ್ ಅವರು 'ಕನ್ನಬೀರನ್' ಅನ್ನುವ ಟೈಟಲ್ ಅನ್ನು ಈ ಮೊದಲೇ ರಿಜಿಸ್ಟರ್ ಮಾಡಿದ್ದರಂತೆ, ಮಾತ್ರವಲ್ಲದೇ ಅಮೀರ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಮುಂದಿನ ಚಿತ್ರ ಮಾಡುವುದಾದರೆ 'ಕನ್ನಬೀರನ್' ಅಂತ ಟೈಟಲ್ ಕೊಡುವುದಾಗಿ ರಜನಿಕಾಂತ್ ಜೊತೆ ಮಾತುಕತೆ ನಡೆಸಿ ಅವರ ಅನುಮತಿ ಕೂಡ ಪಡೆದಿದ್ದರಂತೆ.

  ದೇವರ ಹೆಸರಿಗೂ ಸಿನಿಮಾಗಳಿಗೂ ಇರುವ ನಂಟು

  ದೇವರ ಹೆಸರಿಗೂ ಸಿನಿಮಾಗಳಿಗೂ ಇರುವ ನಂಟು

  ಅಂದಹಾಗೆ 'ಕಾಳಿ', 'ಕಬಲಿ', 'ಕನ್ನಬೀರನ್', ಈ ಎಲ್ಲಾ ಹೆಸರುಗಳು ಹಿಂದು ಸಂಪ್ರದಾಯಸ್ಥರು ಆರಾಧಿಸುವ ದೇವರ ಹೆಸರುಗಳು 'ಕಾಳಿ' ಅಂದ್ರೆ ದೇವತೆ, ಕನ್ನಬಿರನ್, ಅಂದ್ರೆ ಕೃಷ್ಣನ ಇನ್ನೊಂದು ಹೆಸರು ಮತ್ತು 'ಕಬಲಿ' ಕಬಲೀಶ್ವರ ಅಂದ್ರೆ ಶಿವ ಅಂತ ಉಲ್ಲೇಖಿಸಲ್ಪಡುತ್ತದೆ.

  ಪಾತ್ರವರ್ಗ ಅಂತಿಮಗೊಳಿಸಿದ ನಿರ್ದೇಶಕ ರಂಜಿತ್

  ಪಾತ್ರವರ್ಗ ಅಂತಿಮಗೊಳಿಸಿದ ನಿರ್ದೇಶಕ ರಂಜಿತ್

  ಲೇಟೆಸ್ಟ್ ಆಡಿಷನ್ ನಲ್ಲಿ ಆಯ್ಕೆಯಾದ ನಟಿ ಧನಿಷ್ಕಾ, ಪ್ರಕಾಶ್ ರಾಜ್, ರಾಧಿಕಾ ಆಪ್ಟೆ, 'ಮದ್ರಾಸ್' ಚಿತ್ರದ ಖ್ಯಾತಿಯ ಕಾಲೈಯರಸನ್ ಹಾಗೂ 'ಕುಕ್ಕೂ' ಚಿತ್ರದ ಖ್ಯಾತಿಯ ದಿನೇಶ್ ಮುಂತಾದವರು 'ಕಬಲಿ' ಯಲ್ಲಿ ಮಿಂಚಲಿದ್ದಾರೆ.

  ಕನಿಷ್ಟ ಕಾಲಾವಧಿಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭ

  ಕನಿಷ್ಟ ಕಾಲಾವಧಿಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭ

  ಕೇವಲ 60 ದಿನಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದ್ದು, ಸೂಪರ್ ಸ್ಟಾರ್ 'ಕಬಲಿ' ಲೋ ಬಜೆಟ್ ನಲ್ಲಿ ತಯಾರಾಗುತ್ತಿರುವ ಚಿತ್ರವಾಗಿದೆ.

  ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಸೂಪರ್ ಸ್ಟಾರ್

  ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಸೂಪರ್ ಸ್ಟಾರ್

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಪಟ್ಟ ಗಳಿಸಿಕೊಂಡು ಸತತವಾಗಿ 40 ವರ್ಷಗಳನ್ನು ಪೂರೈಸಿದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

  English summary
  Tamil Director Pa. Ranjith has confirmed that his upcoming Tamil film with superstar Rajinikanth is titled “Kabali”. Earlier it was 'Kaali' and then 'Kannabhiran' for a brief while and now it is 'Kabali'. If you are wondering what I'm talking about, these were the speculated titles of Superstar Rajinikanth's upcoming film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X