For Quick Alerts
  ALLOW NOTIFICATIONS  
  For Daily Alerts

  ಸುಪ್ರೀಂ ಕೋರ್ಟ್ ನಿಂದಲೂ 'ಕಾಲಾ' ಬಿಡುಗಡೆಗೆ ಗ್ರೀನ್ ಸಿಗ್ನಲ್

  By Bharath Kumar
  |

  ಶತಾಯಗತಾಯ 'ಕಾಲಾ' ಸಿನಿಮಾವನ್ನ ಕರ್ನಾಟಕದಲ್ಲಿ ನಿಲ್ಲಿಸಲೇಬೇಕು ಎಂದು ಕನ್ನಡ ಪರ ಸಂಘಟನೆಗಳು ಪಣ ತೊಟ್ಟಿದೆ. ಆದ್ರೆ, ಮೇಲಿಂದ ಮೇಲೆ ಎಂಬಂತೆ ನ್ಯಾಯಾಲಯದಲ್ಲಿ 'ಕಾಲಾ' ಪರವಾಗಿ ಆದೇಶ ಬರ್ತಿದೆ.

  ನಿನ್ನೆಯಷ್ಟೇ ಕರ್ನಾಟಕ ಹೈಕೋರ್ಟ್ 'ಕಾಲಾ' ಚಿತ್ರವನ್ನ ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ಸೂಕ್ತ ಭದ್ರತೆ ನೀಡಬೇಕು ಎಂದು ಸೂಚನೆ ನೀಡಿತ್ತು. ಇದೀಗ, ಸುಪ್ರೀಂ ಕೋರ್ಟ್ ನಲ್ಲಿ ತಮಿಳು ನಿರ್ಮಾಪಕರೊಬ್ಬರು 'ಕಾಲಾ' ಚಿತ್ರಕ್ಕೆ ತಡೆ ಕೋರಿ ಸಲ್ಲಿಸಿದ್ದ 'ಅರ್ಜಿ ತಿರಸ್ಕೃತವಾಗಿದ್ದು, ಸಿನಿಮಾ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ರಜನಿಕಾಂತ್ ಗೆ ಬಿಗ್ ರಿಲೀಫ್ ಸಿಕ್ಕಿದೆ.

  ಕನ್ನಡದಲ್ಲೇ ಮಾತನಾಡಿದ ರಜನಿ : 'ಕಾಲಾ' ಬಿಡುಗಡೆಗೆ ಮನವಿಕನ್ನಡದಲ್ಲೇ ಮಾತನಾಡಿದ ರಜನಿ : 'ಕಾಲಾ' ಬಿಡುಗಡೆಗೆ ಮನವಿ

  'ಕಾಲಾ' ಚಿತ್ರದ ವಿರುದ್ಧ ಕಾಪಿರೈಟ್ ದೂರು ದಾಖಲಾಗಿತ್ತು. ಚಿತ್ರದಲ್ಲಿ ಕಥೆ, ಸನ್ನಿವೇಶಗಳು ಮತ್ತು ಹಾಡನ್ನ ಕೂಡ ಒಪ್ಪಿಗೆ ಇಲ್ಲದೇ ಬಳಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದೆಂದು ನಿರ್ಮಾರೊಬ್ಬರು ಮನವಿ ಮಾಡಿದ್ದರು. ಆದ್ರೆ, ಕೋರ್ಟ್ ಈ ಅರ್ಜಿಯನ್ನ ತಿರಸ್ಕರಿಸಿದ್ದು, ತಡೆ ನೀಡಲು ಸಾಧ್ಯವಿಲ್ಲ ಎಂದಿದೆ.

  ಮತ್ತೊಂದೆಡೆ ಸೂಪರ್ ಸ್ಟಾರ್ ರಜನಿಕಾಂತ್ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿಕೊಟ್ಟಿದ್ದಾರೆ. ''ಸುಪ್ರೀಂ ಕೋರ್ಟ್ ಏನು ಹೇಳಿತ್ತು ಅದನ್ನೇ ನಾನು ಹೇಳಿದ್ದೇನೆ. ಯಾರೆಲ್ಲಾ ಸಿನಿಮಾವನ್ನ ನೋಡಬೇಕು ಅಂತಿದ್ದಾರೋ ಅದಕ್ಕೆ ಅವಕಾಶ ಮಾಡಿಕೊಡಿ. ಸಿನಿಮಾ ಬಿಡುಗಡೆ ಮಾಡಲು ಯಾವುದೇ ತೊಂದರೆ ಕೊಡಬೇಡಿ ಎಂದು ನಾನು ನಮ್ರತೆಯಿಂದ ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.

  ಇನ್ನು ಕರ್ನಾಟಕದಲ್ಲಿ ಈಗಾಗಲೇ ವಿತರಕರು 'ಕಾಲಾ' ಚಿತ್ರವನ್ನ ಬಿಡುಗಡೆ ಮಾಡಲು ಮುಂದಾಗಿದ್ದು, ಸುಮಾರು 100 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಕರ್ನಾಟಕ ಸರ್ಕಾರಕ್ಕೆ ವಿವರಣೆ ನೀಡಲಿದೆ.

  ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ವಿರುದ್ಧವಾಗಿ ನಟ ರಜನಿಕಾಂತ್ ನೀಡಿದ್ದರು ಎಂಬ ಕಾರಣಕ್ಕೆ ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಈ ಚಿತ್ರವನ್ನ ಬಿಡುಗಡೆ ಮಾಡದಂತೆ ವಿರೋಧ ವ್ಯಕ್ತಪಡಿಸಿವೆ.

  English summary
  Big relief for Rajinikanth’s starrer Kaala, ‘Kaala’ to hit screens tomorrow (june 7th), supreme court refuses to stall ‘Kaala’ release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X