»   » ಡಬ್ಬಿಂಗ್ ವಿರೋಧಿ ಹೋರಾಟಗಾರರ ಕೊನೆಯ ದಾರಿಯೂ ಬಂದ್.!

ಡಬ್ಬಿಂಗ್ ವಿರೋಧಿ ಹೋರಾಟಗಾರರ ಕೊನೆಯ ದಾರಿಯೂ ಬಂದ್.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧಿಸಿದ ಹಿನ್ನೆಲೆ ಭಾರತದ ಸ್ಪರ್ದಾತ್ಮಕ ಆಯೋಗ (ಸಿಸಿಐ) ಕರ್ನಾಟಕ ವಾಣಿಜ್ಯ ಮಂಡಳಿ ಹಾಗೂ ಕನ್ನಡ ಪರ ಹೋರಾಟಗಾರರಿಗೆ ನೋಟಿಸ್ ನೀಡಿತ್ತು. ಅದರ ಜೊತೆ ಫಿಲ್ಮ್ ಚೇಂಬರ್ ಗೆ 16 ಲಕ್ಷ ದಂಡ ವಿಧಿಸಿತ್ತು.

ಸಿಸಿಐ ಆದೇಶವನ್ನ ಪ್ರಶ್ನಿಸಿ ಚಲನಚಿತ್ರ ವಾಣಿಜ್ಯ ಮಂಡಳಿ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಡಬ್ಬಿಂಗ್ ವಿರೋಧಿ ಹೋರಾಟಗಾರರ ಅರ್ಜಿಯನ್ನ ತಿರಸ್ಕರಿಸಿದೆ.

ಹಾಗಿದ್ರೆ, ಮುಂದೇನು? ಎಂಬ ಪ್ರಶ್ನೆ ಈಗ ಡಬ್ಬಿಂಗ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.....

ಡಬ್ಬಿಂಗ್ ಸಿನಿಮಾಗಳಿಗೆ ನೋ ಪ್ರಾಬ್ಲಂ.!

ಸುಪ್ರೀಂ ಕೋರ್ಟ್ ನಲ್ಲೂ ಡಬ್ಬಿಂಗ್ ವಿರೋಧಿ ಹೋರಾಟಗಾರರಿಗೆ ಹಿನ್ನಡೆಯಾಗಿರುವುದರಿಂದ ಡಬ್ಬಿಂಗ್ ಸಿನಿಮಾಗಳಿಗೆ ಈಗ ಯಾವುದೇ ಭಯ ಮತ್ತು ಆತಂಕ ಇಲ್ಲ. ಯಾವುದೇ ಅಡೆ ತಡೆ ಇಲ್ಲದೇ ಚಿತ್ರಮಂದಿರಕ್ಕೆ ಬರಬಹುದಾಗಿದೆ.

ಕನ್ನಡ ಚಿತ್ರರಂಗದ ವಿರುದ್ಧ ಕೆರಳಿದ ಕನ್ನಡ ಗ್ರಾಹಕರ ಕೂಟ: ಟ್ವಿಟ್ಟರ್ ನಲ್ಲಿ ಕನ್ನಡ ದ್ರೋಹ ಅಭಿಯಾನ

ವಾಣಿಜ್ಯ ಮಂಡಳಿಯ ನಡೆ ಏನು?

ಪರೋಕ್ಷವಾಗಿ ಡಬ್ಬಿಂಗ್ ಸಂಸ್ಕೃತಿಯನ್ನ ವಿರೋಧಿಸಿರುವ ವಾಣಿಜ್ಯ ಮಂಡಳಿಯ ಡಬ್ಬಿಂಗ್ ಸಿನಿಮಾಗಳು ತೆರೆಕಂಡ್ರೆ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಕೂಡ ಈಗ ಕಾಡುತ್ತಿದೆ.

'ಸತ್ಯದೇವ್' ನಂತರ 'ಧೀರ': ಮತ್ತೊಂದು ಡಬ್ಬಿಂಗ್ ಸಿನಿಮಾ ರಿಲೀಸ್.!

ಹೋರಾಟಗಾರರಿಗೂ ಆತಂಕ.!

ಇನ್ನು ಡಬ್ಬಿಂಗ್ ವಿರುದ್ಧ ಹೋರಾಟ ಮಾಡಿದ್ದಕ್ಕೆ ನಟ ಜಗ್ಗೇಶ್, ವಾಟಳ್ ನಾಗರಾಜ್, ಸಾರಾ ಗೋವಿಂದು ಸೇರಿದಂತೆ ಹಲವರಿಗೆ ಸಿಸಿಐ ನೋಟಿಸ್ ನೀಡಿತ್ತು. ಈಗ ಸುಪ್ರೀಂ ಕೋರ್ಟ್ ನಲ್ಲಿ ಸಿಸಿಐ ಆದೇಶ ಎತ್ತಿಹಿಡಿಯಲಾಗಿದೆ. ಹೀಗಾಗಿ, ಹೋರಾಟಗಾರರ ಮುಂದಿನ ನಡೆ ಏನಿರಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

ಡಬ್ಬಿಂಗ್ ಬೇಡ ಅಂತಾರೆ, ಪರಭಾಷೆ ಸಿನಿಮಾ ಬೆಂಬಲಿಸ್ತಾರೆ: ಇದು ಕನ್ನಡ ದ್ರೋಹ ಅಲ್ಲವೇ?

'ಧೀರ' ಬಿಡುಗಡೆಗೆ ರೆಡಿ

ಇನ್ನು 'ಸತ್ಯದೇವ್ ಐಪಿಎಸ್' ಚಿತ್ರದ ನಂತರ ಈಗ ಮತ್ತೊಂದು ತಮಿಳು ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗಿ ಬಿಡುಗಡೆಯಾಗಲು ಸಜ್ಜಾಗಿದೆ. ಈಗಾಗಲೇ 'ಧೀರ' ಚಿತ್ರದ ಟ್ರೈಲರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು, ಸದ್ಯದಲ್ಲೇ ತೆರೆಕಾಣಲಿದೆ.

English summary
The Supreme Court rejected the petition filed by anti-dubbing fighters. ಡಬ್ಬಿಂಗ್ ವಿರೋಧಿ ಹೋರಾಟಗಾರರು ಸಲ್ಲಿಸಿದ್ದ ಅರ್ಜಿಯನ್ನ ಸುಪ್ರಿಂ ಕೋರ್ಟ್ ತಿರಸ್ಕರಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X