For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬಂದ ಪ್ರಿಯಾ ವಾರಿಯರ್ ಗೆ ನಾಯಕ ಇವರೆ

  |

  ಕಣ್ಸನ್ನೆಯ ಮೂಲಕ ರಾತ್ರೊ ರಾತ್ರಿ ಸ್ಟಾರ್ ಆದ ಮಲಯಾಳಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡಕ್ಕೆ ಬರ್ತಿದ್ದಾರೆ. ಪ್ರಿಯಾ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಾಡ್ತಾರೆ ಎಂದು ಅನೇಕ ದಿನಗಳಿಂದನೇ ಹೇಳಲಾಗುತ್ತಿತ್ತು. ಆದ್ರೀಗ ಪ್ರೀಯಾ ಕನ್ನಡಕ್ಕೆ ಬರುವುದು ಬಹುತೇಕ ಖಚಿತವಾಗಿದೆ.

  ಬಹು ಬೇಡಿಕೆಯ ನಟಿಯಾಗಿರುವ ಪ್ರಿಯಾ ಈಗ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ವಿಶೇಷ ಅಂದ್ರೆ ಪ್ರಿಯಾ ಜೊತೆ ನಾಯಕನಾಗಿ ಸ್ಯಾಂಡಲ್ ವುಡ್ ನ ಖ್ಯಾತ ಕುಟುಂಬವೊಂದರ ಹುಡುಗ ಅಭಿನಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು.

  ಕನ್ನಡಕ್ಕೆ ಬರ್ತಿದ್ದಾರೆ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್?

  ಕುಮಾರ್ ಬಂಗಾರಪ್ಪ ಪುತ್ರ ಅರ್ಜುನ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದ್ರೀಗ ನಾಯಕ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರನ ಮಗ ಸೂರಜ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

  ಸೂರಜ್ ಕುಮಾರ್ ಪಾರ್ವತಮ್ಮ ಅವರ ಸಹೋದರ ನಿರ್ಮಾಪಕ ಶ್ರೀನಿವಾಸ್ ಅವರ ಪುತ್ರ. ಸೂರಜ್ ಈಗಾಗಲೆ ಚಿತ್ರಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರಂತೆ. ಸಾಹಸ ಮತ್ತು ನೃತ್ಯವನ್ನು ಚೆನ್ನೈನಲ್ಲಿ ಅಭ್ಯಾಸ ಮಾಡಿದ್ದಾರೆ. ನಟ ದರ್ಶನ್ ಅವರನ್ನು ಮೆಂಟರ್ ಎಂದು ಭಾವಿಸಿರುವ ಸೂರಜ್, ದರ್ಶನ್ ಅವರ 'ಐರಾವತ' ಮತ್ತು 'ತಾರಕ್' ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

  ಚಿತ್ರಕ್ಕೆ ರಘುಕೋವಿ ಆಕ್ಷನ್ ಕಟ್ ಹೇಳಿದ್ದಾರೆ. ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದ ರಘು ಕೋವಿ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಸೂರಜ್ ಮತ್ತು ಪ್ರಿಯಾ ವಾರಿಯರ್ ಸಿನಿಮಾ ಸಧ್ಯದಲ್ಲೇ ಸೆಟ್ಟೇರಲಿದೆ.

  English summary
  Kannada producer Parvathamma Rajkumar's brother son Suraj Kumar to make acting debut in Kiran Govi film. Malayalam actress Priya Prakash Varrier heroine of this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X