For Quick Alerts
  ALLOW NOTIFICATIONS  
  For Daily Alerts

  'ಮಮ್ಮಿ' ಚಿತ್ರತಂಡದಿಂದ ಹೊರ ಬಿದ್ದಿರುವ 'ಸೂಪರ್' ಸುದ್ದಿ ಇದೇ.!

  By Harshitha
  |

  ರಿಯಲ್ ಸ್ಟಾರ್ ಉಪೇಂದ್ರ ಮುದ್ದು ಮಡದಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಮಮ್ಮಿ ಸೇವ್ ಮಿ' ಚಿತ್ರ ಮುಂದಿನ ವಾರ (ಡಿಸೆಂಬರ್ 2) ಬಿಡುಗಡೆ ಆಗಲಿದೆ.

  ಬರೀ ಟ್ರೈಲರ್ ಮೂಲಕವೇ ಇಡೀ ಗಾಂಧಿನಗರವನ್ನ ಗಡಗಡ ನಡುಗಿಸಿರುವ 'ಮಮ್ಮಿ ಸೇವ್ ಮಿ' ಚಿತ್ರತಂಡದ ಕಡೆಯಿಂದ 'ಸೂಪರ್' ಎನ್ನುವ ಸುದ್ದಿಯೊಂದು ಸದ್ಯ ಹೊರಬಿದ್ದಿದೆ.

  ಏನು ಅಂತಹ ಸುದ್ದಿ.?

  ಏನು ಅಂತಹ ಸುದ್ದಿ.?

  'ಮಮ್ಮಿ ಸೇವ್ ಮಿ' ಚಿತ್ರ ಬರೀ ಸ್ಯಾಂಡಲ್ ವುಡ್ ಮಂದಿಯನ್ನು ಮಾತ್ರ ಅಲ್ಲ, ಕಾಲಿವುಡ್ ಮಂದಿಯನ್ನೂ ಬೆಚ್ಚಿ ಬೀಳಿಸುವಲ್ಲಿ ಯಶಸ್ವಿ ಆಗಿದೆ. [ಕನ್ನಡದ 'ಮಮ್ಮಿ' ತೆಲುಗಿನಲ್ಲಿ 'ಚಿನ್ನಾರಿ']

  ತಮಿಳಿಗೆ ರೀಮೇಕ್ ಆಗ್ತಿದೆ 'ಮಮ್ಮಿ'

  ತಮಿಳಿಗೆ ರೀಮೇಕ್ ಆಗ್ತಿದೆ 'ಮಮ್ಮಿ'

  ನಂಬಿದ್ರೆ ನಂಬಿ....'ಮಮ್ಮಿ ಸೇವ್ ಮಿ' ಚಿತ್ರವನ್ನ ತಮಿಳಿಗೆ ರೀಮೇಕ್ ಮಾಡಲು ಕಾಲಿವುಡ್ 'ಸ್ಟಾರ್ ಜೋಡಿ' ಮುಂದಾಗಿದೆ. ['ಮಮ್ಮಿ-ಸೇವ್ ಮಿ' ಚಿತ್ರದ ರಿಲೀಸ್ ಡೇಟ್ ಕನ್ ಫರ್ಮ್]

  ಯಾರು ಆ ಸೂಪರ್ ಜೋಡಿ.?

  ಯಾರು ಆ ಸೂಪರ್ ಜೋಡಿ.?

  'ಮಮ್ಮಿ ಸೇವ್ ಮಿ' ಚಿತ್ರವನ್ನ ತಮಿಳಿಗೆ ರೀಮೇಕ್ ಮಾಡಲು ಕಾಲಿವುಡ್ ನ ಸ್ಟಾರ್ ಹೀರೋ ಸೂರ್ಯ ಮತ್ತು ಪತ್ನಿ ಜ್ಯೋತಿಕಾ ಮನಸ್ಸು ಮಾಡಿದ್ದಾರೆ. [ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಹೊಸ ಟ್ರೈಲರ್]

  ಗಾಸಿಪ್ ಅಲ್ಲ, 100% ನಿಜ.!

  ಗಾಸಿಪ್ ಅಲ್ಲ, 100% ನಿಜ.!

  ತಮಿಳು ನಟ ಸೂರ್ಯ ಮತ್ತು ಪತ್ನಿ ಜ್ಯೋತಿಕಾ 'ಮಮ್ಮಿ ಸೇವ್ ಮಿ' ಚಿತ್ರದ ಟ್ರೈಲರ್ ನೋಡಿದ್ಮೇಲೆ, ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದರಂತೆ. ಈ ವಿಚಾರ 'ಮಮ್ಮಿ ಸೇವ್ ಮಿ' ಚಿತ್ರದ ನಿರ್ದೇಶಕ ಲೋಹಿತ್ ಗೆ ಗೊತ್ತಾಗ್ತಿದ್ದ ಹಾಗೆ ಸ್ಪೆಷಲ್ ಶೋ ಅರೇಂಜ್ ಮಾಡಿದ್ದಾರೆ. 'ಮಮ್ಮಿ ಸೇವ್ ಮಿ' ಚಿತ್ರವನ್ನ ವೀಕ್ಷಿಸಿದ ಮೇಲೆ ಸೂರ್ಯ ಮತ್ತು ಜ್ಯೋತಿಕಾ ಫುಲ್ ಇಂಪ್ರೆಸ್ ಆಗಿ ತಮಿಳಿನಲ್ಲಿ ರೀಮೇಕ್ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. [ಹಾಲಿವುಡ್ ಶೈಲಿಯಲ್ಲಿ 'ಮಮ್ಮಿ'ಗೆ ರೀ-ರೆಕಾರ್ಡಿಂಗ್]

  ನಿರ್ದೇಶಕ ಲೋಹಿತ್ ಏನಂತಾರೆ.?

  ನಿರ್ದೇಶಕ ಲೋಹಿತ್ ಏನಂತಾರೆ.?

  ''ಮಮ್ಮಿ ಸೇವ್ ಮಿ' ಚಿತ್ರವನ್ನ ಸೂರ್ಯ ಮತ್ತು ಜ್ಯೋತಿಕಾ ನೋಡಿ ತುಂಬಾ ಸಂತಸ ವ್ಯಕ್ತಪಡಿಸಿದರು. ತಮಿಳಿನ ನೇಟಿವಿಟಿಗೆ ತಕ್ಕ ಹಾಗೆ ಚೇಂಜಸ್ ಕೂಡ ಹೇಳಿದರು. ರೀಮೇಕ್ ಮಾಡಲು ಆಸಕ್ತಿ ತೋರಿದ್ದಾರೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ 'ಮಮ್ಮಿ ಸೇವ್ ಮಿ' ನಿರ್ದೇಶಕ ಲೋಹಿತ್ ಹೇಳಿದರು. [ಯುವ ನಿರ್ದೇಶಕನ ಪ್ರಯೋಗಕ್ಕೆ ಬೆಚ್ಚಿಬಿದ್ದ ಗಾಂಧಿನಗರ.!]

  ಮಾತುಕತೆ ಹಂತದಲ್ಲಿದೆ

  ಮಾತುಕತೆ ಹಂತದಲ್ಲಿದೆ

  ಎಷ್ಟು ಮೊತ್ತಕ್ಕೆ ರೀಮೇಕ್ ರೈಟ್ಸ್ ಸೇಲಾಗಲಿದೆ ಎಂಬುದರ ಕುರಿತು ಸದ್ಯಕ್ಕೆ ಮಾತುಕತೆ ನಡೆಯುತ್ತಿದೆ. ['ಮಮ್ಮಿ' ಆದ ಪ್ರಿಯಾಂಕಾ ಉಪೇಂದ್ರ ಜೊತೆ ಸಣ್ಣ ಮಾತುಕತೆ]

  ಪ್ರಧಾನ ಭೂಮಿಕೆಯಲ್ಲಿ ಜ್ಯೋತಿಕಾ

  ಪ್ರಧಾನ ಭೂಮಿಕೆಯಲ್ಲಿ ಜ್ಯೋತಿಕಾ

  ಎಲ್ಲವೂ ಪ್ಲಾನ್ ಪ್ರಕಾರ ನಡೆದು.. ರೀಮೇಕ್ ಆದ್ರೆ, ಇಲ್ಲಿ ಪ್ರಿಯಾಂಕಾ ಉಪೇಂದ್ರ ನಿರ್ವಹಿಸಿರುವ ಪಾತ್ರವನ್ನ ಅಲ್ಲಿ ನಟಿ ಜ್ಯೋತಿಕಾ ನಿಭಾಯಿಸಲಿದ್ದಾರೆ.

  ಹಾರರ್-ಸಸ್ಪೆನ್ಸ್ ಸಿನಿಮಾ...

  ಹಾರರ್-ಸಸ್ಪೆನ್ಸ್ ಸಿನಿಮಾ...

  ಏಳು ತಿಂಗಳ ಗರ್ಭಿಣಿ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿರುವ ನೈಜ ಘಟನೆ ಆಧಾರಿತ ಹಾರರ್-ಸಸ್ಪೆನ್ಸ್ ಸಿನಿಮಾ 'ಮಮ್ಮಿ ಸೇವ್ ಮಿ'.

  ಸೂಪರ್ ಅಲ್ವಾ.?

  ಸೂಪರ್ ಅಲ್ವಾ.?

  ಸ್ಯಾಂಡಲ್ ವುಡ್ ನಲ್ಲಿ ರೀಮೇಕ್ ಚಿತ್ರಗಳೇ ಹೆಚ್ಚಾಗಿ ಸುದ್ದಿ ಮಾಡುತ್ತಿರುವ ದಿನಗಳಲ್ಲಿ... ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ ಅಂತ ಗೊಣಗುವ ಕಾಲದಲ್ಲಿ... ಕನ್ನಡ ಚಿತ್ರವೊಂದನ್ನ ಹುಡುಕ್ಕೊಂಡು ಬಂದು ತಮಿಳಿನ ಸ್ಟಾರ್ ಜೋಡಿ ರೀಮೇಕ್ ಮಾಡುವ ಆಸಕ್ತಿ ತೋರುತ್ತಾರೆ ಅಂದ್ರೆ ಈ ಸುದ್ದಿ 'ಸೂಪರ್' ಅಲ್ವಾ.?

  English summary
  Tamil Actor Surya and Wife Jyothika expressed their desire to Remake Kannada Actress Priyanka Upendra starrer Kannada Movie 'Mummy Save Me' in Tamil. 'Mummy Save Me' is Directed by Lohith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X