Just In
- 2 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 3 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 3 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 5 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಿಂಗದೇವರು ಕೊಟ್ಟ ಏಟಿಗೆ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ತಿರುಗೇಟು
ಉದ್ದೇಶ ಪೂರ್ವಕವಾಗಿ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ 'ನಾನು ಅವನಲ್ಲ...ಅವಳು' ಚಿತ್ರವನ್ನ 'ಶಿವಮೊಗ್ಗ ಪನೋರಮಾ'ದಿಂದ ಕೈಬಿಡಲಾಗಿದೆ. ಇದಕ್ಕೆ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನೇರ ಹೊಣೆ ಅಂತ ಬಿ.ಎಸ್.ಲಿಂಗದೇವರು ಬೆಟ್ಟು ಮಾಡಿ ತೋರಿಸಿದ್ದರು.
ಬಿ.ಎಸ್.ಲಿಂಗದೇವರು ಕೊಟ್ಟಿರುವ ಏಟಿಗೆ ಇದೀಗ ರಾಜೇಂದ್ರ ಸಿಂಗ್ ಬಾಬು ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. [ಚಲನಚಿತ್ರ ಅಕಾಡೆಮಿ ನಡೆಗೆ 'ಛೀ! ಅಸಹ್ಯ' ಎಂದ ಬಿ.ಎಸ್.ಲಿಂಗದೇವರು]
'ಶಿವಮೊಗ್ಗ ಪನೋರಮಾ ಚಿತ್ರೋತ್ಸವ'ದಲ್ಲಿ 'ನಾನು ಅವನಲ್ಲ...ಅವಳು' ಚಿತ್ರಕ್ಕೆ ಕೊಕ್ ನೀಡಿರುವ ಕುರಿತು ರಾಜೇಂದ್ರ ಸಿಂಗ್ ಬಾಬು ನೀಡಿರುವ ಸ್ಪಷ್ಟೀಕರಣ ಇಲ್ಲಿದೆ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ.....

ಇದು ದುರಾದೃಷ್ಟಕರ!
''ಶಿವಮೊಗ್ಗದಲ್ಲಿ ಆಗಸ್ಟ್ 25 ರಿಂದ ನಡೆಯಲಿರುವ 'ಭಾರತೀಯ ಪನೋರಮಾ ಚಲನಚಿತ್ರೋತ್ಸವ'ದಲ್ಲಿ 'ನಾನು ಅವನಲ್ಲ...ಅವಳು' ಕನ್ನಡ ಚಲನಚಿತ್ರ ಪ್ರದರ್ಶನವಾಗುತ್ತಿಲ್ಲ ಎಂಬ ಬಗ್ಗೆ ಆ ಚಿತ್ರದ ನಿರ್ದೇಶಕ ಶ್ರೀ ಬಿ.ಎಸ್.ಲಿಂಗದೇವರು ಆಕ್ಷೇಪ ವ್ಯಕ್ತಪಡಿಸಿರುವುದು ದುರದೃಷ್ಟಕರ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ [ನಟಿ ತಾರಾ ವಿರುದ್ಧ ಲಿಂಗದೇವರು ಫೇಸ್ ಬುಕ್ ಬಾಂಬ್]

ಅನೇಕ ಚಿತ್ರೋತ್ಸವದಲ್ಲಿ ಭಾಗಿಯಾಗಿದೆ!
'ನಾನು ಅವನಲ್ಲ...ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ಹರ್ಷದ ವಿಷಯ. ಬೆಂಗಳೂರಿನಲ್ಲಿ ನಡೆದ 'ಅಂತರರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲೂ ಈ ಚಿತ್ರ ಪ್ರಶಸ್ತಿಗೆ ಪುರಸ್ಕೃತವಾಗಿತ್ತು. ಕರ್ನಾಟಕ ಚಲನಚಿತ್ರ ಅಕಾಡೆಮಿಯು ದೆಹಲಿಯಲ್ಲಿ 'ಕೇಂದ್ರ ಸರ್ಕಾರದ ಚಲನಚಿತ್ರೋತ್ಸವ' ನಿರ್ದೇಶನಾಲಯದ ಸಹಯೋಗದಲ್ಲಿ ನಡೆಸಿದ ಕನ್ನಡ ಚಲನಚಿತ್ರೋತ್ಸವದಲ್ಲಿಯೂ ಈ ಚಿತ್ರವನ್ನು ಪ್ರದರ್ಶಿಸಲಾಯಿತು. ಚಿತ್ರದ ನಾಯಕ ನಟ ಶ್ರೀ ಸಂಚಾರಿ ವಿಜಯ್ ಅವರು ಈ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ಚಲನಚಿತ್ರೋತ್ಸವ ನಿರ್ದೇಶನಾಲಯದ ಸಹಯೋಗದಲ್ಲಿ ಮಾರ್ಚ್ 17 ರಿಂದ 20 ರವರೆಗೆ ಬೆಂಗಳೂರಿನಲ್ಲಿ ಚಲನಚಿತ್ರ ಅಕಾಡೆಮಿಯ ನಡೆಸಿದ 'ಭಾರತೀಯ ಪನೋರಮಾ ಚಿತ್ರೋತ್ಸವ'ದಲ್ಲೂ ಸಹ 'ನಾನು ಅವನಲ್ಲ...ಅವಳು' ಪ್ರದರ್ಶಿತಗೊಂಡಿತ್ತು'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಬೆಳ್ಳಿ ಸಿನಿಮಾ - ಬೆಳ್ಳಿ ಮಾತು ಕಾರ್ಯಕ್ರಮದಲ್ಲಿ ಭಾಗಿ
''ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರ ಏರ್ಪಡಿಸುವ 'ಬೆಳ್ಳಿ ಸಿನಿಮಾ - ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡುವಂತೆಯೂ ಚಿತ್ರದ ನಿರ್ದೇಶಕರನ್ನು ಮೌಖಿಕವಾಗಿ ಕೋರಲಾಗಿತ್ತು.'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ [ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು']

ತೆರಿಗೆ ವಿನಾಯತಿಗೆ ಅವಕಾಶ
''ನಾನು ಅವನಲ್ಲ...ಅವಳು' ಚಿತ್ರವು ಹೊರ ರಾಜ್ಯದ ಚಿತ್ರನಗರಿಯಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದರಿಂದ ಶೇ.100 ರಷ್ಟು ಮನರಂಜನಾ ತೆರಿಗೆಗೆ ಅರ್ಹತೆ ಪಡೆದಿರಲಿಲ್ಲ. ಆದರೆ ಚಿತ್ರದ ಒಟ್ಟಾರೆ ಮೌಲ್ಯವನ್ನು ಗುರುತಿಸಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಿ ಶೇ.100ರಷ್ಟು ಮನರಂಜನಾ ತೆರಿಗೆ ವಿನಾಯಿತಿಗೆ ಅವಕಾಶ ಕಲ್ಪಿಸಿ ಕೊಟ್ಟಿದೆ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಪ್ರಸಾದನ ಕಲಾವಿದರಿಗೆ ಗೌರವ
''ಈ ಚಿತ್ರದ ಪ್ರಸಾದನ ಕಲಾವಿದರನ್ನು ಗೌರವಿಸುವ ಸಲುವಾಗಿ ಪ್ರಸಾದನ ಕಲಾವಿದರಿಗೆ ಪ್ರಶಸ್ತಿಗೆ ಅವಕಾಶವಿಲ್ಲದಿದ್ದರೂ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಇಬ್ಬರು ಪ್ರಸಾದನ ಕಲಾವಿದರಿಗೆ ತಲಾ 1.00 ಲಕ್ಷ ರೂ. ಪ್ರಶಸ್ತಿ ನೀಡಿ ಇಲಾಖೆಯು ಗೌರವಿಸಿದೆ. 'ನಾನು ಅವನಲ್ಲ...ಅವಳು' ಚಿತ್ರದ ಬಗ್ಗೆ ರಾಜ್ಯ ಸರ್ಕಾರಕ್ಕೆ ಹಾಗೂ ಚಲನಚಿತ್ರ ಅಕಾಡೆಮಿಗೆ ಅಭಿಮಾನ, ಗೌರವ ಇರುವುದನ್ನು ಇದು ಸಾಬೀತು ಪಡಿಸುತ್ತದೆ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

13 ಚಿತ್ರಗಳ ಪ್ಯಾಕೇಜ್
''ಶಿವಮೊಗ್ಗದಲ್ಲಿ ನಡೆಯುತ್ತಿರುವ ಚಲನಚಿತ್ರೋತ್ಸವಕ್ಕೆ ರಾಷ್ಟ್ರದ ವಿವಿಧ ಭಾಷೆಗಳ 13 ಚಲನಚಿತ್ರಗಳ ಪ್ಯಾಕೇಜನ್ನು ಕೇಂದ್ರ ಸರ್ಕಾರದ ಚಲನಚಿತ್ರೋತ್ಸವ ನಿರ್ದೇಶನಾಲಯ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಕಳುಹಿಸಿಕೊಟ್ಟಿದೆ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಪರಸ್ಪರ ಸೌಹಾರ್ದ ಸಂಬಂಧ
''ದೆಹಲಿ, ಚೆನ್ನೈ, ಮುಂತಾದ ಹೊರರಾಜ್ಯಗಳ ನಗರಗಳಲ್ಲಿ ಕನ್ನಡ ಚಲನಚಿತ್ರೋತ್ಸವವನ್ನು ಏರ್ಪಡಿಸುತ್ತಿರವ ಅಕಾಡೆಮಿಗೆ ಚಲನಚಿತ್ರೋತ್ಸವ ನಿರ್ದೇಶನಾಲಯದ ಸಹಭಾಗಿತ್ವ ಪಡೆಯಲಾಗುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿ 'ಭಾರತೀಯ ಪನೋರಮಾ'ಗೆ ಆಯ್ಕೆಯಾದ ಉತ್ತಮ ಚಿತ್ರಗಳನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರದ ಚಲನಚಿತ್ರೋತ್ಸವ ನಿರ್ದೇಶನಾಲಯಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಕಾರ ನೀಡುತ್ತಿದೆ. ಇದು ಒಂದು ಪರಸ್ಪರ ಸೌಹಾರ್ದ ಸಂಬಂಧದ ಕಾರ್ಯಕ್ರಮ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಇದೆಲ್ಲಾ ಬೇಕಾ?
''ಆದಾಗ್ಯೂ ಚಿತ್ರ ನಿರ್ದೇಶಕ ಶ್ರೀ ಬಿ.ಎಸ್.ಲಿಂಗದೇವರು ಅವರು ಮಾಧ್ಯಮಗಳ ಮೂಲಕ ವ್ಯಕ್ತಪಡಿಸಿರುವ ಆಕ್ಷೇಪಗಳನ್ನು ಗಮನಿಸಿ, ಕೇಂದ್ರ ಚಲನಚಿತ್ರೋತ್ಸವ ನಿರ್ದೇಶನಾಲಯಕ್ಕೆ ಪತ್ರ ಬರೆದು ಪ್ರಸಕ್ತ ಒದಗಿಸಲಾಗಿರುವ 'ಭಾರತೀಯ ಪನೋರಮಾ' ಚಲನಚಿತ್ರಗಳ ಪಟ್ಟಿಗೆ 'ನಾನು ಅವನಲ್ಲ...ಅವಳು' ಚಿತ್ರವನ್ನೂ ಸೇರಿಸುವಂತೆ ಕೋರಲಾಗಿದೆ'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಅತ್ತ್ಯುತ್ತಮ ಚಿತ್ರಗಳನ್ನು ನಿರ್ದೇಶಿಸಲಿ..
''ಈ ಚಿತ್ರದ ನಿರ್ದೇಶಕರು ಯುವಕರಾಗಿದ್ದು, ಇನ್ನೂ ಅತ್ಯುತ್ತಮ ಚಿತ್ರಗಳನ್ನು ನಿರ್ದೇಶಿಸಿ ರಾಷ್ಟ್ರ ಮನ್ನಣೆಯನ್ನು ಪಡೆಯಬೇಕೆಂಬುದು, ಚಲನಚಿತ್ರ ನಿರ್ದೇಶಕನಾದ ನನ್ನ ಆಶಯ.'' - ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಅನಗತ್ಯ ಗೊಂದಲ ಬೇಡ
''ಶ್ರೀ.ಲಿಂಗದೇವರು ಅವರು ಈ ವಿಚಾರದಲ್ಲಿ ಅನಗತ್ಯ ಗೊಂದಲ ಮೂಡಿಸುತ್ತಿರುವುದು ಚಿತ್ರೋದ್ಯಮದಲ್ಲಿ ಆರೋಗ್ಯಕರ ಬೆಳವಣಿಗೆಯಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ'' ಅಂತ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.