»   » 'ಸೊಂಟದ ವಿಷ್ಯ ಬೇಡವೊ ಶಿಷ್ಯ' ಎಂದ ನಟಿ ತಾಪ್ಸಿ ಪನ್ನು!

'ಸೊಂಟದ ವಿಷ್ಯ ಬೇಡವೊ ಶಿಷ್ಯ' ಎಂದ ನಟಿ ತಾಪ್ಸಿ ಪನ್ನು!

Posted By:
Subscribe to Filmibeat Kannada

ಟಾಲಿವುಡ್ ಚಿತ್ರರಂಗದ ತುಂಬಾ ಈಗ ನಟಿ ತಾಪ್ಸಿ ಪನ್ನು ಅವರದ್ದೇ ಸುದ್ದಿ. ಅದಕ್ಕೆ ಕಾರಣ ತಾಪ್ಸಿ ನೀಡಿರುವ ಒಂದು ಹೇಳಿಕೆ. ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಾಪ್ಸಿ ಪನ್ನು ತೆಲುಗಿನ ದೊಡ್ಡ ನಿರ್ದೇಶಕ ಕೆ.ರಾಘವೇಂದ್ರ ರಾವ್ ಅವರ ವಿರುದ್ದ ಮಾತನಾಡಿದ್ದರು.

ಕೆ.ರಾಘವೇಂದ್ರ ರಾವ್ ಟಾಲಿವುಡ್ ನಲ್ಲಿ ಅನೇಕ ನಟಿಯರನ್ನು ಪರಿಚಯ ಮಾಡಿದ್ದಾರೆ. ಅಲ್ಲದೆ ತಾಪ್ಸಿ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ್ದೂ ಸಹ ಕೆ.ರಾಘವೇಂದ್ರ ರಾವ್ ಅವರೇ.! ಇದೀಗ ಇಷ್ಟು ವರ್ಷಗಳ ನಂತರ ತಾಪ್ಸಿ ತಮ್ಮ ನಿರ್ದೇಶಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಅಂದಹಾಗೆ, ನಿರ್ದೇಶಕ ಕೆ.ರಾಘವೇಂದ್ರ ರಾವ್ ಬಗ್ಗೆ ನಟಿ ತಾಪ್ಸಿ ಪನ್ನು ನೀಡಿರುವ ಹೇಳಿಕೆ ಏನು.? ಫುಲ್ ಡೀಟೇಲ್ಸ್ ಇಲ್ಲಿದೆ ಓದಿ...

ತಾಪ್ಸಿ ಪನ್ನು ಮಾತು

''ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕರು ಆಗಲೇ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸುವುದರಲ್ಲಿ ಹೆಸರುವಾಸಿ ಆಗಿದ್ದರು. ಅವರ 150ನೇ ಸಿನಿಮಾದಲ್ಲಿ ನಾನು ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟೆ'' - ತಾಪ್ಸಿ ಪನ್ನು, ನಟಿ

ಸೊಂಟದ ವಿಷ್ಯ

''ಆ ನಿರ್ದೇಶಕರು ನಟಿಯರ ಸೊಂಟದ ಭಾಗವನ್ನು ತೋರಿಸುವುದರಲ್ಲಿ ಎತ್ತಿದ ಕೈ. ನಾನು ಅದನ್ನೆಲ್ಲಾ ತುಂಬಾ ನೋಡಿದ್ದೇ. ಅದಕ್ಕೆ ತಯಾರಾಗಿಯೂ ಇದ್ದೇ. ನನ್ನ ದೇಹದ ಮೇಲೆ ಹೂವುಗಳನ್ನು ಎಸೆಯಲು ಸೂಕ್ತವಲ್ಲ ಎನಿಸಿ ಅವರು ತೆಂಗಿನಕಾಯಿಯನ್ನು ಎಸೆದುಬಿಟ್ಟರು'' - ತಾಪ್ಸಿ ಪನ್ನು, ನಟಿ

ದೊಡ್ಡ ಸುದ್ದಿಯಾಯ್ತು

ಕಾರ್ಯಕ್ರಮದಲ್ಲಿ ತಾಪ್ಸಿ ಅವರ ಈ ಮಾತು ಕೇಳಿದ ಅನೇಕರು ನಕ್ಕಿದ್ದರು. ಆದರೆ ಈಗ ಇದೇ ಹೇಳಿಕೆ ದೊಡ್ಡ ಸುದ್ದಿ ಮಾಡಿದೆ. ಕೆ.ರಾಘವೇಂದ್ರ ರಾವ್ ಅವರ ಚಿತ್ರರಂಗದ ಅನುಭವದಷ್ಟು ತಾಪ್ಸಿಗೆ ವಯಸ್ಸಾಗಿಲ್ಲ ಎಂದು ಅನೇಕರು ಗುಡುಗಿದ್ದಾರೆ.

ದೊಡ್ಡ ನಿರ್ದೇಶಕ

ಕೆ.ರಾಘವೇಂದ್ರ ರಾವ್ ತೆಲುಗು ಚಿತ್ರರಂಗದ ದೊಡ್ಡ ನಿರ್ದೇಶಕರಲ್ಲಿ ಒಬ್ಬರು. ನಟಿ ಶ್ರೀದೇವಿ, ಜಯಸುಧಾ ಸೇರಿದಂತೆ ಸಾಕಷ್ಟು ನಟಿಯರನ್ನು ಪರಿಚಯಿಸಿದ ಖ್ಯಾತಿ ಅವರದ್ದು.

English summary
Kannada Actress Taapsee Pannu has made controversial statement on Director K.Raghavendra Rao

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada