»   » 'ಟಗರು' ಸಿನಿಮಾ ಗೆದ್ದ ಖುಷಿ ಹಂಚಿಕೊಂಡ ಶಿವಣ್ಣ ಅಂಡ್ ಟೀಂ

'ಟಗರು' ಸಿನಿಮಾ ಗೆದ್ದ ಖುಷಿ ಹಂಚಿಕೊಂಡ ಶಿವಣ್ಣ ಅಂಡ್ ಟೀಂ

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಗೆದ್ದಿದೆ. ಸಿನಿಮಾದ ಯಶಸ್ಸನ್ನು ಚಿತ್ರತಂಡ ಒಂದು ಕಾರ್ಯಕ್ರಮ ಮಾಡಿ ಹಂಚಿಕೊಂಡಿದೆ. ನಟ ಶಿವಣ್ಣ, ನಟಿ ಭಾವನ, ಧನಂಜಯ್, ವಸಿಷ್ಟ, ಮಾನ್ವಿತಾ ಹರೀಶ್ ಸೇರಿದಂತೆ ಇಡೀ 'ಟಗರು' ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ಕಾರ್ಯಕ್ರಮದ ಮೊದಲು ನಿರ್ದೇಶಕ ಸೂರಿ ತಮ್ಮ ಜೊತೆಗೆ ಕೆಲಸ ಮಾಡಿದ ಸಹ ನಿರ್ದೇಶಕರ ಪರಿಚಯ ಮಾಡಿದರು. ನಂತರ ತಾಂತ್ರಿಕ ವರ್ಗ ತಮ್ಮ ಸಂತಸವನ್ನು ಹಂಚಿಕೊಂಡಿತು. ಬಳಿಕ ಶಿವರಾಜ್ ಕುಮಾರ್ ಸೇರಿದಂತೆ ಕಲಾವಿದರ ವಿಭಾಗ ವೇದಿಕೆ ಏರಿ 'ಟಗರು' ಗೆಲುವಿನ ಬಗ್ಗೆ ಮಾತನಾಡಿದರು.

Tagaru kannada movie getting positive response

ವೈಯಕ್ತಿಕವಾಗಿ ಶಿವರಾಜ್ ಕುಮಾರ್ ಅವರಿಗೆ ಸಿನಿಮಾದ ಗೆಲುವು ಬಹಳ ಖುಷಿ ಕೊಟ್ಟಿದೆ. ಸೂರಿ ವಿಭಿನ್ನ ರೀತಿಯ ಸ್ಕ್ರೀನ್ಸ್ ಪ್ಲೇ ಯನ್ನು ಈ ಸಿನಿಮಾದಲ್ಲಿ ಮಾಡಿದ್ದು ಜನ ಹೊಸತನವನ್ನು ಒಪ್ಪಿಕೊಂಡಿದ್ದಾರೆ. ವಿಶೇಷ ಎಂದರೆ ಸಿನಿಮಾದ ಪ್ರತಿ ಪಾತ್ರಗಳು ಸಹ ಪ್ರೇಕ್ಷಕರನ್ನು ಮುಟ್ಟಿದೆ. ಇನ್ನೂ ಫೆಬ್ರವರಿ 23ಕ್ಕೆ 'ಟಗರು' ಬಿಡುಗಡೆಯಾಗಿದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಬೇರೆ ಕಡೆಯಿಂದ ಕೂಡ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆಯಂತೆ.

'ಡಾಲಿ'ಯ ಪ್ರೀತಿಯ ತಮ್ಮ ಕಾಕ್ರೋಚ್ ರಿಯಲ್ ಕಥೆ ಕೇಳಿ

English summary
Kannada actor Shiva Rajkumar'sTagaru kannada movie getting positive response. The movie is directed by Duniya Suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada