»   » ಶಿವಣ್ಣನ 'ಟಗರು' ಈ ವರ್ಷ ಫೀಲ್ಡ್ ಗೆ ಇಳಿಯುವುದಿಲ್ಲ.!

ಶಿವಣ್ಣನ 'ಟಗರು' ಈ ವರ್ಷ ಫೀಲ್ಡ್ ಗೆ ಇಳಿಯುವುದಿಲ್ಲ.!

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಯಾವಾಗ ಬರುತ್ತದೆ ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು. ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಪೈಕಿ 'ಟಗರು' ಕೂಡ ಒಂದು ಎನ್ನುವ ಸುದ್ದಿ ಇತ್ತು. ಆದರೆ 'ಟಗರು' ಸಿನಿಮಾ ಈ ವರ್ಷ ಬಿಡುಗಡೆಯಾಗುತ್ತಿಲ್ಲ.

ಶಿವಣ್ಣ ನಟನೆಯಲ್ಲಿ ಪ್ರತಿ ವರ್ಷ ಮೂರರಿಂದ ನಾಲ್ಕು ಚಿತ್ರಗಳು ರಿಲೀಸ್ ಆಗುತ್ತದೆ. ಅದೇ ರೀತಿ ಈ ವರ್ಷ ಕೂಡ 'ಶ್ರೀಕಂಠ', 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಮತ್ತು 'ಮಾಸ್ ಲೀಡರ್' ಚಿತ್ರಗಳು ಬಿಡುಗಡೆಯಾಗಿತ್ತು. ಈ ಚಿತ್ರದ ಬಳಿಕ 'ಟಗರು' ಸಿನಿಮಾ ಬರುತ್ತದೆ ಎನ್ನುವುದು ಎಲ್ಲರ ಲೆಕ್ಕಾಚಾರ ಆಗಿತ್ತು.

'Tagaru' movie release date postponed to 2018

ಆದರೆ 'ಟಗರು' ಸಿನಿಮಾ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಶಿವಣ್ಣ ಮತ್ತು ಶ್ರೀಮುರಳಿ ಜೋಡಿಯ 'ಮಫ್ತಿ' ಸಿನಿಮಾ ಡಿಸೆಂಬರ್ 1ಕ್ಕೆ ಬಿಡುಗಡೆಯಾಗಲಿದ್ದು, ಈ ಕಾರಣದಿಂದ 'ಟಗರು' ಚಿತ್ರದ ರಿಲೀಸ್ ಪೋಸ್ಟ್ ಪೋನ್ ಆಗಿದೆ. ಅಂದಹಾಗೆ, 'ಟಗರು' ಸಿನಿಮಾ ಸಂಕ್ರಾಂತಿ ವೇಳೆಗೆ ತೆರೆಗೆ ಬರಲಿದೆ.

English summary
Kannada Actor Shiva Rajkumar's 'Tagaru' movie release date postponed to 2018. 'ಟಗರು' ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X