»   » ಬಾಹುಬಲಿಯಲ್ಲಿ ದಂಗುಬಡಿಸುವ ತಮನ್ನಾಳ ಸೌಂದರ್ಯ

ಬಾಹುಬಲಿಯಲ್ಲಿ ದಂಗುಬಡಿಸುವ ತಮನ್ನಾಳ ಸೌಂದರ್ಯ

Posted By:
Subscribe to Filmibeat Kannada

ಹಾಲಿನಲ್ಲಿ ಅದ್ದಿದಂತಹ ಸಪೂರ ದೇಹ, ಕೊರಳಲ್ಲಿ ಮುತ್ತಿನ ಹಾರ, ತೋಳಿಗೆ ರತ್ನಖಚಿತ ಬಾಜುಬಂದ್, ಸೊಂಟವನ್ನು ಸೌಂದರ್ಯವನ್ನು ಹೆಚ್ಚಿಸಿದ ಮತ್ತೊಂದು ಸುಂದರ ಮುತ್ತಿನ ಆಭರಣ, ನಿಂತ ನಿಲುವು ನೋಡಿದರೆ ಸಾಕ್ಷಾತ್ ರಂಭೆ ಮೇನಕೆ ತಿಲೋತ್ತಮೆಯರೇ ಎರಕಹೊಯ್ದಂತೆ ದೇವಕನ್ನಿಕೆಯೊಬ್ಬಳು ಧರೆಗಿಳಿದು ಬಂದಿಹಳು ಎಂಬಂತಿದೆ.

"ಆಕೆಯ ಸೌಂದರ್ಯ, ಸೊಬಗಿನಲ್ಲಿ ಏನೋ ರಹಸ್ಯ ತುಂಬಿದೆಯೇನೋ" ಎಂದು 'ಬಾಹುಬಲಿ' ಚಿತ್ರದ ನಿರ್ದೇಶಕ ಎಸ್ಎಸ್ ರಾಜಮೌಳಿಯೇ ಉದ್ಘಾರ ತೆಗೆದಿದ್ದರು. ಇದು ಅವರೇ ಬಿಡುಗಡೆ ಮಾಡಿರುವ ತಮನ್ನಾ ಭಾಟಿಯಾಳ ಪೋಸ್ಟರ್. ಈ ಚಿತ್ರದಲ್ಲಿ ದಂಗುಬಡಿಸುವಂಥ ಸೌಂದರ್ಯ ತಮನ್ನಾಳದು.

ಕೆಲ ದಿನಗಳ ಹಿಂದೆ, ಮತ್ತೊಬ್ಬ ನಾಯಕಿ ಅನುಷ್ಕಾ ಶೆಟ್ಟಿಯ ಫಸ್ಟ್ ಪೋಸ್ಟರನ್ನು ರೌಜಮೌಳಿ ಬಿಡುಗಡೆ ಮಾಡಿದ್ದರು. ಈಗ ತಮನ್ನಾಳ ಸರದಿ. ಈ ಚಿತ್ರದಲ್ಲಿ ತಮನ್ನಾ 'ಅವಂತಿಕಾ' ಎಂಬ ಕಾಲ್ಪನಿಕ ಪಾತ್ರವನ್ನು ಪೋಷಿಸುತ್ತಿದ್ದಾರೆ. ಮೊದಲೇ ಸೌಂದರ್ಯದ ಅರಸಿಯಾಗಿರುವ ತಮನ್ನಾಳ ದೇಹಸಿರಿ ಈ ಚಿತ್ರದಲ್ಲಿ ಮತ್ತಷ್ಟು ಉಸಿರುಬಿಗಿ ಹಿಡಿಯುವಂತೆ ಮಾಡುತ್ತದೆ. [ದಂಗುಬಡಿಸುವ ಬಾಹುಬಲಿ ಸೆಟ್ಸ್]

Tamanna Bhatia's stunning beauty in Baahubali

ಈ ಚಿತ್ರ ಈಗಾಗಲೆ ಹೊಸದೊಂದು ಅಲೆಯನ್ನೇ ಎಬ್ಬಿಸಿದೆ. ಭಾರೀ ನಿರೀಕ್ಷೆ ಹುಟ್ಟಿಸಿರುವ 'ಬಾಹುಬಲಿ - ದಿ ಬಿಗಿನಿಂಗ್' ಚಿತ್ರಕ್ಕೆ ತಮನ್ನಾಳ ಪೋಸ್ಟರ್ ಮತ್ತಷ್ಟು ಕುತೂಹಲ ಮೂಡಿಸಿದೆ. ದೇವಕನ್ನಿಕೆಯಾಗಿ ಚಿತ್ರದಲ್ಲಿ ಅವತರಿಸಲಿರುವ ತಮನ್ನಾ ತನ್ನ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತೆ ಮಾಡಿದ್ದಾರೆ.

ಬಾಹುಬಲಿಯಾಗಿ ಪ್ರಭಾಸ್ ನಟಿಸುತ್ತಿದ್ದರೆ, ಆತನ ಸಹೋದರ ಬಲ್ಲಭದೇವನಾಗಿ ರಾಣಾ ಡಗ್ಗುಬಾಟಿ ಅವರು ಅಭಿನಯಿಸುತ್ತಿದ್ದಾರೆ. ಜೊತೆಗೆ, ಖಳಪಾತ್ರದಲ್ಲಿ ಅಸ್ಲಂ ಖಾನ್ ಆಗಿ ಕನ್ನಡದ 'ಕಿಚ್ಚ' ಸುದೀಪ್ ಅವರು ಕಿಚ್ಚು ಹಚ್ಚಲು ರೆಡಿಯಾಗಿದ್ದಾರೆ. ಸದ್ಯಕ್ಕೆ ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. [ಅಸ್ಲಂ ಖಾನ್ ಆಗಿ ಕಿಚ್ಚ ಸುದೀಪ್]

English summary
Milky beauty Tamannaah looks extremely beautiful as Avanthika in Baahubali and has got instant positive response for her avatar in Baahubali's first part, Baahubali The Beginning. As promised earlier her poster was unveiled on twitter by the director Rajamouli and she was introduced as the angelic avenger.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada