»   » ಚಿತ್ರಗಳು: ಅದ್ದೂರಿಯಾಗಿ 'ಪ್ರೇಮ ಬರಹ' ಆರಂಭಿಸಿದ ಅರ್ಜುನ್ ಸರ್ಜಾ

ಚಿತ್ರಗಳು: ಅದ್ದೂರಿಯಾಗಿ 'ಪ್ರೇಮ ಬರಹ' ಆರಂಭಿಸಿದ ಅರ್ಜುನ್ ಸರ್ಜಾ

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟ 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ಅವರು ತಮ್ಮ ಮಗಳು ತಮಿಳು ನಟಿ ಐಶ್ವರ್ಯ ಅರ್ಜುನ್ ಅವರನ್ನು 'ಪ್ರೇಮ ಬರಹ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ ಎಂಬ ವಿಚಾರವನ್ನು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೆ.

ಇದೀಗ ನಿನ್ನೆ (ಮೇ 22) ರಾತ್ರಿ 'ಪ್ರೇಮ ಬರಹ' ಚಿತ್ರ ಮುಹೂರ್ತ ನೆರವೇರಿಸಿಕೊಂಡು ಅದ್ದೂರಿಯಾಗಿ ಸೆಟ್ಟೇರಿದ್ದು, ಇಂದಿನಿಂದ ಚಿತ್ರೀಕರಣ ಆರಂಭಗೊಂಡಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.[ಮಗಳಿಗಾಗಿ ಸುಂದರ 'ಪ್ರೇಮ ಬರಹ' ಬರೆಯುತ್ತಿರುವ ಅರ್ಜುನ್ ಸರ್ಜಾ]

ಚಿತ್ರಕ್ಕೆ ನಟ ಕಮ್ ನಿರ್ದೇಶಕ 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ಅವರು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಹೂಡಲಿದ್ದಾರೆ.

Tamil Actor Arjun Sarja turns director for his daughter Aishwarya

ಅಂದಹಾಗೆ ಅರ್ಜುನ್ ಸರ್ಜಾ ಅವರ ಶ್ರೀರಾಮ್ ಫಿಲಂಸ್ ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ 15ನೇ ಸಿನಿಮಾ ಇದಾಗಿದ್ದು, ಕನ್ನಡ ಚಿತ್ರರಂಗಕ್ಕೆ ಒಂದು ವಿಭಿನ್ನವಾದ ಚಿತ್ರ ಕೊಡುವ ಉದ್ದೇಶದಿಂದ ಸರ್ಜಾ ಅವರು 'ಪ್ರೇಮ ಬರಹ' ಎಂಬ ಸಿನಿಮಾ ಮಾಡಿದ್ದಾರೆ.

ಈ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದ್ದು, ತಮಿಳಿನಲ್ಲಿ 'ಕಾದಲಿನ್ ಪೊನ್ ವೀತೀಯಿಲ್' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ. ಈ ಮೂಲಕ ಬಿಗ್ ಬಾಸ್ ಖ್ಯಾತಿಯ ಕನ್ನಡ ನಟ ಚಂದನ್ ಅವರು ತಮಿಳು ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.[ಅಪ್ಪನ ಲವ್ ಸ್ಟೋರಿಗೆ, ಮಗಳು ನಾಯಕಿ..!]

ಇನ್ನು ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದು, ರಂಗಾಯಣ ರಘು, ಸುಹಾಸಿನಿ, ಲಕ್ಷ್ಮಿ, ಚಿಕ್ಕಣ್ಣ ಮುಂತಾದವರು ಚಿತ್ರದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.

ನಿನ್ನೆ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಕನ್ನಡ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ನಟ ಕಮ್ ನಿರ್ಮಾಪಕ ದ್ವಾರಕೀಶ್, ರಾಕ್ ಲೈನ್ ವೆಂಕಟೇಶ್ ಮುಂತಾದವರು ಪಾಲ್ಗೊಂಡಿದ್ದರು. ಇವರಿಗೆ ಅರ್ಜುನ್ ಸರ್ಜಾ ಅವರು ಶಾಲು ಹೊದಿಸಿ ಸನ್ಮಾನ ಮಾಡಿದರು. (ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೂಹೂರ್ತದ ಫೋಟೋ ಗ್ಯಾಲರಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ...).

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
Tamil Actor Arjun Sarja is now ready to don the director's hat and is reportedly planning to produce a Tamil-Kannada bilingual romantic thriller film under his home banner. The film written by Arjun will feature Aishwarya as the heroine with kannada actor Chandan as the hero.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada