For Quick Alerts
  ALLOW NOTIFICATIONS  
  For Daily Alerts

  ತಾತಾನಾದ ಸಂಭ್ರಮದಲ್ಲಿ ನಟ ಚಿಯಾನ್ ವಿಕ್ರಮ್

  |

  ತಮಿಳು ಸಿನಿಮಾರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಟ ವಿಕ್ರಮ್ ತಾತನಾದ ಖುಷಿಯಲ್ಲಿದ್ದಾರೆ. ಹೌದು, ವಿಕ್ರಮ್ ಪುತ್ರಿ ಅಕ್ಷಿತಾ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಮುದ್ದಾದ ಮಗುವನ್ನು ಬರಮಾಡಿಕೊಂಡಿರುವ ಚಿಯಾನ್ ಕುಟುಂಬ, ಸಂತಸದ ಅಲೆಯಲ್ಲಿ ತೇಲುತ್ತಿದೆ.

  ಚಿಯಾನ್ ವಿಕ್ರಮ್ ಪುತ್ರಿ ಅಕ್ಷಿತಾ ಮತ್ತು ಪತಿ ಮನು ರಂಜಿತ್ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದಾರೆ. ಈ ಸಂತಸದ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.

  ತಮಿಳು ಸಿನಿಮಾಕ್ಕಾಗಿ ಗನ್ ಹಿಡಿದ ಸ್ವಿಂಗ್ ಮಾಸ್ಟರ್ ಇರ್ಫಾನ್ ಪಠಾಣ್

  ಅಂದಹಾಗೆ ವಿಕ್ರಮ್ ಪುತ್ರಿ ಅಕ್ಷಿತಾ 2017ರಲ್ಲಿ ಮನು ರಂಜಿತ್ ಜೊತೆ ಸಪ್ತಪದಿ ತುಳಿದಿದ್ದರು. ಮನು ರಂಜಿತ್ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಮೊಮ್ಮಗ. ಇವರ ಮದುವೆ ಚೆನ್ನೈನಲ್ಲಿ ಅದ್ದೂರಿಯಾಗಿ ನೆರವೇರಿತ್ತು.

  ಇನ್ನೂ ವಿಕ್ರಮ್ ಪುತ್ರ ಧ್ರುವ್ ಇತ್ತೀಚಿಗೆ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾದ ರಿಮೇಕ್ ನಲ್ಲಿ ಧ್ರುವ್ ಕಾಣಿಸಿಕೊಂಡಿದ್ದರು. ಇತ್ತ ಚಿಯಾನ್ ವಿಕ್ರಮ್ 'ಕೋಬ್ರಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.

  Vijay Deverakonda ತಮ್ಮನಿಗೋಸ್ಕರ ಸಾಲು ಸಾಲು ಟ್ವೀಟ್ ಮಾಡಿದ Rashmika | Filmibeat Kannada

  ಕೋಬ್ರಾ ಚಿತ್ರದಲ್ಲಿ ವಿಕ್ರಮ್ ಗೆ ನಾಯಕಿಯಾಗಿ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜೊತೆಗೆ ವಿಕ್ರಮ್ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶದ 'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಕ್ರಮ್ ಚೋಳ ರಾಜ ಅದಿತ್ಯ ಕರಿಕಾಲನ್ ಪಾತ್ರಕ್ಕೆ ಬಣ್ಣಹಚ್ಚುತ್ತಿದ್ದಾರೆ.

  English summary
  Tamil Actor chiyaan vikram becomes a grandfather. His daughter Akshita welcomes baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X