»   » ತಮಿಳು ನಟ ರಾಘವ ಲಾರೆನ್ಸ್ 'ಶಿವಲಿಂಗ' ರೀಮೇಕ್ ಮಾಡ್ತಾರಾ?

ತಮಿಳು ನಟ ರಾಘವ ಲಾರೆನ್ಸ್ 'ಶಿವಲಿಂಗ' ರೀಮೇಕ್ ಮಾಡ್ತಾರಾ?

Posted By:
Subscribe to Filmibeat Kannada

ಥ್ರಿಲ್ಲರ್ ನಿರ್ದೇಶಕ ಪಿ.ವಾಸು ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಒಂದಾಗಿರುವ 'ಶಿವಲಿಂಗ' ಸಿನಿಮಾ ನಮ್ಮ ರಾಜ್ಯ ಮಾತ್ರವಲ್ಲದೇ, ಪಕ್ಕದ ರಾಜ್ಯದಲ್ಲೂ ಸಖತ್ ಸೌಂಡ್ ಮಾಡುತ್ತಿದ್ದು, ಸೌತ್ ಸ್ಟಾರ್ ನಟರೂ ಸಿನಿಮಾ ನೋಡಿ ಮೆಚ್ಚುಗೆಯ ಮಾತಗಳನ್ನಾಡುತ್ತಿದ್ದಾರೆ.

ತೆರೆಗೆ ಅಪ್ಪಳಿಸಿದ ಕೇವಲ ಒಂದೇ ವಾರದಲ್ಲಿ ಕೋಟಿ ಕೋಟಿ ದುಡ್ಡು ಬಾಚಿಕೊಂಡಿರುವ ಶಿವಣ್ಣ ಮತ್ತು ವೇದಿಕಾ ಜೋಡಿಯ 'ಶಿವಲಿಂಗ' ಚಿತ್ರಕ್ಕೆ ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಬಹು ಪರಾಕ್ ಎಂದಿದ್ದರು.[ಶಿವಣ್ಣ 'ಶಿವಲಿಂಗ' ಮೇಲೆ ಸೂಪರ್ ಸ್ಟಾರ್ ರಜನಿಕಾಂತ್ ಕಣ್ಣು!]


ಇನ್ನು 'ಶಿವಲಿಂಗ' ಸಿನಿಮಾ ತಮಿಳು ಮತ್ತು ತೆಲುಗು ಭಾಷೆಗೆ ರೀಮೇಕ್ ಆಗುತ್ತೆ ಎಂದು ಸಿನಿಮಾ ಬಿಡುಗಡೆ ಆದ ಒಂದೇ ವಾರದಲ್ಲಿ ಎಲ್ಲಾ ಕಡೆ ಸುದ್ದಿಯಾಗಿತ್ತು.[ಶಿವಣ್ಣನ 'ಶಿವತಾಂಡವ'ಕ್ಕೆ ಬೆಚ್ಚಿ ಬಿದ್ದ ಬಾಕ್ಸಾಫೀಸ್]


ಅಂದಹಾಗೆ ರಜನಿಕಾಂತ್ ಅವರು ಸಿನಿಮಾ ನೋಡಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ತಮಿಳು ನಿರ್ದೇಶಕ ಕಮ್ ನಟ, ನಿರ್ದೇಶಕ ಪಿ.ವಾಸು ನಿರ್ದೇಶನದ 'ಶಿವಲಿಂಗ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅದು ಯಾರೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


ತಮಿಳು ನಟ ಕಮ್ ನಿರ್ದೇಶಕ ರಾಘವ ಲಾರೆನ್ಸ್

ಚೆನ್ನೈನಲ್ಲಿ ನಡೆದಿದ್ದ 'ಶಿವಲಿಂಗ' ಸ್ಪೆಷಲ್ ಶೋ ನಲ್ಲಿ ನಿರ್ದೇಶಕ ಪಿ.ವಾಸು ಮತ್ತವರ ಮಗ ತಮಿಳು ನಟ ಶಕ್ತಿ ಅವರ ಜೊತೆಗೂಡಿ 'ಕಾಂಚನಾ' ಚಿತ್ರದ ಖ್ಯಾತಿಯ ತಮಿಳು ನಟ-ನಿರ್ದೇಶಕ ರಾಘವ ಲಾರೆನ್ಸ್ ಅವರು 'ಶಿವಲಿಂಗ' ಸಿನಿಮಾ ನೋಡಿ ಬಹಳ ಮೆಚ್ಚಿಕೊಂಡಿದ್ದಾರೆ.[ತಮಿಳು-ತೆಲುಗಿನಲ್ಲು ಸದ್ದು ಮಾಡಲಿದೆಯಾ ಶಿವಣ್ಣನ 'ಶಿವಲಿಂಗ']


ನಟ ಶಕ್ತಿ

ನಿರ್ದೇಶಕ ಪಿ.ವಾಸು ಅವರ ಮಗ ನಟ ಶಕ್ತಿ ಅವರು ತಮಿಳು ಚಿತ್ರರಂಗದಲ್ಲಿ ಪರಿಚಿತರಾದರೂ ಅಷ್ಟಾಗಿ ಯಶಸ್ಸು ಗಳಿಸಿದ ನಟ ಸ್ಯಾಂಡಲ್ ವುಡ್ ನಲ್ಲಿ ಕೇವಲ ಒಂದೇ ಸಿನಿಮಾದಲ್ಲಿ ತಮ್ಮ ನಟನೆಯ ಮೂಲಕ ಏಕ್ ಧಂ ಹಿಟ್ ಹೀರೋ ಆದರು. 'ಶಿವಲಿಂಗ' ಚಿತ್ರದಲ್ಲಿ ನಟ ಶಕ್ತಿ ಅವರು 'ರಹೀಂ' ಪಾತ್ರದಲ್ಲಿ ಮಿಂಚಿದ್ದರು. ನಟ ಶಕ್ತಿ ಅವರೇ ಈ ಚಿತ್ರದ ಕೇಂದ್ರ ಬಿಂದುವಾಗಿದ್ದು, ಇಡೀ ಕಥೆ ಇವರ ಸುತ್ತ ಸುತ್ತುತ್ತದೆ.['ಶಿವಲಿಂಗ'ದಲ್ಲಿ ರಹೀಂ ಪಾತ್ರ ಮಾಡಿದವರು ಯಾರು ಗೊತ್ತಾ?]


ಹಾರರ್ ಇಷ್ಟಪಡುವ ರಾಘವ್

ತಮಿಳು ನಟ-ಕಮ್ ನಿರ್ದೇಶಕ ರಾಘವ ಲಾರೆನ್ಸ್ ಅವರು ಹಾರರ್ ಸಿನಿಮಾಗಳನ್ನು ನಿರ್ದೇಶನ ಮಾಡುವುದರಲ್ಲಿ ಮತ್ತು ಹಾರರ್ ಸಿನಿಮಾಗಳಲ್ಲಿ ನಟಿಸುವುದರಲ್ಲೇ ಖ್ಯಾತಿ ಗಳಿಸಿದ್ದು, ಇದೀಗ 'ಶಿವಲಿಂಗ' ಸಿನಿಮಾ ನೋಡಿ ತಮಿಳು ಭಾಷೆಗೆ ರೀಮೇಕ್ ಮಾಡಿದ್ರೂ ಯಾವುದೇ ಅಚ್ಚರಿ ಇಲ್ಲ. ಅವರು ನಿರ್ದೇಶಿಸಿ ನಟಿಸಿದ್ದ 'ಕಾಂಚನಾ' ಮತ್ತು 'ಕಾಂಚನಾ 2' ಹಾರರ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದ್ದವು.


'ಶಿವಲಿಂಗ' ನೋಡಿ 3 ವರ್ಷದ ಮಗುವಿನ ರಿಯಾಕ್ಷನ್

ಶಿವಣ್ಣ ಅವರ 'ಶಿವಲಿಂಗ' ಸಿನಿಮಾ ನೋಡಿದ 3 ವರ್ಷದ ಮಗುವೊಂದು ಕಾಮಿಡಿ ನಟ ಸಾಧು ಮಹರಾಜ್ ಅವರ ಕಾಮಿಡಿಗಳನ್ನು ನೋಡಿ ಕಿಲ ಕಿಲನೇ ನಗುತ್ತಿತ್ತು. ಎಂದು ನಿರ್ದೇಶಕ ಪಿ ವಾಸು ಅವರು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.


ಟ್ರೋಲ್ ಹೈಕಳ ರಿಸರ್ಚ್ ನೋಡಿ

'ಶಿವಲಿಂಗ' ಸಿನಿಮಾದಲ್ಲಿ ಬಿರಿಯಾನಿ ಎಂಬುದು ಒಂದು ಪ್ರಮುಖ ಅಂಶವಾಗಿದ್ದು, ಇದನ್ನೇ ಇಟ್ಟುಕೊಂಡು ಟ್ರೋಲ್ ಹೈಕಳು ಸಖತ್ ಆಗಿರೋ ಕಾಮಿಡಿ ಒಂದನ್ನು ಮಾಡಿದ್ದಾರೆ. ಚಿತ್ರದಲ್ಲಿ ನೀವೇ ನೋಡಿ.


ತಮಿಳಿನ ಖ್ಯಾತ ನಿರ್ದೇಶಕ ಶಂಕರ್

ನಟ ರಾಘವ ಲಾರೆನ್ಸ್ ಜೊತೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರು ಕೂಡ 'ಶಿವಲಿಂಗ' ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ನಟಿ ವೇದಿಕಾ ಅವರ ನಟನೆಯನ್ನು ಹೊಗಳಿದ್ದಾರೆ.


ಟ್ರೋಲ್ ಹೈಕಳ ಮತ್ತೊಂದು ಕೊಡುಗೆ

ಅಂದು 'ಆಪ್ತಮಿತ್ರ' ಸಿನಿಮಾದಲ್ಲಿ ನಟಿ ಸೌಂದರ್ಯ, ಇಂದು 'ಶಿವಲಿಂಗ' ಚಿತ್ರದಲ್ಲಿ ನಟಿ ವೇದಿಕಾ, ಮುಂದೆ .....? ಚಿತ್ರದಲ್ಲಿ ನಾನೇ ಎಂದು ಕಾಮಿಡಿ ಕಿಂಗ್ ಸಾಧು ಮಹರಾಜ್ ಅವರ ಬಗ್ಗೆ ಟ್ರೋಲ್ ಹೈಕಳು ಮಾಡಿರುವ ಮತ್ತೊಂದು ಕಾಮಿಡಿ.


ಅಂಬಿ-ಶಿವಣ್ಣ ಮಾತು-ಕತೆ

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಮಾತು-ಕತೆಯನ್ನು ಟ್ರೋಲ್ ಹೈಕಳು ಈ ರೀತಿ ಅರ್ಥ ಮಾಡಿಕೊಂಡಿದ್ದಾರೆ ನೋಡಿ.(ಚಿತ್ರಕೃಪೆ: ಚಿತ್ರಲೋಕ)


English summary
Tamil Actor Raghava Lawrence watched Kannada Actor Shiva Rajkumar starrer 'Shivalinga' movie and appreciated. Kannada Actor Shiva Rajkumar, Actress Vedika in the lead role. The movie is directed by P.Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada