»   » ನೀರು ಕೊಟ್ಟರೂ ಬೇಸರ ಮಾಡಿಕೊಂಡ ತಮಿಳು ನಟ ಸಿಂಬು: ಕಾರಣವೇನು.?

ನೀರು ಕೊಟ್ಟರೂ ಬೇಸರ ಮಾಡಿಕೊಂಡ ತಮಿಳು ನಟ ಸಿಂಬು: ಕಾರಣವೇನು.?

Posted By:
Subscribe to Filmibeat Kannada

ಏಪ್ರಿಲ್ 11 ರಂದು ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೂ ಸಮಯ ನೀಡಿದ್ದ ತಮಿಳು ನಟ ಸಿಂಬು ಕನ್ನಡಿಗರು 'ಒಂದು ಲೋಟ ನೀರು ಕೊಡಿ' ಎಂದು ಮನವಿ ಮಾಡಿಕೊಂಡಿದ್ದರು.

ಮಾನವೀಯತೆ ದೃಷ್ಟಿಯಿಂದ ಕನ್ನಡಿಗರು ನೀರು ಕೊಡುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದ ಸಿಂಬು ಅವರ ಬೇಡಿಕೆಗೆ ಕನ್ನಡಿರಗರು ಬೆಲೆ ಕೊಟ್ಟರು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಗೌರವಿಸಬೇಕು, ಸಹಾಯ ಮಾಡಬೇಕು ಎಂಬ ಮಾನವೀಯತೆ ಉದ್ದೇಶದಿಂದ ಕನ್ನಡಿಗರು ತಮಿಳರಿಗೆ ಒಂದು ಲೋಟ ನೀರು ನೀಡಿದರು.

ಕನ್ನಡಿಗರಿಗೆ ಥ್ಯಾಂಕ್ಸ್ ಹೇಳಿದ ಸಿಂಬು ತಮಿಳು ವಾಹಿನಿಗಳ ವಿರುದ್ಧ ಬೇಸರ

ಕನ್ನಡಿಗರ ಈ ವಿಶಾಲ ಮನೋಭಾವಕ್ಕೆ ಭಾವುಕರಾದ ಸಿಂಬು ಸಂತೋಷ ವ್ಯಕ್ತಪಡಿಸಿದರು. ಸಮಸ್ತ ಕನ್ನಡ ಹಾಗೂ ತಮಿಳು ಜನಕ್ಕೆ ಧನ್ಯವಾದ ಅರ್ಪಿಸಿದರು. ಆದ್ರೆ, ಕೆಲವೊಂದು ವಿಚಾರಕ್ಕೆ ತೀವ್ರ ಬೇಸರ ಮಾಡಿಕೊಂಡ ನಟ ಸಿಂಬು, ''ದೇವರು ಇದ್ದಾನೆ'' ಎಂದು ತಮ್ಮ ಅಸಹಾಕತೆಯನ್ನ ಹೊರಹಾಕಿದರು. ನೀರೂ ಕೊಟ್ಟರು ಸಿಂಬು ಬೇಸರ ಮಾಡಿಕೊಂಡಿದ್ದೇಕೆ.? ಮುಂದೆ ಓದಿ.....

ನಾವು ಒಂದಾಗುವುದು ಕೆಲವರಿಗೆ ಇಷ್ಟವಿಲ್ಲ

ಕನ್ನಡಿಗರು ಮತ್ತು ತಮಿಳು ಜನರು ಒಂದಾಗುವುದು, ಒಗ್ಗಟ್ಟಾಗಿರುವುದು ಕೆಲವರಿಗೆ ಇಷ್ಟವಿಲ್ಲ. ಇವರಿಗೆ ನೀರು ಮುಖ್ಯವಲ್ಲ, ಮತ್ತು ಎಲ್ಲರೂ ಒಂದಾಗಿರುವುದು ಮುಖ್ಯವಲ್ಲ. ಅವರ ಅಜೆಂಡಾ ಬೇರೆ ಇದೆ. ಕಾವೇರಿ ಸಮಸ್ಯೆಯನ್ನ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೇ ಹೊರತು, ಜನರು ಜೀವನ ಮುಖ್ಯವಲ್ಲ'' ಎಂದು ಸಿಂಬು ಹೇಳಿದ್ದಾರೆ.

ತಮಿಳು ನಟ ಸಿಂಬು ಕರೆಗೆ ಓಗೊಟ್ಟು ತಮಿಳರಿಗೆ ನೀರು ಕೊಟ್ಟ ಕನ್ನಡಿಗರು.!

ಮಾಧ್ಯಮಗಳು ವಿರುದ್ಧ ಕಿಡಿಕಾರಿದ ಸಿಂಬು

ಕರ್ನಾಟದಲ್ಲಿ ಒಂದು ತಮಿಳುನಾಡು ಬಸ್ ಅಥವಾ ಒಬ್ಬ ತಮಿಳು ವ್ಯಕ್ತಿಯನ್ನ ಎಲ್ಲರೂ ಸೇರಿ ಹೊಡಿಯುತ್ತಾರೆ ಎಂಬ ವಿಡಿಯೋ ಅಥವಾ ಸುದ್ದಿಯನ್ನ ಎಲ್ಲ ಮಾಧ್ಯಮದವರು ದೊಡ್ಡ ದೊಡ್ಡದಾಗಿ ಪ್ರಸಾರ ಮಾಡಿ ಇಲ್ಲಿನ ಜನರಲ್ಲಿ ದ್ವೇಷ ಹುಟ್ಟುಹಾಕಿದ್ದಾರೆ. ಆದ್ರೆ, ಇಂದು ಕರ್ನಾಟಕದಲ್ಲಿ ಅಷ್ಟು ಜನ ಕನ್ನಡಿಗರು, ತಮಿಳಿಗರಿಗೂ ನೀರು ಕೊಟ್ಟಿದ್ದು ಕೆಲವೇ ಕೆಲವೇ ಮಾಧ್ಯಮಗಳು ಮಾತ್ರ ಪ್ರಸಾರ ಮಾಡಿದೆ ಹೊರತು, ಉಳಿದವರು ಈ ಸುದ್ದಿಯನ್ನ ಪ್ರಸಾರ ಮಾಡದೇ ನಿರ್ಲಕ್ಷಿಸಿದ್ದಾರೆ. ಇದು ಏನು ಹೇಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಮನುಷ್ಯತ್ವಕ್ಕಿಂತ ಅವರ ಅಜೆಂಡಾ ಮುಖ್ಯ

ಮನುಷ್ಯತ್ವಕ್ಕೆ ಬೆಲೆ ನೀಡಿರುವ ಕನ್ನಡಿಗರು ನೀರು ಕೊಡಲು ತಯಾರಿದ್ದಾರೆ. ಆದ್ರೆ, ರಾಜಕೀಯ ವ್ಯಕ್ತಿಗಳು ಅವರದ್ದೇ ಉದ್ದೇಶಕ್ಕಾಗಿ ಅಡ್ಡಹಾಕುತ್ತಿದ್ದಾರೆ. ಎರಡು ರಾಜ್ಯದ ಜನರ ಮಧ್ಯೆ ಜಗಳಕ್ಕೆ ಕಾರಣವಾಗುತ್ತಿದ್ದಾರೆ. ಇಬ್ಬರಲ್ಲೂ ದ್ವೇಷ ಮೂಡಿಸುತ್ತಿದ್ದಾರೆ ಎಂದು ಸಿಂಬು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ತಮಿಳು ನಟನ ಭಾವನಾತ್ಮಕ ಭಾಷಣ.!

ನಾವು ಒಗ್ಗಟ್ಟಾಗಿದ್ದೇವೆ ಅದು ಸಾಕು

ನನ್ನ ಮನವಿಯನ್ನ ಗೌರವಿಸಿ ನೀವು ನೀರು ಕೊಟ್ಟಿದ್ದೀರಾ. ಮನುಷ್ಯತ್ವದ ಮುಂದೆ ಬೇರೆ ಏನು ಗೆಲ್ಲಲ್ಲ. ನಾನು ನೀವು ಚೆನ್ನಾಗಿದ್ದರೇ ಸಾಕು. ಯಾರೂ ಏನೇ ಪ್ರತಿಭಟನೆ ಮಾಡಲಿ, ನಾವು ಏನೂ ಮಾಡಬೇಕು ಅದು ಮಾಡಿಯೃಎ ತೀರುತ್ತೇವೆ. ನಮ್ಮೊಂದಿಗೆ ಆ ದೇವರಿದ್ದಾನೆ ಎಂದು ಸಿಂಬು ತಮ್ಮ ಅಸಹಾಯಕತೆಯನ್ನ ಹೊರಹಾಕಿದ್ದಾರೆ.

ತಮಿಳು ನಟ ಸಿಂಬು ಮಾತಿಗೆ ವಾಟಾಳ್ ನಾಗರಾಜ್ ಕೊಟ್ಟ ಪ್ರತಿಕ್ರಿಯೆ ಹೀಗಿದೆ

ಕನ್ನಡಿಗರಿಗೆ ಧನ್ಯವಾದ ತಿಳಿಸಿದ ಸಿಂಬು

ಇನ್ನು ಸಿಂಬು ಅವರ ಮನವಿಯಂತೆ 'ಒಂದು ಲೋಟ ನೀರು' ಕೊಟ್ಟ ಕನ್ನಡಿಗರಿಗೆ ತಮಿಳು ನಟ ಸಿಂಬು ವಿಶೇಷ ಧನ್ಯವಾದಗಳನ್ನ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಂಬಿ ಅವರ 'UniteForHumanity' ಅಭಿಯಾನಕ್ಕೆ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

English summary
Tamil actor simbu bored on cauvery water dispute. earlier, Tamil Actor Simbu had requesting to Kannadigas for give Water to Tamilians. Simbu has thanked all Kannadigas.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X