For Quick Alerts
  ALLOW NOTIFICATIONS  
  For Daily Alerts

  ತೆರಿಗೆ ವಂಚನೆ ಆರೋಪದಲ್ಲಿ ತಮಿಳು ನಟ ವಿಜಯ್ ಗೆ ಐಟಿ ವಿಚಾರಣೆ

  |

  ಆದಾಯ ತೆರಿಗೆ ವಂಚನೆ ಆರೋಪದಲ್ಲಿ ತಮಿಳು ನಟ ವಿಜಯ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ವಿಜಯ್ ಅಭಿನಯದ 'ಬಿಗಿಲ್' ಸಿನಿಮಾದ ಸಂಬಂಧಪಟ್ಟಂತೆ ಲೆಕ್ಕಾಚಾರದಲ್ಲಿ ವಂಚನೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

  ಈ ಹಿನ್ನೆಲೆ ವಿಜಯ್ ಅವರನ್ನು ಪ್ರಶ್ನಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ವಿಜಯ್ ಅವರನ್ನು ಮಾತ್ರವಲ್ಲ, ಬಿಗಿಲ್ ಸಿನಿಮಾ ನಿರ್ಮಿಸಿದ್ದ ಎಜಿಎಸ್ ಪ್ರೊಡಕ್ಷನ್ ಸಂಸ್ಥೆ ಹಾಗೂ ಫೈನ್ಸಾಯಿರ್ ಅನ್ಬು ಚೆಲಿಯಾನ್ ಅವರ ಆಸ್ತಿ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.

  ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ವಿಜಯ್?ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ವಿಜಯ್?

  ಕಲ್ಪತಿ ಎಸ್.ಅಘೋರಂ, ಕಲ್ಪತಿ ಎಸ್.ಗಣೇಶ್, ಕಲ್ಪತಿ ಎಸ್.ಸುರೇಶ್ ಈ ಮೂವರು ಎಜಿಎಸ್ ಪ್ರೊಡಕ್ಷನ್ ಮಾಲೀಕರು. ಈ ಮೂವರು ಸೇರಿ ಬಿಗಿಲ್ ಸಿನಿಮಾ ನಿರ್ಮಿಸಿದ್ದರು. ಅಟ್ಲಿ ಈ ಚಿತ್ರ ನಿರ್ದೇಶಿಸಿದ್ದರು.

  ಕನ್ನಡಕ್ಕೆ ತಮಿಳು ನಟ ವಿಜಯ್ ಅಭಿನಯದ 'ಬಿಗಿಲ್'!ಕನ್ನಡಕ್ಕೆ ತಮಿಳು ನಟ ವಿಜಯ್ ಅಭಿನಯದ 'ಬಿಗಿಲ್'!

  100 ಕೋಟಿಗೆ ಹೆಚ್ಚು ಬಂಡವಾಳ ಹಾಕಿ ಬಿಗಿಲ್ ಸಿನಿಮಾ ಮಾಡಲಾಗಿತ್ತು. ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭವನ್ನು ಚಿತ್ರ ತಂದುಕೊಟ್ಟಿತ್ತು. ಸಹಜವಾಗಿ ಗಳಿಕೆ ಹಾಗೂ ಸಂಭಾವನೆಯಲ್ಲಿ ವ್ಯತ್ಯಾಸವಾಗಿರಬಹುದು. ಈ ಅನುಮಾನದ ಮೇಲೆ ಐಟಿ ಅಧಿಕಾರಿಗಳು ವಿಚಾರಣೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  2017ರಲ್ಲಿ ತಮಿಳುನಾಡು ಬಿಜೆಪಿ ವಿಜಯ್ ಅಭಿನಯದ ಮೆರ್ಸಲ್ ಚಿತ್ರವನ್ನು ವಿರೋಧ ಮಾಡಿತ್ತು. ಜಿಎಸ್ ಟಿ ಗೆ ಸಂಬಂಧಪಟ್ಟಂತೆ ಮೆರ್ಸಲ್ ಚಿತ್ರದಲ್ಲಿ ಡೈಲಾಗ್ ಇತ್ತು. ಅದನ್ನು ವಿರೋಧಿಸಿದ್ದರು.

  ಇನ್ನು ಸಂಭಾವನೆ ವಿಚಾರದಲ್ಲೂ ವಿಜಯ್ ಭಾರಿ ಸದ್ದು ಮಾಡಿದ್ದರು. ತಮ್ಮ ಮುಂದಿನ ಚಿತ್ರದ ನಟನೆಗಾಗಿ 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಈ ಮೂಲಕ ರಜನಿಕಾಂತ್ ಅವರನ್ನು ಹಿಂದಿಕ್ಕಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದ್ದವು.

  English summary
  Tamil super star Vijay is questioned by Income Tax Officer.
  Wednesday, February 5, 2020, 17:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X