»   » 12 ಲಕ್ಷ ಬೆಲೆಬಾಳುವ ನಿಶ್ಚಿತಾರ್ಥದ ಉಂಗುರ ನಾಪತ್ತೆ

12 ಲಕ್ಷ ಬೆಲೆಬಾಳುವ ನಿಶ್ಚಿತಾರ್ಥದ ಉಂಗುರ ನಾಪತ್ತೆ

Posted By:
Subscribe to Filmibeat Kannada

ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ಅವರ ಮಗಳು ಅಕ್ಷಿತಾ ಡಿ.ಎಂ.ಕೆ ಕರುಣಾನಿಧಿ ಅವರ ಮರಿ ಮೊಮ್ಮಗ, ಮನು ರಂಜಿತ್ ಜೊತೆ ಇತ್ತೀಚೆಗೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

'ಕೆವಿನ್ ಕೇರ್' ಮಾಲೀಕ ರಂಗನಾಥನ್ ಅವರ ಪುತ್ರ ಮನು ರಂಜಿತ್ ಮತ್ತು ನಟ ವಿಕ್ರಮ್ ಮಗಳು ಅಕ್ಷಿತಾ ಅವರು ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಕೊನೆಗೆ ಎರಡೂ ಮನೆಯ ಸಮ್ಮತಿಯ ಮೇರೆಗೆ ಮದುವೆ ನಿಶ್ಚಯವಾಗಿತ್ತು.[ಚಿತ್ರಗಳು: ನಟ ವಿಕ್ರಮ್ ಪುತ್ರಿ ಅಕ್ಷಿತಾ ಗೆ ಚೆನ್ನೈನಲ್ಲಿ ಅದ್ದೂರಿ ನಿಶ್ಚಿತಾರ್ಥ]

Tamil Actor Vikram daughter's engagement diamond ring stolen

ಆದ್ರೆ ಇದೀಗ ವಿಷಯ ಇದಲ್ಲ, ವಿಕ್ರಮ್ ಅವರ ಮಗಳು ಅಕ್ಷಿತಾ, ಇದೀಗ ಸುಮಾರು 12 ಲಕ್ಷ ಬೆಲೆಬಾಳುವ ತಮ್ಮ ವಜ್ರದುಂಗುರವನ್ನು ಕಳೆದುಕೊಂಡಿದ್ದಾರೆ.

ಆಗಸ್ಟ್ 2, ಮಂಗಳವಾರ ಮಧ್ಯಾಹ್ನದ ವೇಳೆ ಅಕ್ಷಿತಾ ಅವರು ಚೆನ್ನೈನ ಖಾದರ್ ನವಾಸ್ ಖಾನ್ ರಸ್ತೆ ಬಳಿ ಇರುವ ಐಸ್ ಕ್ರೀಮ್ ಪಾರ್ಲರ್ ಗೆ ತಮ್ಮ ಸ್ನೇಹಿತೆಯರ ಜೊತೆ ಭೇಟಿ ನೀಡಿದ್ದರು.[ವಿಕ್ರಮ್ ಸಂಭಾವನೆಯ ಅರ್ಧ ಮೊತ್ತ ಸೇರಿದ್ದು ಯಾರಿಗೆ?]

Tamil Actor Vikram daughter's engagement diamond ring stolen

ಪಾರ್ಲರ್ ನಿಂದ ವಾಪಸ್ ಕಾರ್ ಪಾರ್ಕಿಂಗ್ ಬಳಿ ಬಂದಾಗ ತಮ್ಮ ಕೈಯಲ್ಲಿನ ನಿಶ್ಚಿತಾರ್ಥದ ಉಂಗುರ ನಾಪತ್ತೆಯಾಗಿರುವುದನ್ನು ಗಮನಿಸಿ ಅಕ್ಷಿತಾ ಹೌಹಾರಿದ್ದಾರೆ. ಭಾರಿ ಬೆಲೆಬಾಳುವ ವಜ್ರದುಂಗುರ ಕಳೆದುಕೊಂಡು ಗಾಬರಿಯಿಂದ ತಂದೆ ವಿಕ್ರಮ್ ಅವರಿಗೆ ಅಕ್ಷಿತಾ ಅವರು ಸುದ್ದಿ ಮುಟ್ಟಿಸಿದ್ದಾರೆ.

ತದನಂತರ ಚೆನ್ನೈನ ಥೌಸಂಡ್ ಲೈಟ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತಕ್ಷಣ ಪ್ರತಿಕ್ರಿಯಿಸಿ, ಐಸ್ ಕ್ರೀಮ್ ಪಾರ್ಲರ್ ನ ಸಿಸಿಟಿವಿ ಫುಟೇಜ್ ಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ.

Tamil Actor Vikram daughter's engagement diamond ring stolen

ಅಬ್ಬಾ...ಸಾಮಾನ್ಯವಾಗಿ ಬೆಲೆಬಾಳುವ ಉಂಗುರ ಕಳೆದು ಹೋದರೆ ಎದೆ ಧಸಕ್ಕೆನ್ನುತ್ತದೆ, ಇನ್ನು 12 ಲಕ್ಷ ಬೆಲೆಬಾಳುವ ವಜ್ರದುಂಗುರು, ಅದೂ ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದೆ ಅಂದ್ರೆ ವಿಕ್ರಮ್ ಕುಟುಂಬಕ್ಕೆ ಹೇಗಾಗಿರಬೇಡ ನೀವೇ ಊಹಿಸಿ...

English summary
Tamil Actor Vikram's daughter Akshita who who got engaged to DMK president M Karunanidhi's great grandson Manu Ranjith recently has filed a complaint that her engagement diamond ring has been stolen. In her complaint, she said that when she came out of a popular ice cream outlet the ring was missing from her hand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada