»   » ಕನ್ನಡಕ್ಕೆ ಬಂದ್ರಾ ತಮಿಳು ನಟ ವಿಶಾಲ್?

ಕನ್ನಡಕ್ಕೆ ಬಂದ್ರಾ ತಮಿಳು ನಟ ವಿಶಾಲ್?

Posted By:
Subscribe to Filmibeat Kannada

ಕಾಲಿವುಡ್ ನ ಆಕ್ಷನ್ ಹೀರೋ ವಿಶಾಲ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರಾ? ಕನ್ನಡ ಚಿತ್ರಕ್ಕಾಗಿ ವಿಶಾಲ್ ಬಣ್ಣ ಹಚ್ಚಿದ್ದಾರಾ? ಈ ಫೋಟೋ ನೋಡಿದ್ರೆ, ನಿಮಗೆ ಇಂತಹ ಪ್ರಶ್ನೆಗಳು ಮೂಡುವುದು ಸಹಜ.

ಆದ್ರೆ, ನೀವಂದುಕೊಂಡಹಾಗೆ ವಿಶಾಲ್ ಕನ್ನಡ ಚಿತ್ರದಲ್ಲಿ ನಟಿಸುತ್ತಿಲ್ಲ. ಕನ್ನಡ ಚಿತ್ರಕ್ಕೆ ಶುಭವಾಗಲಿ ಅಂತ ಹಾರೈಸೋಕೆ ಅವರು ಆಗಮಿಸಿದ್ದರು ಅಷ್ಟೆ. ಅಸಲಿಗೆ, ಅವರು ಶುಭ ಕೋರಿದ ಕನ್ನಡ ಚಿತ್ರ 'ರಾಕ್ಷಸಿ'.

Tamil Actor Vishal wishes 'Rakshasi' team

ಶ್ರೀ ಲಕ್ಷ್ಮಿ ವೃಷಾದ್ರಿ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ರಾಕ್ಷಸಿ' ಚಿತ್ರತಂಡಕ್ಕೆ ತಮಿಳಿನ ಜನಪ್ರಿಯ ನಟ ವಿಶಾಲ್ ಆಗಮಿಸಿ ಶುಭ ಕೋರಿದರು. ಎ.ಆರ್.ಮುರುಗದಾಸ್ ಅವರ ಶಿಷ್ಯ ಅಶ್ರಫ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ['ರುದ್ರತಾಂಡವ' ಟ್ರೇಲರ್ ಗೆ ಮಾರುಹೋದ ತಮಿಳು ನಟ]

Tamil Actor Vishal wishes 'Rakshasi' team

ತಮಿಳು ಸಿನಿ ಅಂಗಳದಲ್ಲಿ ವಿಶಾಲ್ ಜೊತೆ ಅಶ್ರಫ್ ಒಡನಾಟ ಇತ್ತು. ಈಗ ಕನ್ನಡ ನೆಲದಲ್ಲಿ ಅವರು ಚಿತ್ರ ನಿರ್ದೇಶಿಸುತ್ತಿರುವ ಕಾರಣ ತುಂಬು ಹೃದಯದಿಂದ ವಿಶಾಲ್ ಶುಭ ಕೋರಿದ್ದಾರೆ. ವಿಶೇಷ ಅಂದ್ರೆ, 'ರಾಕ್ಷಸಿ' ಚಿತ್ರದಲ್ಲಿ ವಿಶಾಲ್ ತಂದೆ ಜಿ.ಕೆ.ರೆಡ್ಡಿ ಕೂಡ ಅಭಿನಯಿಸುತ್ತಿದ್ದಾರೆ. ['ಮಂಡ್ಯ'ದ ದೇಸಿ ಚೆಲುವೆ ಸಿಂಧು ಲೋಕನಾಥ್ ಮಿಸ್ಸಿಂಗ್]

Tamil Actor Vishal wishes 'Rakshasi' team

ಸಿಂಧು ಲೋಕನಾಥ್, ಕುರಿ ಪ್ರತಾಪ್, ಕೆಂಪೇಗೌಡ, ನವರಸನ್, ಸುಜಿತ್, ಕೃಷ್ಣಮೂರ್ತಿ ಕೌತಾರ್ ಸೇರಿದಂತೆ ಹಲವರು 'ರಾಕ್ಷಸಿ' ಚಿತ್ರದ ತಾರಾಗಣದಲ್ಲಿದ್ದಾರೆ. ಅಂದ್ಹಾಗೆ, 'ರಾಕ್ಷಸಿ' ತಮಿಳಿನ ಸೂಪರ್ ಹಿಟ್ 'ಪಿಪಾಸು' ಚಿತ್ರದ ರೀಮೇಕ್.

English summary
Tamil Actor Vishal visited the sets of Kannada movie 'Rakshasi' to convey heartily wishes to the team. 'Rakshasi' is directed by Ashraf, associate to Tamil Director A.R.Murugadoss. 'Rakshasi' features Kannada Actress Sindhu Lokanath in lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada