»   » ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು 'ಬಾಹುಬಲಿ'ಯ ಪಟ್ಟಾಭಿಷೇಕ ದೃಶ್ಯ!

ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು 'ಬಾಹುಬಲಿ'ಯ ಪಟ್ಟಾಭಿಷೇಕ ದೃಶ್ಯ!

By: BK
Subscribe to Filmibeat Kannada

ಭಾರತದ ಬಹುನಿರೀಕ್ಷಿತ 'ಬಾಹುಬಲಿ-2' ಚಿತ್ರದ ರೋಚಕ ದೃಶ್ಯ ಬಿಡುಗಡೆಗೂ ಮುಂಚೆಯೇ ಲೀಕ್ ಆಗಿದೆ. ಚಿತ್ರ ಬಿಡುಗಡೆಗೆ ಇನ್ನು ಒಂದು ದಿನ ಬಾಕಿಯಿದ್ದು, ಬೆಳ್ಳಿತೆರೆಯಲ್ಲಿ ಕಥೆ ಅನಾವರಣವಾಗುವುದಕ್ಕೂ ಮುಂಚೆಯೇ ವಾಟ್ಸಪ್, ಫೇಸ್ ಬುಕ್ ಗಳಲ್ಲಿ 'ಬಾಹುಬಲಿ' ಹರಿದಾಡುತ್ತಿದೆ.

ಅಂದ್ಹಾಗೆ, ಈಗ ಲೀಕ್ ಆಗಿರುವ ದೃಶ್ಯ 'ಬಾಹುಬಲಿ-2' ಚಿತ್ರಕ್ಕೆ ಬಹುಮುಖ್ಯವಾದದ್ದು. ಬಾಹುಬಲಿ ಭಾಗ-1ರ ಕ್ಲೈಮ್ಯಾಕ್ಸ್ ನೋಡಿದ್ದವರು ಈ ದೃಶ್ಯವನ್ನ ನೋಡಿದರೇ ಖಂಡಿತಾ ಶಾಕ್ ಆಗ್ತಾರೆ.['ಬಾಹುಬಲಿ' ಬೆಂಬಲಿಸಿ ಕನ್ನಡ ಚಿತ್ರಗಳಿಗೆ ತೊಂದರೆ ಕೊಟ್ಟರೆ ಹುಷಾರ್.!]

ಅಷ್ಟಕ್ಕೂ, 'ಬಾಹುಬಲಿ-2' ಚಿತ್ರದ ಯಾವ ದೃಶ್ಯ ಲೀಕ್ ಆಗಿದೆ ಎಂದು ತಿಳಿದುಕೊಳ್ಳಲು ಮುಂದೆ ಓದಿ......

'ಪಟ್ಟಾಭಿಷೇಕ' ದೃಶ್ಯ ಲೀಕ್!

ಮಾಹಿಶ್ಮತಿ ಸಾಮ್ರಾಜ್ಯದ ಅಧಿಪತಿ ಯಾರು ಎಂಬುದಕ್ಕೆ 'ಬಾಹುಬಲಿ ದಿ ಬಿಗಿನಿಂಗ್' ಚಿತ್ರದಲ್ಲಿ ಯುದ್ಧ ನಡೆದಿತ್ತು. ಅದಾದ ನಂತರ ಮಾಹಿಶ್ಮತಿ ರಾಜ್ಯದ ದೊರೆ ಯಾರು ಎಂಬುದನ್ನ ರಾಜಮಾತ ಶಿವಗಾಮಿ ಘೋಷಣೆ ಮಾಡಿದ್ದರು. ಆದ್ರೆ, 'ಪಟ್ಟಾಭಿಷೇಕ'ದ ದೃಶ್ಯ ಮೊದಲ ಭಾಗದಲ್ಲಿ ಇರಲಿಲ್ಲ. ಈಗ 'ಭಾಗ 2' ರಲ್ಲಿ ಈ ದೃಶ್ಯವಿದ್ದು, ರಿಲೀಸ್ ಗೂ ಮುಂಚೆನೇ ಸೋರಿಕೆಯಾಗಿದೆ.[ಚೆನ್ನೈನಲ್ಲಿ ಕೇಳೋರೇ ಇಲ್ಲ.. ಬೆಂಗಳೂರಲ್ಲಿ 'ಬಾಹುಬಲಿ'ಯೇ ಎಲ್ಲಾ.!]

'ಪಟ್ಟಾಭಿಷೇಕ'ದಲ್ಲಿ ಮೆಗಾ ಟ್ವಿಸ್ಟ್!

'ಬಾಹುಬಲಿ' ಮೊದಲ ಭಾಗದಲ್ಲಿ ಪ್ರಭಾಸ್ ಮಾಹಿಶ್ಮತಿ ಸಾಮ್ರಾಜ್ಯದ ದೊರೆ ಎಂದು ರಾಜಮಾತ ಘೋಷಿಸುತ್ತಾರೆ. ಆದ್ರೆ, ಈ ಲೀಕ್ ಆಗಿರುವ ವಿಡಿಯೋ ಪ್ರಕಾರ 'ಬಲ್ಲಾಳದೇವ'ನಿಗೆ ಸಾಮ್ರಾಜ್ಯದ ಅಧಿಪತಿಯಾಗಿ ಪಟ್ಟಾಭಿಷೇಕ ಮಾಡಲಾಗಿದೆ.[]

ಬಾಹುಬಲಿ 'ಸೈನ್ಯಾಧಿಪತಿ'!

ಈ ವಿಡಿಯೋದಲ್ಲಿ ಬಲ್ಲಾಳದೇವ ರಾಜನಾಗಿ ಪಟ್ಟಾಭಿಷೇಕ ಮಾಡಿಸಿಕೊಂಡರೇ, ಪ್ರಭಾಸ್ ಸೈನ್ಯಾಧಿಪತಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ, ಯುದ್ಧದಲ್ಲಿ ಗೆದ್ದು ಮಾಹಿಶ್ಮತಿ ಸಾಮ್ರಾಜ್ಯ ಸಾರ್ವಭೌಮನಾಗಿ ಅರ್ಹತೆ ಪಡೆದುಕೊಂಡಿದ್ದ ಬಾಹುಬಲಿಗೆ ಅಧಿಕಾರ ತಪ್ಪಿದ್ದು ಹೇಗೆ ಎಂಬ ಕುತೂಹಲ ಹುಟ್ಟಿಕೊಂಡಿದೆ.[ಏಪ್ರಿಲ್ 28ರಿಂದ ಆಂಧ್ರ, ತೆಲಂಗಾಣ ಆಗಿ ಬದಲಾಗಲಿದೆ ಕನ್ನಡದ ಗಾಂಧಿನಗರ.! ]

ತಮಿಳಿನಲ್ಲಿ 'ಬಾಹುಬಲಿ-2' ಲೀಕ್

'ಬಾಹುಬಲಿ-2' ಭಾರತದ ನಾಲ್ಕು ಭಾಷೆಗಳಲ್ಲಿ ಮೂಡಿ ಬರುತ್ತಿದ್ದು, ಸದ್ಯ, ತಮಿಳು ಭಾಷೆಯಲ್ಲಿ 'ಬಾಹುಬಲಿ-2' ಲೀಕ್ ಆಗಿದೆ. ಇನ್ನುಳಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ 'ಬಾಹುಬಲಿ-2' ಬಿಡುಗಡೆಯಾಗುತ್ತಿದೆ.

'ಬಾಹುಬಲಿ-1' ದೃಶ್ಯ ಸೋರಿಕೆ ಆಗಿತ್ತು

ಅಂದ್ಹಾಗೆ, 2015ರಲ್ಲಿ ತೆರೆಕಂಡಿದ್ದ 'ಬಾಹುಬಲಿ ದಿ ಬಿಗಿನಿಂಗ್' ಚಿತ್ರದ ದೃಶ್ಯವೂ ಬಿಡುಗಡೆಗೂ ಮುಂಚೆಯೇ ಲೀಕ್ ಆಗಿತ್ತು. ಮೊದಲ ಭಾಗದಲ್ಲಿ ಮುಖ್ಯವಾಗಿದ್ದ 10 ನಿಮಿಷಗಳ ಯುದ್ಧದ ದೃಶ್ಯ ಸೋರಿಕೆಯಾಗಿತ್ತು.

English summary
Baahubali 2 The Conclusion 2017 Tamil Version Leaked Before Release officially. The Movie Directed by SS Rajamouli and Movie Will Relesing on Apirl 28th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada