For Quick Alerts
  ALLOW NOTIFICATIONS  
  For Daily Alerts

  ತಾರಾ - ಅನಂತನಾಗ್ ಜೈ ಭಜರಂಗ ಬಲಿ!

  |

  ಅಜಯ್ ರಾವ್-ಸಿಂಧು ಲೋಕನಾಥ್ ಅಭಿನಯದ 'ಜೈ ಭಜರಂಗಬಲಿ' ಚಿತ್ರದಲ್ಲಿ ತಾರಾ, ಅನಂತನಾಗ್ ಒಟ್ಟಿಗೇ ನಟಿಸಲಿದ್ದಾರೆ. ಇಲ್ಲಿ ಅವರಿಬ್ಬರೂ ಗಂಡ-ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಗುಬ್ಬಿ ರವಿವರ್ಮ ನಿರ್ದೇಶನದ ಈ ಚಿತ್ರವನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮೊಟ್ಟಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಮುಕ್ಕಾಲು ಭಾಗ ಮುಕ್ತಾಯಗೊಂಡಿದ್ದು ಇನ್ನು ಅನಂತನಾಗ್- ತಾರಾ ಅವರ ಪೋರ್ಷನ್ ಅಷ್ಟೇ ಬಾಕಿ ಇದೆ.

  ರವಿವರ್ಮ ಈ ಹಿಂದೆ 'ಸಂಗಮ' ಎಂಬ ಚಿತ್ರ ನಿರ್ಮಿಸಿದ್ದರು. ಅದು ಐವತ್ತು ದಿನ ಪೂರೈಸಿತ್ತು. ನಿರ್ಮಾಪಕ ಎಸ್.ವಿ.ಬಾಬು ಸಿನಿಮಾ ರಿಲೀಸ್ ಗೂ ಮುಂಚೆ ಸೇಫ್ ಆಗಿದ್ದರು. ಅದಾದನಂತರ ರವಿವರ್ಮ ವರ್ಷಗಟ್ಟಲೇ ಕೂತು ಸ್ಟ್ರಿಪ್ಟ್ ಮಾಡಿದ್ದು, ಕೊನೇ ಹಂತದಲ್ಲಿ ಕಥೆ ಕೇಳಿ ಥ್ರಿಲ್ ಆದ ಹರಿಕೃಷ್ಣ ಇದನ್ನು ತಾವೇ ನಿರ್ಮಿಸುವುದಾಗಿ ಹೇಳಿ, ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.

  'ಜೈ ಭಜರಂಗಬಲಿ' ಚಿತ್ರದ ಬಗ್ಗೆ ಹೇಳುವುದಾದರೆ, ಆ ಸಿನಿಮಾ ಮೇಕಿಂಗ್ ಬಗ್ಗೆ ಈಗಾಗಲೇ ಒಂದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಅದೇ ರೀತಿ ಅಜಯ್ ರಾವ್‍ ಗೂ ಇಂಥ ಒಂದಷ್ಟು ಸಿನಿಮಾಗಳು ಆಗಾಗ ಬ್ರೇಕ್ ಕೊಡುತ್ತಲೇ ಬಂದಿದೆ.

  ಎಕ್ಸ್ ಕ್ಯೂಸ್‍ಮೀ, ತಾಜ್‍ಮಹಲ್, ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ.. ಹೀಗೆ ಆಗಾಗ ಅವರು ಗೆಲ್ಲುತ್ತಲೇ ಬಂದಿದ್ದಾರೆ. ಯಾವುದೇ ಗಾಡ್‍ ಫಾದರ್ ಇಲ್ಲದೇ ಉದ್ಯಮದಲ್ಲಿ ಈ ಮಟ್ಟದಲ್ಲಿ ಹೆಸರು ಗಳಿಸುವುದು, ಸಕ್ಸಸ್ ಕಾಣುವುದು ಸುಲಭದ ಮಾತಲ್ಲ.

  ಅಜಯ್ ರಾವ್‍ಗೆ ಒಳ್ಳೆಯದಾಗಲಿ..ಚಿತ್ರತಂಡಕ್ಕೆ, ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿರುವ ಹರಿಕೃಷ್ಣ ಅವರಿಗೆ ಶುಭವಾಗಲಿ... ಜೈ ಭಜರಂಗ ಬಲಿ!

  English summary
  Anant Nag and Tara acting together in Jai Bhajaranga Bali movie. Ajay Rao and Sindhu Lokanath in the lead role. Gubbi Ravi Verma directing this movie and music director Harikirshna is the producer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X