»   » ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಬರ್ತಿದ್ದಾನೆ 'ತಾರಕ್'

ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಬರ್ತಿದ್ದಾನೆ 'ತಾರಕ್'

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ 'ತಾರಕ್' ಯಾವಾಗ ಬಿಡುಗಡೆಯಾಗುತ್ತೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.

ದಸರಾ ಹಬ್ಬದ ಸಂಭ್ರಮದಲ್ಲಿರುವ ಚಿತ್ರಪ್ರೇಮಿಗಳಿಗೆ ದರ್ಶನ್ ಸಿನಿಮಾ ಉಡುಗೊರೆಯಾಗಿ ಬರುತ್ತಿದೆ. ಹೌದು, ಸೆಪ್ಟಂಬರ್ 29 ರಂದು ದಾಸ ದರ್ಶನ್ 'ತಾರಕ್' ಅವತಾರದಲ್ಲಿ ಎಂಟ್ರಿ ಕೊಡಲಿದ್ದಾರೆ. ಇದು ಚಿತ್ರತಂಡದಿಂದ ಹೊರಬಿದ್ದಿರುವ ಅಧಿಕೃತ ಮಾಹಿತಿ.

Tarak will release on septamber 29th

ಹೀಗಾಗಿ, ದರ್ಶನ್ ಅಭಿಮಾನಿಗಳಿಗೆ ದಸರಾ ಹಬ್ಬದ ಸಂಭ್ರಮ ಮತ್ತಷ್ಟು ಮೆರಗು ಹೆಚ್ಚಿಸಲಿದೆ. ಅಂದ್ಹಾಗೆ, 'ತಾರಕ್' ಪೂರ್ಣ ಪ್ರಮಾಣ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಪ್ಯಾಕೇಜ್. ಕುಟುಂಬ ಸಮೇತ ನೋಡುವಂತಹ ಸಿನಿಮಾ.

Tarak will release on septamber 29th

ಮಿಲನ ಪ್ರಕಾಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಡೈನಾಮಿಕ್ ಹೀರೋ ದೇವರಾಜ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ತಾತ-ಮೊಮ್ಮಗನ ಜುಗಲ್ ಬಂದಿ ಇಡೀ ಚಿತ್ರದ ಕಥೆ.

ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ ಹಾಡುಗಳು ಈಗಾಗಲೇ ಬಿಡುಗಡೆಯಾಗಿ, ಸೂಪರ್ ಹಿಟ್ ಎನಿಸಿಕೊಂಡಿದೆ. ಇನ್ನು 'ತಾರಕ್' ಟೀಸರ್ ಅಂತೂ ಯ್ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದಿದೆ. ಹೀಗೆ, ಹಂತ ಹಂತವಾಗಿ ನಿರೀಕ್ಷೆ ಹುಟ್ಟಿಸಿದ್ದು, ಈ ಕುತೂಹಲಕ್ಕೆ ದಸರಾ ಹಬ್ಬದಂದು ತೆರೆ ಬೀಳಲಿದೆ.

English summary
Challenging Star Darshan starrer Kannada Movie 'Tarak' will release on septamber 29th. The movie is directed by Milana Prakash, features shanvi srivasthav, sruthi hariharanint he lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada