»   » ವಿವಾದದ ಬಗ್ಗೆ ಕ್ಲಾರಿಟಿ ಕೊಟ್ಟ 'ತರ್ಲೆ ವಿಲೇಜ್' ನಿರ್ದೇಶಕ

ವಿವಾದದ ಬಗ್ಗೆ ಕ್ಲಾರಿಟಿ ಕೊಟ್ಟ 'ತರ್ಲೆ ವಿಲೇಜ್' ನಿರ್ದೇಶಕ

Posted By: ಮೈಸೂರು ಪ್ರತಿನಿಧಿ
Subscribe to Filmibeat Kannada

'ತಿಥಿ' ಚಿತ್ರದ ಮೂಲಕ ಕರ್ನಾಟಕದ ಮನೆ ಮಾತಾದ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಬೆಳ್ಳಿ ತೆರೆಯಲ್ಲಿ ಇವರ ಸಿನಿಮಾ ನೋಡಲು ಪ್ರೇಕ್ಷಕರು ಅಷ್ಟೇ ಉತ್ಸಾಹದಿಂದ ನುಗ್ಗಿ ಬರುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ತಿಥಿ ಕಲಾವಿದರ ಸಂಗಮದಲ್ಲಿ ಮೂಡಿಬರುತ್ತಿರುವ 'ಏನ್‌ ನಿನ್‌ ಪ್ರಾಬ್ಲಮ್ಮು' ಹೊಸ ಸಿನಿಮಾ ಶುರುವಾಗುವ ಮುನ್ನವೇ ಹೊಸ ವಿವಾದಗಳು ಶುರುವಾಗುತ್ತಿವೆ.[ಸೆಂಚುರಿಗೌಡ-ಗಡ್ಡಪ್ಪರನ್ನ ಕೆಟ್ಟದಾಗಿ ತೋರಿಸಲಾಗುತ್ತಿದೆ: 'ತಿಥಿ' ಈರೇಗೌಡ ಆಕ್ರೋಶ]

'ತಿಥಿ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಈರೇಗೌಡ, ಇತ್ತೀಚೆಗೆ ತಿಥಿ ಚಿತ್ರ ಕಲಾವಿದರನ್ನು ಬಳಸಿಕೊಂಡು ಅಶ್ಲೀಲವಾಗಿ ತೋರಿಸಲಾಗುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಸ್ಯಾಂಡಲ್‌ ವುಡ್‌ ನ ಕೆಲ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರಣ ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ 'ತರ್ಲೆ ವಿಲೇಜ್' ನಿರ್ದೇಶಕ ಕೆ.ಎಂ.ರಘು ಸ್ಪಷ್ಟತೆ ನೀಡಿದ್ದಾರೆ. ಅವರು ಹೇಳಿದ್ದಾದರೂ ಏನು? ಇಲ್ಲಿದೆ ಓದಿ..[ವಿಮರ್ಶೆ: 'ತರ್ಲೆ ವಿಲೇಜ್' ಅಲ್ಲ, 'ಪೋಲಿ' ವಿಲೇಜ್!]

ನಿರ್ದೇಶಕ ಕೆ.ಎಂ ರಘು ಹೇಳಿದ್ದೇನು?

ತಿಥಿ ಸಿನಿಮಾ ಖ್ಯಾತಿಯ ಮುಗ್ಧ, ಅಮಾಯಕ ಸೆಂಚುರಿಗೌಡ ಹಾಗೂ ಗಡ್ಡಪ್ಪನವರನ್ನು ‘ತರ್ಲೆ ವಿಲೇಜ್' ಸಿನಿಮಾ ತಂಡ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎನ್ನುವ ಹೇಳಿಕೆಯು ಸತ್ಯಕ್ಕೆ ದೂರವಾದ ಸಂಗತಿ ಎಂದು 'ತರ್ಲೆ ವಿಲೇಜ್' ಚಿತ್ರ ನಿರ್ದೇಶಕ ಕೆ.ಎಂ.ರಘು ಇಂದು ಪತ್ರಕರ್ತರ ಭವನದಲ್ಲಿ ಸ್ಪಷ್ಟಪಡಿಸಿದ್ದಾರೆ.[ಸೆಂಚುರಿಗೌಡ-ಗಡ್ಡಪ್ಪರನ್ನ ಕೆಟ್ಟದಾಗಿ ತೋರಿಸಲಾಗುತ್ತಿದೆ: 'ತಿಥಿ' ಈರೇಗೌಡ ಆಕ್ರೋಶ]

ಪಾತ್ರಗಳಿಗೆ ಜೀವ ತುಂಬುವುದು ನಿರ್ದೇಶಕನ ಕರ್ತವ್ಯ

ಮೈಸೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ " ಗ್ರಾಮೀಣ ಸೊಗಡಿನ ಸಿನಿಮಾ ಆದ ‘ತರ್ಲೆ ವಿಲೇಜ್' ಚಿತ್ರದ ಪಾತ್ರಗಳಿಗೆ ಜೀವ ತುಂಬಿಸುವುದು ನಿರ್ದೇಶಕನ ಕರ್ತವ್ಯವಾಗಿತ್ತು. ಆ ನಿಟ್ಟಿನಲ್ಲಿ ನಾನು ನನ್ನ ಕೆಲಸವನ್ನು ನಿರ್ವಹಿಸಿರುವೆ' ಎಂದು ಈರೇಗೌಡರ ಫೇಸ್‌ಬುಕ್‌ ಬರಹಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.['ಗಡ್ಡಪ್ಪ-ಸೆಂಚುರಿಗೌಡ'ರ ಹೊಸ ಚಿತ್ರದಲ್ಲೂ 'ಮಸಾಲೆ ಮಾತು'ಗಳ ಅಬ್ಬರ]

'ತರ್ಲೆ ವಿಲೇಜ್' ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ

'ತರ್ಲೆ ವಿಲೇಜ್' ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಈ ಬಂದಿರುವ ಇನ್ನೊಂದು ಚಿತ್ರದ ಪ್ರೊಮೋಗಾಗಿ ಚಿತ್ರದ ಬಗ್ಗೆ ಅನಗತ್ಯ ವಿವಾದವನ್ನು ಸೃಷ್ಠಿಸಿದ್ದಾರೆ, ಕಲಾವಿದರ ಅಭಿವ್ಯಕ್ತಿತ್ವವನ್ನು, ಹಿರಿತನವನ್ನು ಸಿನಿಮಾದಲ್ಲಿ ಸಾದರಪಡಿಸಲಾಗಿದೆ. ಕಲಾವಿದರಿಗೆ ವೈಯುಕ್ತಿಕವಾಗಿ ಮತ್ತು ಚಾರಿತ್ರಿಕವಾಗಿ ಧಕ್ಕೆಯಾಗುವಂತೆ ಅಶ್ಲೀಲ, ದ್ವಂದ್ವ ಅರ್ಥ ಪದಗಳನ್ನು ಬಳಸಿಲ್ಲ ಎಂದು ಸ್ವಪ್ಟಪಡಿಸಿದ್ದಾರೆ.

ಬೆಳವಣಿಗೆ ಸಹಿಸಲಾಗದೆ ಅನಗತ್ಯ ವಿವಾದ

'ತರ್ಲೆ ವಿಲೇಜ್' ಚಿತ್ರಕ್ಕೆ ಯೂ ಸರ್ಟಿಫಿಕೇಟ್ ನೀಡಿದ್ದು ಚಿತ್ರದ ಬೆಳವಣಿಗೆಯನ್ನು ಸಹಿಸದವರು, ಅನಗತ್ಯ ವಿವಾದ ಸೃಷ್ಟಿಸುವ ಮೂಲಕ ಚಿತ್ರಕ್ಕೆ ಹಿನ್ನೆಡೆಯನ್ನುಂಟು ಮಾಡುತ್ತಿದ್ದಾರೆ ಎಂದು ನಿರ್ದೇಶಕ ಕೆ.ಎಂ.ರಘು ಸುದ್ದಿಗೋಷ್ಠಿ ವೇಳೆ ದೂರಿದ್ದಾರೆ.

ಸೆಂಚುರಿ ಗೌಡ್ರು ಹೇಳಿದ್ದೇನು?

ತಿಥಿ ಖ್ಯಾತಿಯ ಸೆಂಚುರಿ ಗೌಡ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ನಿರ್ದೇಶಕರು ತಿಳಿಸಿದಂತೆ ಚಿತ್ರದಲ್ಲಿ ಅಭಿನಯಿಸಿರುವೆ ಎಂದು ಮುಗ್ಧತೆಯಿಂದ ಹೇಳಿದ್ದಾರೆ.

ಈರೇಗೌಡ ಫೇಸ್‌ಬುಕ್‌ನಲ್ಲಿ ಬರೆದಿದ್ದು ಏನು?

ತಿಥಿ' ಚಿತ್ರದ ಮೂಲಕ ವಿಶ್ವದೆಲ್ಲೆಡೆ, ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿ, ರಾಷ್ಟ್ರ ಪ್ರಶಸ್ತಿ ಕೂಡ ಗೆದ್ದ 'ತಿಥಿ' ಕಲಾವಿದರನ್ನ ಈಗ ಕೆಟ್ಟದಾಗಿ ತೋರಿಸುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ. ಮುಗ್ಧ ಗ್ರಾಮಸ್ಥರನ್ನು 'ತರ್ಲೆ ವಿಲ್ಲೇಜ್' ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಿದ್ದಾರೆ, ಇದರಿಂದ ನನಗೆ ತುಂಬಾ ಬೇಸರವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

'ತಿಥಿ'ಯಲ್ಲಿ ಅಭಿನಯಿಸಿದ ಪಾತ್ರಗಳನ್ನೇ ನಕಲು ಮಾಡಿದ್ದಾರೆ

'ತಿಥಿ'ಯಲ್ಲಿ ಅಭಿನಯಿಸಿದ ಪಾತ್ರಗಳನ್ನೇ ನಕಲು ಮಾಡಿಸಿದ್ದಾರೆ. ಕನಿಷ್ಠ ಪಕ್ಷ ಹೆಸರುಗಳನ್ನೂ ಬದಲಾಯಿಸಿಲ್ಲ. ಅವರು ಆ ಪಾತ್ರಗಳಿಗೆ ಅಂತಾರಾಷ್ಟ್ರೀಯ ಖ್ಯಾತಿ ಮತ್ತು ಪ್ರಶಂಸೆ ಪಡೆದಿದ್ದರು. ಈಗ ಅವರನ್ನು ಬಳಸಿಕೊಂಡಿರುವ ರೀತಿಗೆ, ಬಳಸಿರುವ ಅಶ್ಲೀಲ ಮತ್ತು ಮೂಢತನದ ಹಾಸ್ಯಕ್ಕೆ ತಲೆತಗ್ಗಿಸುವಂತಾಗಿದೆ'' ಎಂದು ಈರೇಗೌಡ ನೋವು ತೋಡಿಕೊಂಡಿದ್ದರು.

English summary
Here is What Tarle village' K M Raghu said on press meet about Eeregowda's 'Thithi Artists have been abused' Statement

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada