»   » ತರುಣ್ ಸುಧೀರ್ ನಿರ್ದೇಶನದಲ್ಲಿ ದ್ವಾರಕೀಶ್ 50ನೇ ಚಿತ್ರ

ತರುಣ್ ಸುಧೀರ್ ನಿರ್ದೇಶನದಲ್ಲಿ ದ್ವಾರಕೀಶ್ 50ನೇ ಚಿತ್ರ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ 'ಕುಳ್ಳ' ಎಂದೇ ಫೇಮಸ್ ಆಗಿರುವ ನಿರ್ಮಾಪಕ ದ್ವಾರಕೀಶ್ 49 ಚಿತ್ರಗಳನ್ನು ನಿರ್ಮಾಣ ಮಾಡಿ ಇದೀಗ ತಮ್ಮ ಯಶಸ್ವಿ 50ನೇ ಚಿತ್ರದ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.

ತಮ್ಮದೇ ಬ್ಯಾನರಡಿಯ 50ನೇ ಚಿತ್ರಕ್ಕೆ 'ಚೌಕ' ಎಂದು ಹೆಸರಿಡಲಾಗಿದೆ. ಇದೇ ಆಗಸ್ಟ್ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. 'ಚೌಕ' ಚಿತ್ರದ ವಿಶೇಷ ಅಂದ್ರೆ, ಪ್ರಜ್ಷಲ್ ದೇವರಾಜ್, ಚಿರಂಜೀವಿ ಸರ್ಜಾ, ದಿಗಂತ್, 'ನೆನಪಿರಲಿ' ಪ್ರೇಮ್, ಮುಂತಾದ ಕನ್ನಡ ಚಿತ್ರರಂಗದ ಮಲ್ಟಿ ಸ್ಟಾರರ್ ಲೀಡ್ ರೋಲ್ ನಲ್ಲಿ ನಟಿಸಿರುವುದು. ಕಿಚ್ಚ ಸುದೀಪ್ ಕೂಡಾ ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಲಿದ್ದಾರೆ.

Tarun Sudhir to direct Dwarakish's 50th movie

ಈ ಚಿತ್ರದ ನಿರ್ದೇಶನ ಮಾಡುತ್ತಿರುವುದು ನಟ ಕಮ್ ಡೈರೆಕ್ಟರ್ ತರುಣ್ ಸುಧೀರ್, ನಂದಕಿಶೋರ್, ಸಹೋದರರಾದ ಇವರು ಕಲಾವಿದನಾಗಿಯೂ ತನ್ನನ್ನು ಗುರುತಿಸಿಕೊಂಡಿದ್ದು, 'ವಿಧ್ಯಾರ್ಥಿ' ಚಿತ್ರದಲ್ಲಿ. ದ್ವಾರಕೀಶ್ 49ನೇ ಚಿತ್ರ 'ಆಟಗಾರ' ರಿಲೀಸ್ ಗೆ ತಯಾರಾಗಿದೆ. ಈ ಚಿತ್ರ ತೆರೆ ಕಂಡ ನಂತರ 'ಚೌಕ' ಚಿತ್ರದ ಕಾರ್ಯಗಳಿಗೆ ಚಾಲನೆ ದೊರೆಯಲಿದೆ.

English summary
Tarun Sudhir to direct Dwarakish's 50th Kannada movie 'Chauka'. It is a multi starrer film with Pream, Prajwal, Diganth, and Chiranjeevi sarja, Kannada Actor Sudeep in guest role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada