For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಬರ್ತ್‌ಡೇ ಸ್ಪೆಷಲ್ 'ಮಾರ್ಟಿನ್' ಪೋಸ್ಟರ್‌ ಸಿಂಪ್ಲಿ ಸೂಪರ್!

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರದ ಹೊಸ ಪೋಸ್ಟರ್ ರಿಲೀಸ್‌ ಆಗಿದೆ. ನಾಳೆ (ಅಕ್ಟೋಬರ್ 06) ಧ್ರುವ ಸರ್ಜಾ ಹುಟ್ಟುಹಬ್ಬ. ಇದೇ ಸಂಭ್ರಮದಲ್ಲಿ ಒಂದು ದಿನ ಮೊದಲೇ ಪೋಸ್ಟರ್ ರಿಲೀಸ್ ಮಾಡಿ 'ಮಾರ್ಟಿನ್' ಟೀಂ ಶುಭ ಕೋರಿದೆ. ಎ. ಪಿ ಅರ್ಜುನ್ ನಿರ್ದೇಶನದ ಈ ಆಕ್ಷನ ಎಂಟರ್‌ಟೈನರ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ದೊಡ್ಡದಾಗಿ ರಿಲೀಸ್ ಆಗ್ತಿದೆ.

  'ಅದ್ಧೂರಿ', 'ಬಹದ್ಧೂರ್', 'ಭರ್ಜರಿ', 'ಪೊಗರು' ಸಿನಿಮಾಗಳ ನಂತರ ಧ್ರುವ ನಟಿಸ್ತಿರೋ 5ನೇ ಸಿನಿಮಾ 'ಮಾರ್ಟಿನ್'. ಉದಯ್ ಕೆ ಮೆಹ್ತಾ ನಿರ್ಮಾಣದ ಈ ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. 'ಅದ್ಧೂರಿ' ನಂತರ ಧ್ರುವ ಹಾಗೂ ಅರ್ಜುನ್ ಮತ್ತೆ ಒಂದಾಗಿದ್ದು ಮತ್ತೊಂದು ಸೂಪರ್ ಹಿಟ್ ಸಿನಿಮಾ ನಿರೀಕ್ಷೆ ಮಾಡಲಾಗ್ತಿದೆ. ಇತ್ತೀಚೆಗಷ್ಟೆ ಮಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ ಬಂದಿದೆ ಚಿತ್ರತಂಡ. ಅಕ್ಟೋಬರ್ 1ರಂದು ಧ್ರುವ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಮಡದಿ ಮಗಳ ಜೊತೆ ಧ್ರುವ ಕಾಲ ಕಳೀತ್ತಿದ್ದಾರೆ.

  ಸಿಗಾರ್ ಸೇದುತ್ತಾ ದೊಡ್ಡ ಗನ್ ಹಿಡಿದು 'ಮಾರ್ಟಿನ್' ಧ್ರುವ ಸರ್ಜಾ ಪೋಸ್ಟರ್‌ನಲ್ಲಿ ಖಡಕ್ ಪೋಸ್ ಕೊಟ್ಟಿದ್ದಾರೆ. ಭಾರತದ ಅತಿದೊಡ್ಡ ಸಾಹಸಗಾಥೆ ಎಂದು ಬರೆದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ದಸರಾ ಸಂಭ್ರಮದಲ್ಲಿ ಸೆಪ್ಟೆಂಬರ್ 30ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಈ ಹಿಂದೆ ಚಿತ್ರತಂಡ ಹೇಳಿತ್ತು. ಆದರೆ ಶೂಟಿಂಗ್ ತಡವಾದ ಕಾರಣ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಲೇಟ್ ಆದರೂ ಬಹಳ ಸೊಗಸಾಗಿ ಸಿನಿಮಾ ಮೂಡಿ ಬರುತ್ತಿದೆ. ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

  4 ಕೋಟಿ ರೂ. ಚೇಸ್‌ ಸೀನ್ ಮಾಡ್ತಾ ಮಾಡ್ತಾ ಮಂಗಳೂರಿಗೆ ಮಾಸ್ 'ಮಾರ್ಟಿನ್'!4 ಕೋಟಿ ರೂ. ಚೇಸ್‌ ಸೀನ್ ಮಾಡ್ತಾ ಮಾಡ್ತಾ ಮಂಗಳೂರಿಗೆ ಮಾಸ್ 'ಮಾರ್ಟಿನ್'!

  5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು, 5 ಭಾಷೆಯ ಪೋಸ್ಟರ್‌ಗಳನ್ನು ರಿಲೀಶ್ ಮಾಡಲಾಗಿದೆ. ಅಂದಾಜು 60 ಕೋಟಿ ರೂ. ಬಜೆಟ್‌ನಲ್ಲಿ 'ಮಾರ್ಟಿನ್' ಸಿನಿಮಾ ನಿರ್ಮಾಣವಾಗುತ್ತಿದೆ. ಕೇವಲ ಒಂದು ಆಕ್ಷನ್ ಎಪಿಸೋಡ್‌ಗಾಗಿ 4.8 ಕೋಟಿ ರೂ. ವ್ಯಯಿಸಲಾಗಿದೆಯಂತೆ. ಇನ್ನು ಸೆಟ್‌ಗಳನ್ನು ಹಾಕಿ ಎರಡು ಸಾಂಗ್ ಶೂಟ್ ಮಾಡುವ ಲೆಕ್ಕಾಚಾರದಲ್ಲಿ ಚಿತ್ರತಂಡ ಇದೆ. ಮತ್ತೊಂದು ಸಾಂಗ್‌ ಶೂಟ್‌ಗಾಗಿ ಫಾರಿನ್‌ಗೆ ಹೋಗುವ ಬಗ್ಗೆಯೂ ಚರ್ಚೆ ನಡೀತಿದೆ. ಹಾಸ್ಯ ನಟ ಚಿಕ್ಕಣ್ಣ, ಬಾಲಿವುಡ್ ನಟ ನಿಕಿತಿನ್ ಧೀರ್ ಹಾಗೂ ಅನ್ವೇಶಿ ಜೈನ್ ಚಿತ್ರದ ತಾರಾಗಣದಲ್ಲಿದ್ದಾರೆ.

  Team Martin wishes Dhruva sarja on his birthday with a special poster

  ಇನ್ನು ಕೆಲ ದಿನಗಳ ಹಿಂದೆ ಇಡೀ ಚಿತ್ರತಂಡ ಕಾಶ್ಮೀರದಲ್ಲಿ ಸಿನಿಮಾ ಚಿತ್ರೀಕರಣ ಮಾಡಿ ಬಂದಿತ್ತು. 7 ಡಿಗ್ರಿ ತಾಪಮಾನದಲ್ಲಿ ಬಹಳ ಕಷ್ಟಪಟ್ಟು ಬೈಕ್ ಚೇಸಿಂಗ್ ಸೀನ್ ಶೂಟ್ ಮಾಡಲಾಗಿತ್ತು. ಒಟ್ಟು 7 ದಿನಗಳ ಕಾಲ ಅಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಮಾರ್ಟಿನ್ ಜೊತೆಗೆ ಜೋಗಿ ಪ್ರೇಮ್ ನಿರ್ದೇಶನದ ಇನ್ನು ಹೆಸರಿಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲೂ ಧ್ರುವ ಸರ್ಜಾ ನಟಿಸ್ತಿದ್ದಾರೆ. ಅಕ್ಟೋಬರ್ 20ಕ್ಕೆ ಈ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಲಿದೆ.

  ಗಾಂಧಿ ಜಯಂತಿಯ ವಿಶೇಷ ದಿನದಂದು ತಂದೆಯಾದ ಖುಷಿ ಹಂಚಿಕೊಂಡ ಧ್ರುವ ಸರ್ಜಾಗಾಂಧಿ ಜಯಂತಿಯ ವಿಶೇಷ ದಿನದಂದು ತಂದೆಯಾದ ಖುಷಿ ಹಂಚಿಕೊಂಡ ಧ್ರುವ ಸರ್ಜಾ

  English summary
  Team Martin wishes Dhruva sarja on his birthday with a special poster. Know More.
  Wednesday, October 5, 2022, 19:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X