ಧ್ರುವ ಸರ್ಜಾಗೆ ಸಿಕ್ಕರು ಖಡಕ್ ಖಳನಾಯಕ.!
Recommended Video

ತೆಲುಗು ಸೂಪರ್ ಸ್ಟಾರ್ ನಟ ಜಗಪತಿ ಬಾಬು, ಕಾಲ ಕಳೆದಂತೆ ಹೀರೋಯಿಸಂ ಬಿಟ್ಟು, ವಿಲನ್ ಆಗಿ ಮಾರ್ಕೆಟ್ ಸೃಷ್ಟಿಸಿಕೊಂಡರು. ಅದರ ಪರಿಣಾಮ ತೆಲುಗು, ತಮಿಳು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ಖಳನಾಯಕನಾಗಿ ಮಿಂಚಿದರು.
ಇದೀಗ, ಕನ್ನಡದಲ್ಲಿ ಮತ್ತೊಮ್ಮೆ ವಿಲನ್ ಆಗಿ ಅಬ್ಬರಿಸಲು ಜಗಪತಿ ಬಾಬು ಸಿದ್ಧವಾಗಿದ್ದಾರೆ. ಹೌದು, ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದಲ್ಲಿ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ ಮತ್ತಷ್ಟು ಧಮ್ ಬಂದಿದೆ.
ಎಲ್ಲ ಅಂದುಕೊಂಡತೆ ಆಗಿದ್ದರೇ, ಜಗಪತಿ ಬಾಬು ಅವರು ಮೇ 21 ರಿಂದ ಶೂಟಿಂಗ್ ಗೆ ಹಾಜರಾಗಬೇಕಿತ್ತು. ಆದ್ರೆ, ತಮ್ಮ ಫಿಟ್ ನೆಸ್ ವರ್ಕೌಟ್ ಗಾಗಿ ಸಮಯ ತೆಗೆದುಕೊಂಡಿದ್ದು, ಜೂನ್ 15 ರಿಂದ 'ಪೊಗರು' ಸೆಟ್ ಗೆ ಆಗಮಿಸಲಿದ್ದಾರಂತೆ.

ಈ ಹಿಂದೆ ಸುದೀಪ್ ಅಭಿನಯಿಸಿ, ಶಶಾಂಕ್ ನಿರ್ದೇಶನದ 'ಬಚ್ಚನ್' ಹಾಗೂ ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರದಲ್ಲಿ ಜಗಪತಿ ಬಾಬು ನಟಿಸಿದ್ದಾರೆ. ಇದಾದ ಬಳಿಕ, 'ವಿಜಯಾಧಿತ್'ಯ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಇನ್ನು 'ಉಪ್ಪಿ-ರುಪ್ಪಿ' ಚಿತ್ರದಲ್ಲೂ ಜಗಪತಿ ಬಾಬು ಇದ್ದಾರಂತೆ.
ಇನ್ನುಳಿದಂತೆ ತೆಲುಗು ನಟ ರಾಮ್ ಚರಣ್ ಅಭಿನಯಿಸಿದ್ದ 'ರಂಗಸ್ಥಲಂ' ಚಿತ್ರದಲ್ಲಿ ಅದ್ಭುತ ಅಭಿನಯದ ಮೂಲಕ ಮೆಚ್ಚುಗೆ ಗಳಿಸಿಕೊಂಡಿದ್ದರು. ಇದೀಗ, ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲೂ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.


Click it and Unblock the Notifications











