For Quick Alerts
  ALLOW NOTIFICATIONS  
  For Daily Alerts

  ಶ್ರೀರೆಡ್ಡಿ ವಿರುದ್ಧ ಸಿಡಿದೆದ್ದ ನಾನಿ: ಇಬ್ಬರ ಮಧ್ಯೆ ನೇರಾನೇರ ಫೈಟ್

  By Bharath Kumar
  |

  ಕಾಸ್ಟಿಂಗ್ ಕೌಚ್ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಖ್ಯಾತಿಗಳಿಸಿಕೊಂಡ ನಟಿ ಶ್ರೀರೆಡ್ಡಿ ಟಾಲಿವುಡ್ ಸ್ಟಾರ್ ನಾನಿ ಅವರನ್ನ ಬೆಂಬಿಡದೆ ಕಾಡುತ್ತಿದ್ದಾರೆ.

  ''ನಾನಿ ವ್ಯಕ್ತಿತ್ವ ಸರಿಯಿಲ್ಲ. ಅವರು ಸ್ವಭಾವ ಉತ್ತಮವಾಗಿಲ್ಲ. ಅವರೊಬ್ಬ ಕಾಮುಕ, ಹೆಣ್ಣುಮಕ್ಕಳಿಗೆ ಮೋಸ ಮಾಡಿದ್ದಾನೆ'' ಎಂದೆಲ್ಲ ಬಾಂಬ್ ಸಿಡಿಸಿ ಕಳೆದ ಒಂದು ತಿಂಗಳಿನಿಂದ ಒಂದಲ್ಲ ಒಂದು ವಿಷ್ಯವನ್ನ ಮುಂದಿಟ್ಟು ಕಾಡುತ್ತಿದ್ದಾರೆ.

  ನಟ ನಾನಿ ಜೊತೆ ನನ್ನದು ಲವ್ ಸ್ಟೋರಿ ಅಲ್ಲ...ಕಾಮ ಸ್ಟೋರಿ.! ನಟ ನಾನಿ ಜೊತೆ ನನ್ನದು ಲವ್ ಸ್ಟೋರಿ ಅಲ್ಲ...ಕಾಮ ಸ್ಟೋರಿ.!

  ತೆಲುಗು ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಾನಿ ನಿರೂಪಕರಾಗಿದ್ದಾರೆ. ಕಾಕತಾಳೀಯ ಅಂದ್ರೆ ಈ ಕಾರ್ಯಕ್ರಮದಲ್ಲಿ ಶ್ರೀರೆಡ್ಡಿ ಸ್ಪರ್ಧಿ ಆಗಲಿದ್ದಾರೆ ಎನ್ನಲಾಗಿತ್ತು. ಅಂತಿಮ ಕ್ಷಣದಲ್ಲಿ ಶ್ರೀರೆಡ್ಡಿ ಕಾಣಿಸಿಕೊಂಡಿಲ್ಲ. ಇದಕ್ಕೂ ಕೂಡ ನಾನಿನೇ ಕಾರಣವೆಂದಿದ್ದ ಶ್ರೀರೆಡ್ಡಿ ಸದ್ಯದಲ್ಲೇ 'ನಾನಿ ನ್ನ ಜೊತೆ ನಡೆಸಿರುವ ಕಾಮ ಸ್ಟೋರಿ ಬಯಲು ಮಾಡುತ್ತೇನೆ' ಎಂದಿದ್ದರು. ಇಷ್ಟು ದಿನ ಸೈಲೆಂಟ್ ಆಗಿದ್ದ ನಾನಿ ಈಗ ಸಿಡಿದೆದ್ದಿದ್ದಾರೆ. ಮುಂದೆ ಓದಿ.....

  ತಾಳ್ಮೆಗೆ ಮಿತಿ ಇದೆ

  ತಾಳ್ಮೆಗೆ ಮಿತಿ ಇದೆ

  ನಾನಿ ಬಗ್ಗೆ ಶ್ರೀರೆಡ್ಡಿ ಮಾಡಿದ ಆರೋಪಗಳಿಗೆ ನಾನಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೀಗ, ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಹೆಸರನ್ನ ಪ್ರಸ್ತಾಪಿಸದೇ ಶ್ರೀರೆಡ್ಡಿಗೆ ಪರೋಕ್ಷವಾಗಿ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ''ತಾಳ್ಮೆಗೆ ಮಿತಿ ಇದೆ'' ಎಂದಿರುವ ನಾನಿ ಕಾನೂನಿನ ಮೊರೆ ಹೋಗಿದ್ದಾರೆ.

  ನಟ ನಾನಿ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜಾಕಿದ ಶ್ರೀರೆಡ್ಡಿ ನಟ ನಾನಿ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜಾಕಿದ ಶ್ರೀರೆಡ್ಡಿ

  ನೋಟಿಸ್ ಕಳುಹಿಸಿದ ನಾನಿ

  '' ನಾನು ಪ್ರತಿಕ್ರಿಯಿಸುವ ಮೂಲಕ ಅವಿವೇಕಿಯಾಗುವುದಿಲ್ಲ. ಅವರಿಗೆ ಏನು ಬೇಕೋ ಅದನ್ನ ನಾನು ಕೊಡುವುದಿಲ್ಲ. ನಾನು ಕಾನೂನು ಕ್ರಮ ತೆಗೆದುಕೊಳ್ಳುವೆ'' ಎಂದಿರುವ ನಾನಿ ಶ್ರೀರೆಡ್ಡಿ ನೋಟಿಸ್ ಕಳುಹಿಸಿದ್ದಾರೆ.

  ಮಾನನಷ್ಟ ಮೊಕದ್ದಮೆ

  ಮಾನನಷ್ಟ ಮೊಕದ್ದಮೆ

  ನಾನಿ ಬಗ್ಗೆ ಹಲವು ಗಂಭೀರ ಆರೋಪ ಮಾಡಿರುವ ನಟಿ ಶ್ರೀರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಬೆಳವಣಿಗೆ ನಾನು ಯಾವುದೇ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

  35 ಫೋಟೋ ರಿಲೀಸ್ ಮಾಡಿ ಸಂಚಲನ ಸೃಷ್ಟಿಸಿದ ನಟಿ; ಏನಿದೆ ಆ ಫೋಟೋಗಳಲ್ಲಿ.?35 ಫೋಟೋ ರಿಲೀಸ್ ಮಾಡಿ ಸಂಚಲನ ಸೃಷ್ಟಿಸಿದ ನಟಿ; ಏನಿದೆ ಆ ಫೋಟೋಗಳಲ್ಲಿ.?

  ಟಾರ್ಗೆಟ್ ಮಾಡುವುದು ಸರಿಯಲ್ಲ

  ಟಾರ್ಗೆಟ್ ಮಾಡುವುದು ಸರಿಯಲ್ಲ

  ''ಇಷ್ಟ ಬಂದ ಹಾಗೆ, ಮಾತನಾಡಿ ಸುಮ್ಮನೆ ಟಾರ್ಗೆಟ್ ಮಾಡುವುದು ಬೇಸರದ ಸಂಗತಿ. ಅವರ ಆತ್ಮಗೌರವಕ್ಕೆ ಧಕ್ಕೆ ಬರುವಂತೆ ಹೇಳಿಕೆಗಳನ್ನ ನೀಡಿರುವುದು ನಾನ್ಸೆನ್ಸ್. ಈ ರೀತಿಯ ಕೆಲವರು ನನ್ನ ಬಗ್ಗೆ ಚಾರಿತ್ರ್ಯವದೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ನನಗೆ ತೊಂದರೆ ನೀಡುತ್ತಿದ್ದಾರೆ'' ಎಂದು ಟ್ವೀಟ್ ಮಾಡಿದ್ದಾರೆ.

  ಇದೆಲ್ಲ ಪ್ರಚಾರಕ್ಕಾಗಿ ಅಷ್ಟೇ.!

  ಇದೆಲ್ಲ ಪ್ರಚಾರಕ್ಕಾಗಿ ಅಷ್ಟೇ.!

  ''ನನ್ನ ಬಗ್ಗೆ ಮಾಡುತ್ತಿರುವ ಆರೋಪದ ಬಗ್ಗೆ ನಾನು ಕೇರ್ ಮಾಡಲ್ಲ. ಆದ್ರೆ, ಸಮಾಜದ ಬಗ್ಗೆ ನನಗೆ ಭಯವಾಗುತ್ತಿದೆ. ಸಮಾಜದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರ ಬಗ್ಗೆಯೂ ಆತಂಕ ಕಾಡುತ್ತಿದೆ. ಸಾಮಾಜಿಕ ಜಾಲತಾಣವನ್ನ ಬಳಸಿಕೊಂಡು ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ. ಪ್ರಚಾರಕ್ಕಾಗಿ ಇದೆಲ್ಲ ಮಾಡುತ್ತಿದ್ದಾರೆ'' ಎಂದು ನಾನಿ ಹೇಳಿದ್ದಾರೆ.

  ಕಾನೂನು ಮೂಲಕವೇ ಹೋಗೋಣ

  ಈ ನೋಟೀಸ್ ಗೆ ಪ್ರತಿಕ್ರಿಯಿಸಿರುವ ನಟಿ ಶ್ರೀರೆಡ್ಡಿ ಖಂಡಿತಾ ''ಕಾನೂನಾತ್ಮಕವಾಗಿಯೇ ಹೋರಾಟ ಮಾಡೋಣ'' ಎಂದು ಚಾಲೆಂಜ್ ಹಾಕಿದ್ದಾರೆ.

  English summary
  Telugu actress Sri Reddy accused Nani of sexual harassment and revealed that he made the life of an aspiring actress hell. In a recent turn of events, Nani took to Twitter to hit back at Sri Reddy's accusations. Without taking names, Nani revealed that he has initiated legal action for defaming him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X