»   » ಕಿಚ್ಚ ಸುದೀಪ್ ಬಗ್ಗೆ ತೆಲುಗು ನಟನ ಗೊಂದಲದ ಹೇಳಿಕೆ

ಕಿಚ್ಚ ಸುದೀಪ್ ಬಗ್ಗೆ ತೆಲುಗು ನಟನ ಗೊಂದಲದ ಹೇಳಿಕೆ

Posted By:
Subscribe to Filmibeat Kannada
Telugu actor Vishnu Manchu on Sudeep
ನಾವಿಬ್ಬರೂ ಆಗ 'ಈಗೋ' ಫ್ರೆಂಡ್ಸ್.ಆದರೆ ಈಗ ಫ್ರೆಂಡ್ಸ್. ಹೀಗೆ ಹೇಳಿದ್ದು ತೆಲುಗಿನ ನಾಯಕನಟ ವಿಷ್ಣುಮಂಚು. ಕಿಚ್ಚ ಸುದೀಪ್ ಜೊತೆ ಸ್ನೇಹ ಹೇಗಾಯಿತು ಎಂಬುದನ್ನು ಒಂದೇ ಸಾಲಿನಲ್ಲಿ ಹೇಳಿ ಎಲ್ಲರನ್ನೂ ಗೊಂದಲಕ್ಕೀಡು ಮಾಡಿದರು.

ಈ ಗೊಂದಲದ ಹೇಳಿಕೆ ನೀಡಿ ವಿಷ್ಣುಮಂಚು ನಂತರ ಮಾತು ಮುಂದುವರಿಸಿದ್ದು ಹೀಗೆ.. ಆಗ ನನ್ನ ಮೊದಲನೇ ಸಿನಿಮಾ 'ಡಿ' ರಿಲೀಸ್ ಆಗಿತ್ತು. ಸೂಪರ್ ಹಿಟ್ ಕೂಡ ಆಯ್ತು. ನಂತರ ಕೃಷ್ಣಾರ್ಜುನ ಮಾಡಲು ಸ್ಕ್ರಿಪ್ಟ್ ವರ್ಕ್ ನಡೆಯುತ್ತಿತ್ತು. ಅದೇ ಸಮಯಕ್ಕೆ ಸುದೀಪ್ ಅಭಿನಯದ ಹಿಂದಿ ಚಿತ್ರ ರಣ್ ರಿಲೀಸ್ ಆಗಿತ್ತು.

ರಣ್ ಚಿತ್ರದಲ್ಲಿ ಸುದೀಪ್ ನಟನೆ ತುಂಬಾ ಚೆನ್ನಾಗಿತ್ತು. ಸೋ... ಸುದೀಪ್ ಗೆ ಫೋನ್ ಮಾಡ್ದೆ. ನಾನು ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲಿ ಒಂದು ರೋಲ್ ಇದೆ. ಅದನ್ನು ನೀವೇ ಮಾಡ್ಬೇಕು ಅನ್ನೋದು ನನ್ನ ಆಸೆ ಎಂದೇ...

ನನ್ನ ಫೋನಿಗೆ ಕೂಡಲೇ ರಿಯಾಕ್ಟ್ ಮಾಡಿದ ಸುದೀಪ್ ಯಾವ ಪಾತ್ರ ಅಂತ ಕೇಳದೇನೆ ಸಾರಾಸಗಟಾಗಿ ನಿರಾಕರಿಸಿಬಿಟ್ಟಿದ್ದರು. ಅದಕ್ಕೂ ಮೊದಲು ಸಿಕ್ಕಾಪಟ್ಟೆ ಸಂಭಾವನೆ ಸಹ ಕೇಳಿದ್ದರು. ಇರಲಿ ಅಂತ ಅದಕ್ಕೂ ಒಪ್ಪಿಕೊಂಡೆ, ಆದರೂ ಅವರು ನಟಿಸಲು ಒಪ್ಪಲಿಲ್ಲ. ಆ ಸಮಯದಲ್ಲಿ ಸುದೀಪ್ ಯಾಕೆ ನನ್ನ ಚಿತ್ರದಲ್ಲಿ ಪಾತ್ರ ಮಾಡಲು ನಿರಾಕರಿಸಿದರು ಅನ್ನೋದಕ್ಕೆ ಈ ಕ್ಷಣಕ್ಕೂ ನನಗೆ ಕಾರಣ ಗೊತ್ತಿಲ್ಲ.

ಅದಾದ ಕೆಲವು ತಿಂಗಳ ನಂತರ ಸುದೀಪ್ ಭೇಟಿಯಾದಾಗ ಸುದೀಪ್ ನನ್ನ ಬಳಿ 'ಬ್ರದರ್ ನಾನು ತೆಲುಗಿನಲ್ಲಿ ಸಿನಿಮಾ ಮಾಡ್ತಿದ್ದೀನಿ. ವಿಲನ್ ರೋಲ್. ರಾಜಮೌಳಿ ಡೈರೆಕ್ಟರ್ ಅಂದ್ರು. ಆಗ ಅವರ ಮೇಲೆ ಸಿಟ್ಟಿತ್ತು. ನಾನು ಏನೂ ಪ್ರತಿಕ್ರಿಯಿಸಲಿಲ್ಲ.

ನಂತರ ಸಿಸಿಎಲ್ ಕ್ರಿಕೆಟ್‍ನಲ್ಲಿ ಭೇಟಿಯಾದೆವು. ನನ್ನ ಮತ್ತು ಸುದೀಪ್ ಸಂಬಂಧ ಹಾಯ್-ಬಾಯ್ ಅಷ್ಟೇ ಇತ್ತು. ವಿಮಾನ ನಿಲ್ದಾಣದಲ್ಲೂ ಸಹ ಸೇಮ್ ಟು ಸೇಮ್. ನಂತರ ವಿಶಾಖಪಟ್ಟಣಂನಲ್ಲಿ ಕಡೆಯ ಮ್ಯಾಚ್ ಇತ್ತು.

ಮ್ಯಾಚ್ ಮುಗಿದ ರಾತ್ರಿ ಎಲ್ಲರೂ ಪಾರ್ಟಿಯಲ್ಲಿ ಪಾಲ್ಗೊಂಡಿದ್ದೆವು. ಆ ಪಾರ್ಟಿಯಲ್ಲಿ ನನ್ನನ್ನು ವಿನಾಕಾರಣ ಯಾರೋ ದೂಡಿದರು. ಮುಂದೆ ಇದ್ದವರು ನನ್ನ ಮೇಲೆ ಜಗಳಕ್ಕೆ ಬಂದರು. ಅವರು ಕರ್ನಾಟಕದವರೇ ಆಗಿದ್ದರು.

ಆಗ ನನಗೂ ಕರ್ನಾಟಕದವರು ಗೊತ್ತು ಎಂದು ಸುದೀಪ್ ನನ್ನು ಕರೆದೆ. ಅಲ್ಲಿವರೆಗೂ ನಾನು ಮತ್ತು ಸುದೀಪ್ ಈಗೋಯಿಂದ ವರ್ತಿಸುತ್ತಿದ್ದೆವು. ನಾನು ಕರೆದಾಕ್ಷಣ ಸುದೀಪ್ ಅಲ್ಲಿಗೆ ಬಂದು ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ಬಗೆಹರಿಸಿದರು. ಆಗ ನನಗೆ ಅರ್ಥವಾಯಿತು ಸುದೀಪ್ ಎಂಥ ಒಳ್ಳೆ ಮನುಷ್ಯಾಂತ..

ತದನಂತರ ಈಗ ರಿಲೀಸ್ ಆಯ್ತು. ಚಿತ್ರದಲ್ಲಿನ ಅವರ ನಟನೆ ಕಂಡು ಫಿದಾ ಆಗಿಬಿಟ್ಟೆ. ಫೋನ್ ಮಾಡಿ ವಿಷ್ ಮಾಡಿದೆ. ಈಗ ನಾವು ಒಳ್ಳೆ ಫ್ರೆಂಡ್ಸ್... ಎಂದು ಮಾತು ಮುಗಿಸಿದರು ವಿಷ್ಣುಮಂಚು.

English summary
I and Sudeep had a ego problem earlier. I requested him to act in my film but he has refused to act and also demanded high remuneration. After Eega I am a fan of him. Now we are good friends said Telugu actor Vishnu Manchu.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada