For Quick Alerts
  ALLOW NOTIFICATIONS  
  For Daily Alerts

  ಹಾಸ್ಯನಟ ಬ್ರಹ್ಮಾನಂದ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

  |

  ತೆಲುಗಿನ ಖ್ಯಾತ ಹಾಸ್ಯನಟ ಬ್ರಹ್ಮಾನಂದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪೆತ್ರೆಗೆ ದಾಖಲಾಗಿದ್ದಾರೆ. ಭಾನುವಾರ ಬ್ರಹ್ಮಾನಂದ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಮುಂಬೈನ ಏಷ್ಯನ್ ಹಾರ್ಟ್ ಇನ್ಸ್ ಸ್ಟಿಟ್ಯೂಟ್ ಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

  ಏಷ್ಯನ್ ಹಾರ್ಟ್ ಇನ್ಸ್ ಸ್ಟಿಟ್ಯೂಟ್ ಆಸ್ಪತ್ರೆಯ ಮುಖ್ಯ ವೈದ್ಯ ರಮಕಾಂತ ಪಂಡ ಅವರು ಬ್ರಹ್ಮಾನಂದ ಅವರಿಗೆ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದ್ದಾರಂತೆ.

  ದಿಢೀರ್ ಅಂತ ಪಾತಳಕ್ಕೆ ಕುಸಿಯಿತು 'ಬ್ರಹ್ಮಾನಂದಂ' ಸಂಭಾವನೆ.!

  62 ವರ್ಷದ ಹಾಸ್ಯ ನಟ ಬ್ರಹ್ಮಾನಂದ ಅವರ ಅನಾರೋಗ್ಯ ವಿಷ್ಯ ಬಹಿರಂಗವಾದರೇ, ಅಭಿಮಾನಿಗಳು ಆತಂಕ ಪಡುತ್ತಾರೆ ಎಂಬ ಕಾರಣದಿಂದ ಗೌಪ್ಯವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆಯಂತೆ.

  ಹಾಸ್ಯನಟ ಬ್ರಹ್ಮಾನಂದಂ ಸಂಭಾವನೆಗೂ, ಆಸ್ತಿಗೂ ಅಜಗಜಾಂತರ ವ್ಯತ್ಯಾಸ.!

  ಈ ವಿಷ್ಯ ತಿಳಿಯುತ್ತಿದ್ದಂತೆ ಬ್ರಹ್ಮಾನಂದ ಅವರು ಆದಷ್ಟೂ ಬೇಗ ಚೇತರಿಸಿಕೊಳ್ಳಲಿ, ಆಸ್ಪತ್ರೆಯಿಂದ ಬೇಗ ವಾಪಸ್ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

  ಅಂದ್ಹಾಗೆ, ಬ್ರಹ್ಮಾನಂದ ಅವರು 1000 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ವಿಶೇಷ ದಾಖಲೆ ಮಾಡಿದ್ದಾರೆ. ಇದೇ ವಿಷ್ಯಕ್ಕೆ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. 2009ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ.

  ಪುನೀತ್ 'ನಿನ್ನಿಂದಲೇ' ಚಿತ್ರದಲ್ಲಿ ಗಿನ್ನಿಸ್ ದಾಖಲೆಯ ಹಾಸ್ಯನಟ

  1985ರಲ್ಲಿ ತೆರೆಕಂಡಿದ್ದ 'ಅಹಾ ನಾ ಪೆಲ್ಲಂಟಾ' ಚಿತ್ರದ ಮೂಲಕ ಬ್ರಹ್ಮಾನಂದ ಅವರು ಸಿನಿಲೋಕಕ್ಕೆ ಪರಿಚಯವಾದರು. ರೆಡಿ, ಆನಂದಂ, ರೇಸುಗುರ್ರಂ, ಮನ್ಮಥಡು, ಕೊಂಚಂ ಕಷ್ಟಂ ಕೊಂಚಂ ಕಷ್ಟಂ, ದೂಕುಡು ಬಾದ್ ಶಾ ಸೇರಿದಂತೆ ಹಲವು ಹಿಟ್ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Brahmanandam, a huge Telugu actor and comedian, had to be rushed to the hospital earlier this week for a heart surgery. Here's all you need to know about his health.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X