»   » ನಂಬಿದ್ರೆ ನಂಬಿ, ತೆಲುಗಿನಲ್ಲಿ ನಿಖಿಲ್ ಕುಮಾರ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.!

ನಂಬಿದ್ರೆ ನಂಬಿ, ತೆಲುಗಿನಲ್ಲಿ ನಿಖಿಲ್ ಕುಮಾರ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.!

Posted By:
Subscribe to Filmibeat Kannada

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ನಾಳೆ (ಅಕ್ಟೋಬರ್ 6) ವಿಶ್ವದಾದ್ಯಂತ ತೆರೆಗೆ ಬರಲಿದೆ.

ಬೆಳ್ಳಿ ಪರದೆ ಮೇಲೆ 'ಜಾಗ್ವಾರ್' ಅಬ್ಬರ ಹೇಗಿರಬಹುದು ಅಂತ ಈಗಲೇ ಹೇಳುವುದು ಕಷ್ಟ. ಟ್ರೈಲರ್ ನೋಡಿ, ನಿಖಿಲ್ ಕುಮಾರ್ ಆಕ್ಟಿಂಗ್ ಬಗ್ಗೆ ಜಡ್ ಮೆಂಟ್ ನೀಡಲು ಅಸಾಧ್ಯ. ಹೀಗಿದ್ದರೂ, ನಿಖಿಲ್ ಕುಮಾರ್ ಗೆ ತೆಲುಗು ಸಿನಿ ಅಂಗಳದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ ಅಂದ್ರೆ ನೀವು ನಂಬಲೇಬೇಕು.! ['ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!]


ನಿಖಿಲ್ ಕುಮಾರ್ ಅಭಿನಯಿಸಿರುವ ಮೊದಲ ಸಿನಿಮಾ ಇನ್ನೂ ತೆರೆಗೆ ಬರುವ ಮುನ್ನವೇ, ನಿಖಿಲ್ ಕಾಲ್ ಶೀಟ್ ಪಡೆದಿದ್ದಾರೆ ತೆಲುಗಿನ ಖ್ಯಾತ ಡೈರೆಕ್ಟರ್.!


ನಿಖಿಲ್ ಕುಮಾರ್ ಎರಡನೇ ಸಿನಿಮಾ ಫಿಕ್ಸ್

ನಿಖಿಲ್ ಕುಮಾರ್ ರವರ ಎರಡನೇ ಚಿತ್ರಕ್ಕೆ ಸದ್ಯದಲ್ಲೇ ಗ್ರ್ಯಾಂಡ್ ಓಪನ್ನಿಂಗ್ ಸಿಗಲಿದೆ. ಈ ಬಾರಿ ನಿಖಿಲ್ ಕುಮಾರ್ ರವರಿಗೆ ನಿರ್ದೇಶನ ಮಾಡಲು ಸಜ್ಜಾಗಿರುವವರು ತೆಲುಗಿನ ಖ್ಯಾತ ನಿರ್ದೇಶಕ ಸುರೇಂದರ್ ರೆಡ್ಡಿ ['ಜಾಗ್ವಾರ್' ಬರೋ ಮುನ್ನವೇ 3 ತೆಲುಗು ಚಿತ್ರಕ್ಕೆ ನಿಖಿಲ್ ಬುಕ್ ಆಗಿದ್ದಾರಾ?]


ಸುರೇಂದರ್ ರೆಡ್ಡಿ ಕುರಿತು

'ಆತನೊಕ್ಕಡೆ', 'ಕಿಕ್', 'ಊಸರವಳ್ಳಿ', 'ರೇಸ್ ಗುರ್ರಂ', 'ಕಿಕ್ 2' ಸೇರಿದಂತೆ ತೆಲುಗಿನಲ್ಲಿ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ಸುರೇಂದರ್ ರೆಡ್ಡಿ ಈಗ ನಿಖಿಲ್ ಕುಮಾರ್ ಗೆ ಆಕ್ಷನ್ ಕಟ್ ಹೇಳಲು ಮುಂದೆ ಬಂದಿದ್ದಾರೆ. [ಎಕ್ಸ್ ಕ್ಲೂಸಿವ್ ಫೋಟೋ: 'ಜಾಗ್ವಾರ್' ಅಡ್ಡದಲ್ಲಿ ತಮನ್ನಾ ಜಿಂಗಿಚಕ್ಕ]


ತೆಲುಗಿನಲ್ಲೇ ನೆಲೆಯೂರುತ್ತಾರಾ ನಿಖಿಲ್.?

ಟಾಲಿವುಡ್ ನಲ್ಲಿ ನಿಖಿಲ್ ಕುಮಾರ್ ಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ, ನಿಖಿಲ್ ಕುಮಾರ್ ಅಲ್ಲೇ ಭದ್ರವಾಗಿ ನೆಲೆಯೂರುವುದರಲ್ಲಿ ಅನುಮಾನ ಬೇಡ. [ನಿಖಿಲ್ 'ಜಾಗ್ವಾರ್' ಬಗ್ಗೆ ಜನ ಹೀಗೂ ಯೋಚನೆ ಮಾಡ್ತಿದ್ದಾರೆ ಸ್ವಾಮಿ!]


ದ್ವಿಭಾಷೆಯಲ್ಲಿ ತಯಾರಾಗಲಿದೆ ಈ ಚಿತ್ರ

ಸುರೇಂದರ್ ರೆಡ್ಡಿ ನಿರ್ದೇಶಿಸಲಿರುವ, ನಿಖಿಲ್ ಕುಮಾರ್ ಅಭಿನಯಿಸಲಿರುವ ಹೊಸ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಲಿದೆ. ಆ ಮೂಲಕ ಸುರೇಂದರ್ ರೆಡ್ಡಿ ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಲಿದ್ದಾರೆ.


ಮುಂದಿನ ವರ್ಷ ಶೂಟಿಂಗ್.!

2017 ರ ಫೆಬ್ರವರಿಯಿಂದ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ. ತಾರಾಬಳಗ ಹಾಗೂ ತಂತ್ರಜ್ಞರ ತಂಡ ಇನ್ನೂ ಕನ್ಫರ್ಮ್ ಆಗಿಲ್ಲ.


ನಾಳೆ 'ಜಾಗ್ವಾರ್' ನೋಡಲು ರೆಡಿನಾ?

ನಾಳೆ (ಅಕ್ಟೋಬರ್ 6) ಬಿಡುಗಡೆ ಆಗುತ್ತಿರುವ 'ಜಾಗ್ವಾರ್' ಚಿತ್ರವನ್ನ ನೋಡಲು ನೀವು ರೆಡಿನಾ?


English summary
Director Surender Reddy of 'Race Gurram', 'Kick' fame is all set to direct Kannada Actor Nikhil Kumar's next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada