For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಅನುಷ್ಕಾ ಶೆಟ್ಟಿ 'ರುದ್ರಮ್ಮದೇವಿ' ಗೆ, ಬಹುಪರಾಕ್

  By Suneetha
  |

  ತೆಲುಗು-ತಮಿಳು ತಾರೆ ಅನುಷ್ಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರ 'ರುದ್ರಮ್ಮದೇವಿ' ನಾಳೆ (ಅಕ್ಟೋಬರ್ 9) ಭರ್ಜರಿಯಾಗಿ ತೆರೆ ಕಾಣುತ್ತಿದೆ. ನಿರ್ದೇಶಕ ಗುಣಶೇಖರ್ ಅವರ ಕನಸಿನ ಪ್ರಾಜೆಕ್ಟ್ ಆಗಿರುವ ಈ ಚಿತ್ರ ಭಾರತದ ಪ್ರಥಮ 3ಡಿ ಸ್ಟಿರಿಯೋಸ್ಕೋಪಿಕ್ ಸಿನಿಮಾವಾಗಿದೆ.

  ತೆಲುಗು ರಾಣಿಯೊಬ್ಬಳ ನಿಜ ಜೀವನ ಕಥೆಯನ್ನಾಧರಿಸಿದ 'ರುದ್ರಮ್ಮದೇವಿ' ಈಗಾಗಲೇ ಟ್ರೈಲರ್ ಮೂಲಕ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' ಬಿಡುಗಡೆಗೂ ಮುನ್ನ ಭಾರಿ ಕುತೂಹಲ ಹುಟ್ಟಿಸಿ ತೆರೆ ಕಂಡ ನಂತರ ಪ್ರೇಕ್ಷಕರಿಂದ ನೆಗೆಟಿವ್ ರೆಸ್ಪಾನ್ಸ್ ಪಡೆದುಕೊಂಡಿತ್ತು.[ಸೆಪ್ಟೆಂಬರ್ 17 ರಂದು ತೆರೆ ಮೇಲೆ 'ರುದ್ರಮ್ಮದೇವಿ']

  ಈ ಮೊದಲು 'ರುದ್ರಮ್ಮದೇವಿ' ಚಿತ್ರದ ಬಿಡುಗಡೆ ದಿನಾಂಕದಲ್ಲಿ ಹಲವಾರು ಕನ್ ಫ್ಯೂಶನ್ ಗಳಿದ್ದು, ಇದೀಗ ಕೊನೆಗೂ ಚಿತ್ರ ನಾಳೆ (ಅಕ್ಟೋಬರ್ 9) ಇಡೀ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ನಿತ್ಯಾ ಮೆನನ್ ಪ್ರಕಾಶ್ ರೈ ಮುಂತಾದವರು ಕಾಣಿಸಿಕೊಳ್ಳುತ್ತಿದ್ದು, 'ಬಾಹುಬಲಿ', ಹಾಗೂ ತಮಿಳು 'ಪುಲಿ' ಚಿತ್ರದಂತೆ 'ರುದ್ರಮ್ಮದೇವಿ' ಹವಾ ಎಬ್ಬಿಸುತ್ತಾ ಅಂತ ಕಾದು ನೋಡಬೇಕು. ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ.[ಅನುಷ್ಕಾ ಶೆಟ್ಟಿ ತೂಕ ಹೆಚ್ಚಿಸಿಕೊಂಡಿದ್ದು ಯಾಕೆ?]

  ಗುಣಶೇಖರ್ ಆಕ್ಷನ್-ಕಟ್ ಹೇಳಿರುವ ಪಕ್ಕಾ ಫ್ಯಾಮಿಲಿ ಕುಳಿತು ನೋಡಬಹುದಾದ 'ರುದ್ರಮ್ಮದೇವಿ' ಚಿತ್ರಕ್ಕೆ ನಿರ್ದೇಶಕ ಗುಣಶೇಖರ್ ಅವರೇ ಬಂಡವಾಳ ಹೂಡಿದ್ದಾರೆ. ಮುಂದೆ ಓದಿ..

  ರಾಣಿ 'ರುದ್ರಮ್ಮದೇವಿ'ಯಾಗಿ ಅನುಷ್ಕಾ ಶೆಟ್ಟಿ

  ರಾಣಿ 'ರುದ್ರಮ್ಮದೇವಿ'ಯಾಗಿ ಅನುಷ್ಕಾ ಶೆಟ್ಟಿ

  'ಅರುಂಧತಿ', 'ಬಾಹುಬಲಿ' ಚಿತ್ರದ ನಂತರ ಬಿಗ್ ಬಜೆಟ್ ಹಾಗೂ ನಾಯಕಿ ಪ್ರಧಾನ ಪಾತ್ರದಲ್ಲಿ 'ಬೊಮ್ಮಾಲಿ' ಅನುಷ್ಕಾ ಶೆಟ್ಟಿ ಅವರು 'ರುದ್ರಮ್ಮದೇವಿ'ಯಾಗಿ ಸಖತ್ ಆಗಿ ಮಿಂಚಿದ್ದಾರೆ.

  ಗೋನ ಗನ್ನ ರೆಡ್ಡಿಯಾಗಿ ಅಲ್ಲು ಅರ್ಜುನ್

  ಗೋನ ಗನ್ನ ರೆಡ್ಡಿಯಾಗಿ ಅಲ್ಲು ಅರ್ಜುನ್

  ಟಾಲಿವುಡ್ ನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅವರು 'ರುದ್ರಮ್ಮದೇವಿ' ಚಿತ್ರದಲ್ಲಿ ಗೋನ ಗನ್ನ ರೆಡ್ಡಿಯಾಗಿ ಡಿಫರೆಂಟ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ.

  ತೆರಿಗೆ ರಹಿತ ಚಿತ್ರ 'ರುದ್ರಮ್ಮದೇವಿ'

  ತೆರಿಗೆ ರಹಿತ ಚಿತ್ರ 'ರುದ್ರಮ್ಮದೇವಿ'

  ತೆಲಂಗಾಣ ರಾಣಿಯೊಬ್ಬಳ ನಿಜ ಜೀವನ ಕಥೆಯಾಧರಿತ 'ರುದ್ರಮ್ಮದೇವಿ' ಚಿತ್ರಕ್ಕೆ ತೆರಿಗೆ ಕಟ್ಟಲು ಇಲ್ಲವಂತೆ. ಚಿತ್ರದ ಪ್ರೊಮೋಷನ್ ಗೆ ತೆಲಂಗಾಣ ಸಿ.ಎಂ, ಕೆ.ಸಿ.ಆರ್ ಅವರನ್ನು ಭೇಟಿ ಆದ ಸಂದರ್ಭದಲ್ಲಿ ಅವರು ಚಿತ್ರತಂಡಕ್ಕೆ ಇಂತಹ ಸಿಹಿ ಸುದ್ದಿ ನೀಡಿದ್ದಾರೆ.

  ಚಾಲುಕ್ಯ ವೀರಭದ್ರುಡು ಪಾತ್ರದಲ್ಲಿ ರಾಣಾ ದಗ್ಗುಬಾಟಿ

  ಚಾಲುಕ್ಯ ವೀರಭದ್ರುಡು ಪಾತ್ರದಲ್ಲಿ ರಾಣಾ ದಗ್ಗುಬಾಟಿ

  'ರಾಣಿ ರುದ್ರಮ್ಮದೇವಿ' ಚಿತ್ರದಲ್ಲಿ 'ಬಾಹುಬಲಿ' ನಂತರ ರಾಣಾ ದಗ್ಗುಬಾಟಿ ಅವರು ಚಾಲುಕ್ಯ ವೀರಭದ್ರುಡು ಎಂಬ ಮುಖ್ಯ ಪಾತ್ರ ವಹಿಸುತ್ತಿದ್ದಾರೆ.

   'ರುದ್ರಮ್ಮದೇವಿ' 3ಡಿ ಸಿನಿಮಾ

  'ರುದ್ರಮ್ಮದೇವಿ' 3ಡಿ ಸಿನಿಮಾ

  ಅನುಷ್ಕಾ ಶೆಟ್ಟಿ ಅವರ 'ರುದ್ರಮ್ಮದೇವಿ' ಭಾರತದ ಮೊದಲ 3ಡಿ ಸ್ಟಿರಿಯೋಸ್ಕೋಪಿಕ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

  13 ರ ಶತಮಾನದ ಇತಿಹಾಸ ಮರುಕಳಿಸುತ್ತದೆ

  13 ರ ಶತಮಾನದ ಇತಿಹಾಸ ಮರುಕಳಿಸುತ್ತದೆ

  'ರುದ್ರಮ್ಮದೇವಿ' ಚಿತ್ರದ ಮೂಲಕ ನಿರ್ದೇಶಕ ಗುಣಶೇಖರ್ ಅವರು ಪ್ರೇಕ್ಷಕರನ್ನು 13ರ ಶತಮಾನಕ್ಕೆ ಕರೆದೊಯ್ಯಲಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪ್ರಮಾಣ ಪತ್ರ ನೀಡಿದೆ.

  ಮೂರು ಭಾಷೆಗಳಲ್ಲಿ ತೆರೆಗೆ

  ಮೂರು ಭಾಷೆಗಳಲ್ಲಿ ತೆರೆಗೆ

  ಅನುಷ್ಕಾ ಶೆಟ್ಟಿ ಅವರ 'ರುದ್ರಮ್ಮದೇವಿ' ತೆಲುಗು, ತಮಿಳು ಹಾಗೂ ಹಿಂದಿ ಈ ಮೂರು ಭಾಷೆಗಳಲ್ಲಿ ನಾಳೆ (ಅಕ್ಟೋಬರ್ 9) ಭರ್ಜರಿಯಾಗಿ ತೆರೆ ಕಾಣಲಿದೆ.

  English summary
  Telugu Movie 'Rudhramadevi' is all set to release Tomarrow (October 9th). The Movie features Telugu Actress Anushka Shetty, Telugu Actress Nithya Menon, Telugu Actor Allu Arjun, Telugu Actor Rana Daggubati. The movie is directed by Gunasekhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X