For Quick Alerts
  ALLOW NOTIFICATIONS  
  For Daily Alerts

  ತೆಲುಗಿನಲ್ಲಿ ಬರ್ತಿದೆ ಅಬ್ದುಲ್ ಕಲಾಂ ಬಯೋಪಿಕ್

  |

  ಗ್ರೇಟ್ ಇಂಡಿಯನ್, ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಇಂಡಿಯಾ ಅಬ್ದುಲ್ ಕಲಾಂ ಅವರ ಬಯೋಪಿಕ್ ಈಗ ಟಾಲಿವುಡ್ ನಲ್ಲಿ ಬರುತ್ತಿದೆ.

  ಎನ್ ಟಿ ಆರ್ ಹಾಗೂ ನಟಿ ಸಾವಿತ್ರಿ ಬಯೋಪಿಕ್ ಗಳ ಬಳಿಕ ಅಬ್ದುಲ್ ಕಲಾಂ ಜೀವನಾಧಾರಿತ ಸಿನಿಮಾ ಮಾಡಲು ತೆಲುಗು ಸಿನಿಮಾ ಮಂದಿ ಮುಂದಾಗಿದ್ದಾರೆ. ಅಬ್ದುಲ್ ಕಲಾಂ ಸಿನಿಮಾ ಬರುವುದಾಗಿ ಬಹಳ ದಿನಗಳಿಂದ ಸುದ್ದಿ ಇದ್ದು, ಈಗ ಅದು ಅಧಿಕೃತವಾಗಿದೆ.

  ಅಬ್ದುಲ್ ಕಲಾಂ ಹೆಸರನ್ನು ತಪ್ಪಾಗಿ ಟ್ವೀಟಿಸಿ ಪೆಚ್ಚಾದ ಬಾಲಿವುಡ್ ನಟಿ

  ಅಭಿಷೇಕ್ ಅಗರ್ವಾಲ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ 'ಗುಡಾಚಾರಿ' ಎಂಬ ಸಿನಿಮಾವನ್ನು ಅವರು ಮಾಡಿದ್ದರು. ಸದ್ಯ, 'ಟೈಗರ್ ನಾಗೇಶ್ವರ ರಾವ್‌' ಹಾಗೂ 'ಗುಡಾಚಾರಿ 2' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಕನ್ನಡ 'ಕಿರಿಕ್ ಪಾರ್ಟಿ' ತೆಲುಗು ರಿಮೇಕ್ ಗೆ ಇವರೇ ಸಹ ನಿರ್ಮಾಣ ಮಾಡಿದ್ದರು.

  ಸದ್ಯ, ಸಿನಿಮಾ ಮಾಡುವುದು ಪಕ್ಕಾ ಆಗಿದ್ದು, ಕಲಾಂ ಕುಟುಂಬದಿಂದ ಅನುಮತಿ ಪಡೆಯಬೇಕಾಗಿದೆಯಂತೆ. ''ಕಲಾಂ ಇಡೀ ಭಾರತದ ಹೀರೋ. ಅವರು ಎಷ್ಟೋ ಯುವಕರಿಗೆ ಸ್ಫೂರ್ತಿ ನೀಡುತ್ತಾರೆ.'' ಎಂದಿರುವ ಅಭಿಷೇಕ್ ಅಗರ್ವಾಲ್ ಅದೇ ಕಾರಣಕ್ಕೆ ಈ ಸಿನಿಮಾ ಮಾಡಲು ಮುಂದಾಗಿದ್ದಾರೆ.

  ಅಂದಹಾಗೆ, ಈ ಸಿನಿಮಾದ ತಾರ ಬಳಗ ಸೇರಿದಂತೆ ಹೆಚ್ಚಿನ ಮಾಹಿತಿ ಸದ್ಯದಲ್ಲಿಯೇ ತಿಳಿಸಲಿದ್ದಾರಂತೆ.

  English summary
  Telugu producer Abhishek Agarwal has announced APJ Abdul Kalam biopic movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X