For Quick Alerts
  ALLOW NOTIFICATIONS  
  For Daily Alerts

  ವೇಶ್ಯಾ ದಂಧೆಯಲ್ಲಿ ಪೊಲೀಸರ ಬಲೆಗೆ ಕಿರುತೆರೆ ನಟಿ

  By ಅನಂತರಾಮು, ಹೈದರಾಬಾದ್
  |

  ಕಿರುತೆರೆ ತಾರೆಗಳು, ಬೆಳ್ಳಿತೆರೆ ನಕ್ಷತ್ರಗಳು ಆಗಾಗ ವೇಶ್ಯಾ ವಾಟಿಕೆ ಜಾಲದಲ್ಲಿ ಸಿಕ್ಕಿಬೀಳುತ್ತಲೇ ಇದ್ದಾರೆ. ಈಗ ಹೊಸದಾಗಿ ಮತ್ತೊಬ್ಬ ಕಿರುತೆರೆ ನಟಿ ಸಿಕ್ಕಿಬಿದ್ದಿದ್ದಾರೆ. ಆದರೆ ಇದು ನಡೆದಿರುವುದು ಪಕ್ಕದ ಆಂಧ್ರಪ್ರದೇಶದಲ್ಲಿ.

  ಹೈದರಾಬಾದಿನ ಮಾದಾಪುರ್ ಪೊಲೀಸರು 23ರ ಹರೆಯದ ನಟಿಯನ್ನು ಬಂಧಿಸಿದ್ದಾರೆ. ಆಕೆಯ ಜೊತೆಗಿದ್ದ ಇಬ್ಬರನ್ನೂ ಪೊಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಬಂಧಿತರಿಂದ ರು.2 ಲಕ್ಷ ನಗದು ಮೂರು ಮೊಬೈಲ್ ಗಳನ್ನೂ ಸ್ವಾಧೀನ ಪಡಿಸಿಕೊಂಡಿದ್ದಾರೆ. [ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ತಾರೆಗಳು (ಫೋಟೋ ಫೀಚರ್)]

  ಸದ್ಯಕ್ಕೆ ಇವರ ವಿವರಗಳನ್ನು ಗೋಪ್ಯವಾಗಿ ಇಡಲಾಗಿದೆ. ಕಿರುತೆರೆ ಹಾಗೂ ಚಿತ್ರೋದ್ಯಮದಲ್ಲಿನ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಕೆಲವರು ಈ ರೀತಿಯ ಅಡ್ಡದಾರಿಗಳನ್ನು ತುಳಿಯುತ್ತಿದ್ದಾರೆ. ಕೆಲವೊಮ್ಮೆ ಪರಿಸ್ಥಿತಿಯ ಪ್ರಭಾವದಿಂದಲೂ ದಾರಿತಪ್ಪುತ್ತಿದ್ದಾರೆ ಎನ್ನುತ್ತವೆ ಮೂಲಗಳು.

  ಸಿನಿಮಾ ಅವಕಾಶಗಳು ಕಡಿಮೆಯಾಗುತ್ತಿರುವುದು, ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಈ ರೀತಿಯ ಘಟನೆಗಳು ಬೆಳಕಿಗೆ ಬರುತ್ತಿವೆ. ಇದುವರೆಗೂ ಹಲವಾರು ತಾರೆಗಳು ವೇಶ್ಯಾ ವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ದಕ್ಷಿಣದ ತಾರೆಗಳಾದ ಕಿನ್ನೆರ, ಯಮುನಾ ಸೇರಿದಂತೆ ಭುವನೇಶ್ವರಿ ಸಾಯಿರಾ ಭಾನು, ಜ್ಯೋತಿ ಅವರಂತಹ ಹಲವರು ಇದ್ದಾರೆ.

  English summary
  A Telugu TV actress was among the three people arrested in Hyderabad on Wednesday. The police officials say that the arrests have been made in connection with a flesh trade racket at Madhapur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X