»   » ರಿಲೀಸ್ ಗೂ ಮುನ್ನ ದಾಖಲೆ ಮೊತ್ತಕ್ಕೆ ಮಾರಾಟವಾದ ಕಿಚ್ಚನ ಚಿತ್ರ

ರಿಲೀಸ್ ಗೂ ಮುನ್ನ ದಾಖಲೆ ಮೊತ್ತಕ್ಕೆ ಮಾರಾಟವಾದ ಕಿಚ್ಚನ ಚಿತ್ರ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ನಿತ್ಯಾ ಮೆನನ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ, ತಾತ್ಕಾಲಿಕವಾಗಿ ಕನ್ನಡದಲ್ಲಿ ಕೋಟಿಗೊಬ್ಬ-2 ಹಾಗೂ ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಎಂಬ ಶೀರ್ಷಿಕೆಯಲ್ಲಿ ಮೂಡಿಬರುತ್ತಿರುವ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕುಗಳನ್ನು, ಹೈದರಾಬಾದ್ ಮೂಲದ ಅದಿತ್ಯ ಮ್ಯೂಸಿಕ್ ಸಂಸ್ಥೆ ದಾಖಲೆ ಮಟ್ಟದ ಮೊತ್ತ ಸುಮಾರು 1.30 ಕೋಟಿ ರೂಪಾಯಿಗೆ ಖರೀದಿಸಿದೆ.

ಸದ್ಯಕ್ಕೆ ಇದು ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ನಡೆದ ದಾಖಲೆ ಎನ್ನಬೇಕು. ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣದ ಮತ್ತು ನಿರ್ದೇಶಕ ಕೆ.ಎಸ್ ರವಿಕುಮಾರ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣಗೊಳ್ಳುತ್ತಿದೆ.[ಸುದೀಪ್ ಚಿತ್ರಕ್ಕೆ ಇನ್ನು 60 ದಿನಗಳ ಶೂಟಿಂಗ್ ಬಾಕಿ!]

Temporarily titled 'Kotigobba 2's Hindi version goes for Rs 1.30 crore

ಇದೀಗ ಚಿತ್ರದ ಎಲ್ಲಾ ಹಕ್ಕುಗಳ ಮಾರಾಟ ನಗದು ವ್ಯವಹಾರದಲ್ಲಿ ಮುಗಿದಿದೆ. ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್, ಬಹುಮುಖ ಪ್ರತಿಭೆ ಪ್ರಕಾಶ್ ರಾಜ್ ಮತ್ತು ಮುಖೇಶ್ ತಿವಾರಿ ಮುಂತಾದ ಘಟಾನುಘಟಿಗಳು ಕಾಣಿಸಿಕೊಂಡಿರುವ ಈ ಚಿತ್ರ, ಶೂಟಿಂಗ್ ಸಂದರ್ಭದಿಂದಲೇ ಭಾರಿ ಆಸಕ್ತಿ ಹುಟ್ಟಿಸಿತ್ತು.

ಅಲ್ಲದೇ ಈ ನಟರು ಬಾಲಿವುಡ್ ಕ್ಷೇತ್ರಕ್ಕೂ ಚಿರಪರಿಚಿತರು, ಜೊತೆಗೆ ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ ನಿರ್ದೇಶನ ಕೂಡ ಈ ಮಹತ್ತರ ಬೆಳವಣಿಗೆಗೆ ಕಾರಣ ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು.[ಕಿಚ್ಚನ ಬರ್ತ್ ಡೇ ಸ್ಪೆಷಲ್: ಫಸ್ಟ್ ಲುಕ್ ಟೀಸರ್ ಝಲಕ್]

Temporarily titled 'Kotigobba 2's Hindi version goes for Rs 1.30 crore

ಒಟ್ನಲ್ಲಿ ಈ ಸಿನಿಮಾ ಸೆಟ್ಟೇರಿದಾಗಿನಿಂದ ಗಾಂಧಿನಗರ ಸೇರಿದಂತೆ ಕಾಲಿವುಡ್ ಕ್ಷೇತ್ರದಲ್ಲೂ ಸಖತ್ ಸೌಂಡ್ ಮಾಡುತ್ತಿರುವುದರಿಂದ, ಡಿಸೆಂಬರ್ ಕೊನೆಗೆ ಚಿತ್ರೀಕರಣ ಮುಗಿಸಿ ಜನವರಿ ತಿಂಗಳು ಹೊಸ ವರ್ಷಕ್ಕೆ ಈ ಚಿತ್ರವನ್ನು ತೆರೆ ಮೇಲೆ ತರುವ ಎಲ್ಲಾ ಪ್ರಯತ್ನವನ್ನು ಚಿತ್ರತಂಡ ಮಾಡುತ್ತಿದೆ.

ಇದೇ ಮೊದಲ ಬಾರಿಗೆ ಬಹುಭಾಷಾ ನಟಿ ನಿತ್ಯಾ ಮೆನನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂದಾಗಿರುವುದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತಿದೆ. ಅಲ್ಲದೇ ಕಾಲಿವುಡ್ ಕ್ಷೇತ್ರಕ್ಕೂ ಚಿತ್ರದ ಬಗ್ಗೆ ಭಾರಿ ಕುತೂಹಲವಿದ್ದು, ಚಿತ್ರದ ವಿತರಣೆಗಾಗಿ ಹಲವಾರು ಸಂಸ್ಥೆಗಳು ಮುಂದೆ ಬಂದಿವೆ ಎಂದು ತಿಳಿದು ಬಂದಿದೆ.

English summary
Hyderabad-based Aditya Music has secured the rights for the Hindi dubbed version of the temporarily titled Kotigobba 2 starring Sudeep and Nithya Menen for a whopping `1.30 crore, a first in Sandalwood. The movie is directed by KS Ravikumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada