India
  For Quick Alerts
  ALLOW NOTIFICATIONS  
  For Daily Alerts

  ತಮಿಳು ಸ್ಟಾರ್ ವಿಜಯ್ ನಟಿಸಿರುವ 'ಮಾಸ್ಟರ್' ಕನ್ನಡದಲ್ಲೂ ಬಿಡುಗಡೆ

  |

  ತಮಿಳು ನಟ ವಿಜಯ್ ನಾಯಕನಾಗಿ ನಟಿಸಿರುವ ಮಾಸ್ಟರ್ ಸಿನಿಮಾ ಜನವರಿ 13 ರಂದು ಚಿತ್ರಮಂದಿರದಲ್ಲಿ ನೇರವಾಗಿ ಬಿಡುಗಡೆಯಾಗುತ್ತಿದೆ. ಲಾಕ್‌ಡೌನ್ ಬಳಿಕ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸ್ಟಾರ್ ನಟನ ಚಿತ್ರ ಇದಾಗಿರುವುದರಿಂದ ಸಹಜವಾಗಿ ನಿರೀಕ್ಷೆ ಹೆಚ್ಚಿದೆ.

  ಈ ಸಿನಿಮಾ ಕೇವಲ ತಮಿಳುನಾಡಿಗೆ ಮಾತ್ರವಲ್ಲ, ಸೌತ್ ಇಂಡಿಯಾದಲ್ಲಿ ಚಿತ್ರ ಪ್ರೇಮಿಗಳು ಹೇಗೆ ಸ್ವೀಕರಿಸುತ್ತಾರೆ, ಚಿತ್ರಮಂದಿರಕ್ಕೆ ಜನ ಹೇಗೆ ಬರ್ತಾರೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ಉದಾಹರಣೆಯಾಗಿದೆ. ಈ ಸಿನಿಮಾ ಬಳಿಕ ಇಡೀ ದಕ್ಷಿಣದ ದೊಡ್ಡ ಸಿನಿಮಾಗಳ ಭವಿಷ್ಯ ನಿಂತಿದೆ.

  ಬಿಗ್ ಅನೌನ್ಸ್ ಮೆಂಟ್; ದಳಪತಿ ವಿಜಯ್ 'ಮಾಸ್ಟರ್' ಬಿಡುಗಡೆ ದಿನಾಂಕ ಘೋಷಣೆಬಿಗ್ ಅನೌನ್ಸ್ ಮೆಂಟ್; ದಳಪತಿ ವಿಜಯ್ 'ಮಾಸ್ಟರ್' ಬಿಡುಗಡೆ ದಿನಾಂಕ ಘೋಷಣೆ

  'ಮಾಸ್ಟರ್' ಸಿನಿಮಾ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ, ಕನ್ನಡದಲ್ಲೂ ಮಾಸ್ಟರ್ ಸಿನಿಮಾ ತೆರೆಕಾಣುತ್ತಿದೆ ಎಂಬ ವಿಚಾರ ಹೊರಬಿದ್ದಿದೆ. ಹೌದು, ಮಾಸ್ಟರ್ ಸಿನಿಮಾ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಡಬ್ ಆಗಿ ಬರ್ತಿದೆ. ಕನ್ನಡದ ಪೋಸ್ಟರ್ ಸಹ ವೈರಲ್ ಆಗಿದೆ.

  'ಮಾಸ್ಟರ್' ಸಿನಿಮಾ ರಿಲೀಸ್ ಹಿನ್ನೆಲೆ ತಮಿಳುನಾಡು ಮುಖ್ಯಮಂತ್ರಿಯ ಬಳಿಕ ನಟ ವಿಜಯ್ ''ಚಿತ್ರಮಂದಿರದಲ್ಲಿ ಶೇಕಡಾ 100 ರಷ್ಟು ಅವಕಾಶ ಕೊಡಿ'' ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

  ಒಂದು ಕಡೆ ಕೊರೊನಾ ವೈರಸ್, ಈಗ ಬ್ರಿಟನ್‌ನಿಂದ ಹೊಸ ರೀತಿ ಸೋಂಕು ಹಬ್ಬಿದೆ ಎಂಬ ಆತಂಕ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಜಯ್ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತಿರುವುದು ನಿಜಕ್ಕೂ ಸವಾಲಾಗಿದೆ.

  'ಚಿತ್ರಮಂದಿರದಲ್ಲಿ 100ರಷ್ಟು ಅವಕಾಶ ಕೊಡಿ': ಸಿಎಂಗೆ ಮನವಿ ಮಾಡಿದ ವಿಜಯ್'ಚಿತ್ರಮಂದಿರದಲ್ಲಿ 100ರಷ್ಟು ಅವಕಾಶ ಕೊಡಿ': ಸಿಎಂಗೆ ಮನವಿ ಮಾಡಿದ ವಿಜಯ್

  ಬಾಯ್ ಫ್ರೆಂಡ್ ಜೊತೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಗೊಗ್ಲಿ ಬೆಡಗಿ | Filmibeat Kannada

  ಕಳೆದ ವಾರವಷ್ಟೇ ಸೆನ್ಸಾರ್ ಮುಗಿಸಿರುವ ಮಾಸ್ಟರ್ ಸಿನಿಮಾ ಯು/ಎ ಪ್ರಮಾಣಪತ್ರ ಪಡೆದುಕೊಂಡಿದೆ. ಲೋಕೇಶ್ ಕನಕರಾಜ್ ಈ ಚಿತ್ರ ನಿರ್ದೇಶನ ಮಾಡಿದ್ದು, ವಿಜಯ್ ಜೊತೆ ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಮಾಳವಿಕಾ ಮೋಹನ್ ನಾಯಕಿಯಾಗಿದ್ದಾರೆ.

  English summary
  Tamil actor Vijay Starrer Master Movie to Release in Kannada. the movie set to release in january 13th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X