For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ನಿರ್ದೇಶಕ ತರುಣ್ ಸುಧೀರ್ ಪಾಲಿಗೆ ಫೆಬ್ರವರಿ 4 ವಿಶೇಷವಾದ ದಿನ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿರುವ ನಿರ್ದೇಶಕ ತರುಣ್ ಸುಧೀರ್ ಇಂದು ಬಹಳ ವಿಶೇಷ ದಿನ. ತರುಣ್ ಚೊಚ್ಚಲ ಬಾರಿಗೆ ನಿರ್ದೇಶನದ ಮಾಡಿದ ಚಿತ್ರ ಬಿಡುಗಡೆಯಾದ ದಿನ.

  ಹೌದು, ತರುಣ್ ಸುಧೀರ್ ಮೊದಲ ಸಲ ನಿರ್ದೇಶಿಸಿದ್ದ ಚೌಕ ಸಿನಿಮಾ ರಿಲೀಸ್ ಆಗಿ ಇಂದಿಗೆ ನಾಲ್ಕು ವರ್ಷ ಕಳೆದಿದೆ. 2017ರ ಫೆಬ್ರವರಿ 4 ರಂದು ಚೌಕ ಸಿನಿಮಾ ತೆರೆಕಂಡಿತ್ತು. ಈ ವಿಶೇಷ ದಿನದಂದು ತರುಣ್ ಚೌಕ ಸಿನಿಮಾದ ಯಶಸ್ಸಿಗೆ ಕಾರಣರಾದ ಕಲಾವಿದ, ತಂತ್ರಜ್ಞರನ್ನು ಸ್ಮರಿಸಿಕೊಂಡಿದ್ದಾರೆ.

  ಶರಣ್-ತರುಣ್ ಸುಧೀರ್ ಸ್ನೇಹವನ್ನ 4 ವರ್ಷ ದೂರ ಮಾಡಿತ್ತು ಆ ಒಂದು ಹಾಡು.!ಶರಣ್-ತರುಣ್ ಸುಧೀರ್ ಸ್ನೇಹವನ್ನ 4 ವರ್ಷ ದೂರ ಮಾಡಿತ್ತು ಆ ಒಂದು ಹಾಡು.!

  ''ಚೌಕ ಸಿನಿಮಾ ಇಂದಿಗೆ ನಾಲ್ಕು ವರ್ಷ ಮುಗಿಸಿದೆ. ನನ್ನ ಜೊತೆಗಿದ್ದ ಎಲ್ಲ ಕಲಾವಿದರು, ತಂತ್ರಜ್ಞರಿಗೆ ಧನ್ಯವಾದಗಳು. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ವಿಶೇಷವಾಗಿ ದ್ವಾರಕೀಶ್ ಚಿತ್ರ, ನಿರ್ಮಾಪಕ ಯೋಗಿ ದ್ವಾರಕೀಶ್‌ಗೆ ಥ್ಯಾಂಕ್ಸ್'' ಎಂದು ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

  ಚೌಕ ಚಿತ್ರದಲ್ಲಿ ಬಹಳ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದಿವಂಗತ ನಟ-ನಿರ್ದೇಶಕ ಕಾಶೀನಾಥ್ ಅವರನ್ನು ತರುಣ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

  ''ಚೌಕ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ ಮುಂದೆ ಪೂರ್ಣ ಪ್ರಮಾಣದಲ್ಲಿ ಡಿ ಬಾಸ್‌ಗೆ ಆಕ್ಷನ್ ಕಟ್ ಹೇಳ್ತೇನೆ ಅಂತ. ರಾಬರ್ಟ್ ಚಿತ್ರದ ನನ್ನ ಪಾಲಿಗೆ ಬಹಳ ವಿಶೇಷ. ಥ್ಯಾಂಕ್ ಡಿ ಬಾಸ್'' ಎಂದು ತರುಣ್ ಮತ್ತೊಂದು ಪೋಸ್ಟ್ ಹಾಕಿದ್ದಾರೆ.

  Tharun Sudhir Directional Chowka Movie Completes 4 Years

  ನಾಲ್ಕು ಕಾಲಘಟ್ಟದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ಪ್ರೇಮ್, ವಿಜಯ ರಾಘವೇಂದ್ರ, ದಿಗಂತ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಐಂದ್ರಿತಾ ರೇ, ದೀಪಾ ಸನ್ನಿಧಿ, ಪ್ರಿಯಾಮಣಿ, ಭಾವನಾ ನಾಯಕಿಯರಾಗಿ ಅಭಿನಯಿಸಿದ್ದರು.

  Recommended Video

  ದಾಖಲೆ ಮೊತ್ತಕ್ಕೆ ಸೇಲ್ ಆಯ್ತು ರಾಬರ್ಟ್ ತೆಲುಗು ಸಿನಿಮಾ | Filmibeat Kannada

  ಈ ಚಿತ್ರದಲ್ಲಿ ಐದು ಜನ ಸಂಗೀತ ನಿರ್ದೇಶಕರು, ಐದು ಜನ ಛಾಯಾಗ್ರಾಹಕರು, ಐದು ಜನ ಬರಹಗಾರರು ಹೀಗೆ ಬಹುದೊಡ್ಡ ಪ್ರೊಡಕ್ಷನ್ ಆಗಿತ್ತು.

  English summary
  Tharun Sudhir Directional, Prem Kumar, Vijay Raghavendra, Diganth, Prajwal Devaraj starrer Chowka Movie Completes 4 Years.
  Thursday, February 4, 2021, 17:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X