For Quick Alerts
  ALLOW NOTIFICATIONS  
  For Daily Alerts

  'ತಾಯಿಗೆ ತಕ್ಕ ಮಗ'ನ ಬಗ್ಗೆ ನೀವು ತಿಳಿಯಬೇಕಾದ ಆ 'ನಾಲ್ಕು' ಅಂಶಗಳು

  |

  'ಕೃಷ್ಣ' ಅಜಯ್ ರಾವ್ ಮತ್ತು ನಿರ್ದೇಶಕ ಶಶಾಂಕ್ ಜೋಡಿಯಲ್ಲಿ ಮೂಡಿಬರ್ತಿರುವ 'ತಾಯಿಗೆ ತಕ್ಕ ಮಗ' ಇದೇ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೈಲರ್, ಹಾಡುಗಳು ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಸಿನಿಮಾ ಹಲವು ವಿಶೇಷತೆಗಳಿಂದ ಕೂಡಿದೆ.

  ಶಶಾಂಕ್ ನಿರ್ದೇಶನ ಮತ್ತು ನಿರ್ಮಿಸಿರುವ ಈ ಚಿತ್ರದಲ್ಲಿ ಅಜಯ್ ರಾವ್ ಗೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಸುಮಲತಾ ಅಮ್ಮನ ಪಾತ್ರ ನಿರ್ವಹಿಸಿದ್ದಾರೆ. ಜುಡಾ ಸ್ಯಾಂಡಿ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.

  'ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಪ್ರೇರಣೆ.?

  ರೆಬಲ್ ತಾಯಿ ಹಾಗೂ ತಾಯಿಗೆ ತಕ್ಕ ರೆಬಲ್ ಮಗನ ಆಕ್ಷನ್ ಕಥೆ ಇದಾಗಿದ್ದು, ಇದರಲ್ಲಿ ಲವ್, ಸೆಂಟಿಮೆಂಟ್, ಟ್ವಿಸ್ಟ್ ಹೀಗೆ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾಗುವ ಎಲ್ಲ ಅಂಶಗಳನ್ನಿಟ್ಟು ಚಿತ್ರಕಥೆ ಮಾಡಲಾಗಿದೆ. ನವೆಂಬರ್ 16 ರಂದು ತೆರೆಮೇಲೆ ಬರ್ತಿರುವ ಈ ಚಿತ್ರವನ್ನ ನೋಡುವ ಮೊದಲು ಈ ಸ್ಪೆಷಲ್ ಎಲಿಮೆಂಟ್ಸ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಮುಂದೆ ಓದಿ....

  ಹ್ಯಾಟ್ರಿಕ್ ಕಾಂಬಿನೇಷನ್

  ಹ್ಯಾಟ್ರಿಕ್ ಕಾಂಬಿನೇಷನ್

  ಅಜಯ್ ರಾವ್ ಮತ್ತು ನಿರ್ದೇಶಕ ಶಶಾಂಕ್ ಅವರದ್ದು ಇದು ಹ್ಯಾಟ್ರಿಕ್ ಸಿನಿಮಾ. ಈ ಹಿಂದೆ 'ಕೃಷ್ಣನ್ ಲವ್ ಸ್ಟೋರಿ' ಮತ್ತು 'ಕೃಷ್ಣಲೀಲಾ' ಎಂದು ಎರಡು ದೊಡ್ಡ ಸಿನಿಮಾ ನೀಡಿದ್ದ ಜೋಡಿ ಇದು. ಇದೀಗ, ಮೂರನೇ ಸಿನಿಮಾ 'ತಾಯಿಗೆ ತಕ್ಕ ಮಗ' ಇದೇ ವಾರ ಬರ್ತಿದ್ದು, ಈ ಹಿಂದಿನ ಚಿತ್ರಗಳಂತೆ ಅಷ್ಟೇ ದೊಡ್ಡ ಕುತೂಹಲ ಮೂಡಿಸಿದೆ.

  'ತಾಯಿಗೆ ತಕ್ಕ ಮಗ'ನ ಜೊತೆ 'ರಾಘು' ಮೊದಲ ಹೆಜ್ಜೆ

  ಅಜಯ್ 25ನೇ ಸಿನಿಮಾ

  ಅಜಯ್ 25ನೇ ಸಿನಿಮಾ

  2003ರಲ್ಲಿ 'ಎಕ್ಸ್ ಕ್ಯೂಸ್ ಮೀ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ನಟ ಅಜಯ್ ರಾವ್ ಈಗ ಸಿಲ್ವರ್ ಜ್ಯೂಬ್ಲಿ ಸಿನಿಮಾದ ಸಾಧನೆ ಮಾಡಿದ್ದಾರೆ. 'ತಾಯಿಗೆ ತಕ್ಕ ಮಗ' ಅಜಯ್ ಗೆ 25ನೇ ಸಿನಿಮಾ. ತಾಜ್ ಮಹಾಲ್, ಪ್ರೇಮ್ ಕಹಾನಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣಲೀಲಾ, ರೋಸ್, ಎಂದೆಂದಿಗೂ, ಕೃಷ್ಣ-ರುಕ್ಕು, ಕೊನೆಯದಾಗಿ ಧೈರ್ಯಂ ಸೇರಿದಂತೆ ಹಲವು ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

  ಸೆಲ್ಫಿ ಕಳುಹಿಸಿ, ಅಮ್ಮನಿಗೆ 50 ಸಾವಿರದ ಗಿಫ್ಟ್ ನೀಡಿ

  ಶಶಾಂಕ್ ಸಿನಿಮಾಸ್ ಚೊಚ್ಚಲ ಕಾಣಿಕೆ

  ಶಶಾಂಕ್ ಸಿನಿಮಾಸ್ ಚೊಚ್ಚಲ ಕಾಣಿಕೆ

  'ಸಿಕ್ಸರ್' ಚಿತ್ರದ ಮೂಲಕ ಡೈರಕ್ಷನ್ ಆರಂಭಿಸಿದ ನಿರ್ದೇಶಕ ಶಶಾಂಕ್ ಮೊಗ್ಗಿನ ಮನಸ್ಸು, ಜರಾಸಂಧ, ಬಚ್ಚನ್, ಮುಂಗಾರು ಮಳೆ 2, ಸೇರಿದಂತೆ 7 ಚಿತ್ರಗಳನ್ನ ನಿರ್ದೇಶನ ಮಾಡಿ ಯಶಸ್ಸು ಕಂಡಿದ್ದಾರೆ. ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಿಸಿದ್ದಾರೆ. 'ತಾಯಿಗೆ ತಕ್ಕ ಮಗ' ಸಿನಿಮಾ 'ಶಶಾಂಕ್ ಸಿನಿಮಾಸ್' ಅಡಿಯಲ್ಲಿ ಬರ್ತಿರುವ ಚೊಚ್ಚಲ ಕಾಣಿಕೆ.

  ನಟಿ ಸುಮಲತಾ ಟ್ಯಾಟೂ ಹಾಕಿಸಿಕೊಂಡ ಅಜಯ್ ರಾವ್

  ಸುಮಲತಾ-ಅಜಯ್ ಜೋಡಿ

  ಸುಮಲತಾ-ಅಜಯ್ ಜೋಡಿ

  15 ವರ್ಷಗಳ ನಂತರ ಹಿರಿಯ ನಟಿ ಸುಮಲತಾ ಮತ್ತು ಅಜಯ್ ರಾವ್ ಅಮ್ಮ ಮತ್ತು ಮಗನಾಗಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. 'ಎಕ್ಸ್ ಕ್ಯೂಸ್ ಮೀ' ಚಿತ್ರದಲ್ಲಿ ಅಜಯ್ ರಾವ್ ಗೆ ಸುಮಲತಾ ಅಮ್ಮನ ಪಾತ್ರ ಮಾಡಿದ್ದರು. ಇದೀಗೆ, 'ತಾಯಿಗೆ ತಕ್ಕ ಮಗ' ಸಿನಿಮಾದಲ್ಲಿ ಅದೇ ಕಾಂಬಿನೇಷನ್ ವಾಪಸ್ ಆಗಿದೆ. ಇದು ಸಿನಿಪ್ರಿಯರಿಗೆ ಸರ್ಪ್ರೈಸ್ ಎಲಿಮೆಂಟ್.

  English summary
  Kannada actor ajay rao starrer thayige thakka maga movie will release on november 16th. the movie directed by shashank.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X