»   » ಜುಲೈ 23ಕ್ಕೆ ಪವನ್ ಕುಮಾರ್ 'The Final Rehearsal' ನಾಟಕ ಪ್ರದರ್ಶನ

ಜುಲೈ 23ಕ್ಕೆ ಪವನ್ ಕುಮಾರ್ 'The Final Rehearsal' ನಾಟಕ ಪ್ರದರ್ಶನ

Posted By:
Subscribe to Filmibeat Kannada

'ಲೂಸಿಯ' ಮತ್ತು 'ಯೂ ಟರ್ನ್' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ನಿಮಗೆಲ್ಲಾ ಗೊತ್ತಿರಬಹುದು. ವಿಭಿನ್ನ ಚಿತ್ರಕಥೆಗಳೊಂದಿಗೆ ಸಿನಿಮಾ ಮಾಡುವ ಇವರು ಡೈರೆಕ್ಷನ್ ಜೊತೆಗೆ ಅಭಿನಯದಲ್ಲೂ ನಿಪುಣರು. 'ಪಂಚರಂಗಿ', 'ಲೈಫು ಇಷ್ಟೇನೆ', 'ಮನಸಾರೆ' ಚಿತ್ರಗಳಲ್ಲಿ ನಟಿಸಿರುವ ಇವರು 'The Final Rehearsal' ಎಂಬ ನಾಟಕಕ್ಕೆ ಬೆಸ್ಟ್ ಆಕ್ಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ಹೌದು ಪವನ್ ಕುಮಾರ್ ತಾವು ನಿರ್ದೇಶಕರಾಗುವ ಮೊದಲೇ ಥಿಯೇಟರ್ ಆರ್ಟಿಸ್ಟ್ ಆಗಿದ್ದರು. ಇವರೇ ಬರೆದು ನಿರ್ದೇಶನ ಜೊತೆಗೆ ನಟನೆ ಮಾಡಿರುವ ''The Final Rehearsal' ಎಂಬ ನಾಟಕಕ್ಕೆ 2002 ಡಿಸೆಂಬರ್ ನಲ್ಲಿ ಬಾಂಬೆಯಲ್ಲಿ ನಡೆದ 'Youth Theatre Festival Thespo4' ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು. ಅಲ್ಲದೇ ಈ ಸೈಕಾಲಜಿಕಲ್ ಕಾಮಿಡಿ ಡ್ರಾಮಾ ಬೆಸ್ಟ್ ಸ್ಕ್ರಿಪ್ಟ್, ಬೆಸ್ಟ್ ಡೈರೆಕ್ಷನ್, ಬೆಸ್ಟ್ ಪ್ರೊಡಕ್ಷನ್ ಡಿಸೈನ್ ಮತ್ತು ಅತ್ಯುತ್ತಮ ನಾಟಕ ವಿಭಾಗಗಳಲ್ಲಿ ನಾಮಿನೇಟ್ ಸಹ ಆಗಿತ್ತು.

The Final Rehearsal - Solo Play by Pawan Kumar

ಅಂದಹಾಗೆ ಪವನ್ ಕುಮಾರ್ ರವರೇ ನಟನೆ ಮಾಡಲಿರುವ 'The Final Rehearsal' ನಾಟಕವು ಜುಲೈ 23 ರಂದು 3.30pm ಮತ್ತು 7.30pm ಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿನ 'ರಂಗ ಶಂಕರ'ದಲ್ಲಿ ಪ್ರದರ್ಶನವಾಗಲಿದೆ. ಇಂಗ್ಲಿಷ್ ಭಾಷೆಯಲ್ಲಿ ಪವನ್ ಕುಮಾರ್ ಒಬ್ಬರೇ ಅಭಿನಯಿಸಲಿರುವ ಈ ನಾಟಕವನ್ನು ನೋಡಲು ಆಸಕ್ತಿ ಉಳ್ಳವರು 'ಬುಕ್‌ಮೈಶೋ'ದಲ್ಲಿ ಟಿಕೆಟ್ ಬುಕ್ ಮಾಡಬಹುದು.

English summary
'Lucia' and 'U-Turn' Filmmaker Pawan Kumar solo performance Psychological Drama 'The Final Rehearsal' has been showing at Ranga Shankara on July 23 at 3.30pm and 7.30pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada