»   » 'ಕಿಲ್ಲಿಂಗ್ ವೀರಪ್ಪನ್' ಶಿವಣ್ಣನ ಮಹತ್ವಾಕಾಂಕ್ಷಿ ಚಿತ್ರ

'ಕಿಲ್ಲಿಂಗ್ ವೀರಪ್ಪನ್' ಶಿವಣ್ಣನ ಮಹತ್ವಾಕಾಂಕ್ಷಿ ಚಿತ್ರ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಮಹತ್ವಾಕಾಂಕ್ಷಿ ಚಿತ್ರ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳಿರುತ್ತಿರುವ ಚಿತ್ರ ಇದಾಗಿದ್ದು ಹಲವಾರು ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ.

ಅಣ್ಣಾವ್ರ 87ನೇ ಜನ್ಮದಿನದಂದು ಈ ಚಿತ್ರದ ಮೊದಲ ನೋಟ ಹೊರಬಿದ್ದಿದ್ದು, ಶಿವಣ್ಣ ಅವರ ಗೆಟಪ್ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತದೆ. ಕಡತಗಳ ಜೊತೆಗೆ ಕಾಫಿ ಕಪ್ ಹಿಡಿದು ಗಾಢವಾಗಿ ಮಗ್ನವಾಗಿರುವ ಶಿವಣ್ಣನನ್ನು ನೋಡಿಯೇ ಅಭಿಮಾನಿಗಳು ಪುಳಕಗೊಂಡಿದ್ದಾರೆ.

The first look of Shiva Rajkumar's Killing Veerappan

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಚಿತ್ರ ಎಂದರೆ ಕೇಳಬೇಕೆ. ಹೆಜ್ಜೆಹೆಜ್ಜೆಗೂ ಕುತೂಹಲ, ತಿರುವುಗಳು ಪ್ರೇಕ್ಷಕರನ್ನು ಸೀಟಿನ ಅಂಚಿಗೆ ತಂದು ಕೂರಿಸುತ್ತವೆ. ಈ ಚಿತ್ರದ ಬಗ್ಗೆ ಸ್ವತಃ ರಾಮ್ ಗೋಪಾಲ್ ವರ್ಮಾ ಅವರು ಟ್ವೀಟ್ ಮಾಡಿದ್ದು ಚಿತ್ರದ ಬಗೆಗಿನ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

"ವೀರಪ್ಪನ್ ಎಷ್ಟು ಭಯಾನಮಕ ಕೊಲೆಗಾರ ಎಂದರೆ ಸರಿಸುಮಾರು 400 ಮಂದಿಯನ್ನು ಹತ್ಯೆ ಮಾಡಿದ್ದು ಅವರಲ್ಲಿ ಬಹುತೇಕರು ಪೊಲೀಸ್ ಅಧಿಕಾರಿಗಳು, ವೀರಪ್ಪನ್ ಭೇಟೆಯ ಹಿಂದಿನ ರಹಸ್ಯ ಆಪರೇಷನ್ ಹಾಲಿವುಡ್ ನ Zero Dark Thirty ಚಿತ್ರಕ್ಕಿಂತಲೂ ಹೆಚ್ಚು ಥ್ರಿಲ್ಲಿಂಗ್ ಆಗಿದೆ" ಎಂದಿದ್ದಾರೆ ರಾಮು.

ಒಸಾಮಾ ಬಿನ್ ಲಾಡೆನ್ ನನ್ನು ಸಾಯಿಸಲು 10 ವರ್ಷ ತೆಗೆದುಕೊಳ್ಳಲಾಯಿತು, ಅದೇ ವೀರಪ್ಪನನ್ನು ಸಾಯಿಸಲು 25 ವರ್ಷ ಬೇಕಾಯಿತು. ಪೂಲನ್ ದೇವಿ ಕುರಿತ ಬ್ಯಾಂಡಿಟ್ ಕ್ವೀನ್ ಚಿತ್ರದಷ್ಟೇ ಕಿಲ್ಲಿಂಗ್ ವೀರಪ್ಪನ್ ಚಿತ್ರವೂ ಎಲ್ಲಾ ವರ್ಗದ ಪ್ರೇಕ್ಷಕರನ್ನು ಮುಟ್ಟಲಿದೆ ಎಂದು ರಾಮು ಚಿತ್ರದ ಬಗ್ಗೆ ಇನ್ನಷ್ಟು ಆಸಕ್ತಿ ಕೆರಳಿಸಿದ್ದಾರೆ.

ಇದೊಂದು ಚತುರ್ಭಾಷಾ ಚಿತ್ರವಾಗಿದ್ದು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ರಾಮು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ವರ್ಮಾ ಚಿತ್ರಗಳಿಗೆ ತನ್ನದೇ ಆದಂತಹ ಪ್ರೇಕ್ಷಕವರ್ಗ ಇದೆ. ಶಿವಣ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ವರ್ಮಾ ಸಾಹೇಬರು ಸ್ಯಾಂಡಲ್ ವುಡ್ ಗೂ ಅಡಿಯಿಟ್ಟಂತಾಗಿದೆ.

ವರನಟ ಡಾ.ರಾಜ್ ಕುಮಾರ್ ಅವರನ್ನು ಅಪಹರಣ ಮಾಡಿ 108 ದಿನಗಳ ಕಾಲ ನರಹಂತಕ ವೀರಪ್ಪನ್ ಕಾಡಿನಲ್ಲಿ ಬಂಧಿಯಾಗಿ ಇಟ್ಟುಕೊಂಡಿದ್ದ. ಕನ್ನಡಿಗರ ಆಸ್ತಿಯನ್ನೇ ವೀರಪ್ಪನ್ ಅಪಹರಣ ಮಾಡಿದ್ದು ಅಭಿಮಾನಿಗಳು ಕೆರಳುವಂತೆ ಮಾಡಿತ್ತು. ಅಂತಹ ನರಹಂತಕನನ್ನು ಶಿವಣ್ಣ ತೆರೆಯ ಮೇಲೆ ಫಿನಿಶ್ ಮಾಡುವುದನ್ನು ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. (ಫಿಲ್ಮಿಬೀಟ್ ಕನ್ನಡ)

    English summary
    The first look of Shiva Rajkumar's Killing Veerappan is out, directed by Ram Gopal Varma. A story of Cunning, Courage, Evil, Genius, Betrayal, Friendship and above all a Tremendous commitment.
    Please Wait while comments are loading...

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada