For Quick Alerts
  ALLOW NOTIFICATIONS  
  For Daily Alerts

  ಸಿಂಗಲ್ ಟೇಕ್ ಹಾಡಿನಲ್ಲಿ 'ಕ್ವೀನ್' ಬೆಡಗಿಯರು

  By Pavithra
  |

  ಬಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ 'ಕ್ವೀನ್' ಚಿತ್ರ ದಕ್ಷಿಣ ಭಾಷೆಗಳಿಗೆ ರೀಮೇಕ್ ಆಗುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈಗಾಗಲೇ ಅಂತಿಮ ಹಂತದ ಚಿತ್ರೀಕರಣ ಮುಗಿಸಿರುವ ಸಿನಿಮಾ ತಂಡಗಳು ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಕಾತುರದಲ್ಲಿದ್ದಾರೆ.

  ಕಂಗನಾ ರಣಾವತ್ ಪಾತ್ರವನ್ನು ಕಾಜೋಲ್ ಅಗರ್ ವಾಲ್, ತಮನ್ನಾ, ಪಾರೂಲ್ ಯಾದವ್, ಹಾಗೂ ಮಂಜಿಮಾ ಮೋಹನ್ ನಿರ್ವಹಿಸಿದ್ದು ಅಕ್ಟೋಬರ್ ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ. 4 ಭಾಷೆಗಳಲ್ಲಿ ರೀಮೇಕ್ ಆಗುತ್ತಿರುವ ಈ ಚಿತ್ರವು ಪ್ಯಾರಿಸ್ -ಪ್ಯಾರಿಸ್, ಬಟರ್ ಫ್ಲೈ, ಜಾಮ್-ಜಾಮ್ ಹಾಗೂ ದಟ್ ಈಸ್ ಮಹಾಲಕ್ಷ್ಮಿ ಎಂಬ ಶೀರ್ಷಿಕೆಯಡಿಯಲ್ಲಿ ಹೊರಬರಲಿದೆ.

  ಕಾಜಲ್, ತಮನ್ನಾ ಜೊತೆ ಸೇರಿ ಮೈಸೂರಿನಲ್ಲಿ ಪಾರೂಲ್ ಪಾರ್ಟಿಕಾಜಲ್, ತಮನ್ನಾ ಜೊತೆ ಸೇರಿ ಮೈಸೂರಿನಲ್ಲಿ ಪಾರೂಲ್ ಪಾರ್ಟಿ

  ಈಗಾಗಲೇ ಬಹಳಷ್ಟು ಸುದ್ದಿಮಾಡಿರುವ ಚಿತ್ರವನ್ನು ಕನ್ನಡ ಹಾಗೂ ತಮಿಳಿನಲ್ಲಿ ರಮೇಶ್ ಅರವಿಂದ್ ನಿರ್ದೇಶಿಸಿದರೆ, ತೆಲುಗಿನಲ್ಲಿ ಪ್ರಶಾಂತ್ ವರ್ಮಾ ಹಾಗೂ ಮಲೆಯಾಳಂನಲ್ಲಿ ನೀಲಕಂಠ ಅವರು ಇದರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಸಿನಿಮಾಗಳಿಗೆ ಅಮಿತ್ ತ್ರಿವೇದಿ ಅವರ ಅದ್ಭುತವಾದ ಸಂಗೀತವಿದೆ.

  the four-language remake of Bollywood Queen is shooting complete

  ಹಲವಾರು ವಿಚಾರಗಳಲ್ಲಿ ಸುದ್ದಿ ಮಾಡಿರುವ ಈ ನಾಲ್ಕು ಚಿತ್ರಗಳ ಮತ್ತೊಂದು ವಿಶೇಷ ಎಂದರೆ ಎಲ್ಲಾ ಹಾಡುಗಳನ್ನು ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಿಸಿಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇನ್ನು ಕನ್ನಡದ 'ಬಟರ್ ಫ್ಲೈ' ಚಿತ್ರದ ಮುಖ್ಯ ಪಾತ್ರವನ್ನು ವಹಿಸಿರುವ ಪಾರೂಲ್ ಅಭಿನಯದ ಜೊತೆಯಲ್ಲಿ ಚಿತ್ರದ ಸಹ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿರುವ ಸಿನಿಮಾತಂಡಗಳು ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.

  English summary
  The shooting of the four-language remake of Bollywood Queen is shooting almost complete . Kajol Agarwall, Tamanna, Paral Yadav, and Manjima Mohan play The role of Kangana Ranawat .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X