For Quick Alerts
  ALLOW NOTIFICATIONS  
  For Daily Alerts

  '2.0' ಚಿತ್ರ ಸದ್ದು ಮಾಡಿದ್ದ ಜಾಗದಲ್ಲಿ 'ದಿ ವಿಲನ್' ಹಾಡುಗಳ ಅಬ್ಬರ

  By Pavithra
  |
  TheVillain : ದಿ ವಿಲನ್ ಮತ್ತೊಂದು ದಾಖಲೆ..! | Filmibeat Kannada

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ದುಬೈನಲ್ಲಿ ನಡೆಯಲಿದೆ. ಈಗಾಗಲೇ ಗಾಂಧಿನಗರ ತುಂಬೆಲ್ಲಾ ಈ ವಿಚಾರ ಹರಡಿಕೊಂಡಿದ್ದು ಚಿತ್ರತಂಡ ಈಗ ಅಧಿಕೃತವಾಗಿ ದುಬೈಗೆ ಹಾರುವ ದಿನಾಂಕವನ್ನು ಫಿಕ್ಸ್ ಮಾಡಿದೆ.

  ದುಬೈನಲ್ಲಿ '2.0' ಚಿತ್ರ ಸದ್ದು ಮಾಡಿದ ಜಾಗದಲ್ಲೇ 'ದಿ ವಿಲನ್' ಸಿನಿಮಾದ ಹಾಡುಗಳು ಬಿಡುಗಡೆ ಆಗಲಿದೆ. ವಿಶೇಷ ಎಂದರೆ ಕೇವಲ ಹಾಡುಗಳನ್ನ ರಿಲೀಸ್ ಮಾಡುವುದು ಮಾತ್ರವಲ್ಲದೆ ಕನ್ನಡದ ಸಿನಿಮಾ ತಾರೆಯರು 'ದಿ ವಿಲನ್' ಚಿತ್ರದ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.

  'ದಿ ವಿಲನ್' ಚಿತ್ರದ ಎರಡನೇ ಹಾಡಿಗೆ ಶುರುವಾಯ್ತು ಕಾತುರ'ದಿ ವಿಲನ್' ಚಿತ್ರದ ಎರಡನೇ ಹಾಡಿಗೆ ಶುರುವಾಯ್ತು ಕಾತುರ

  ಹಾಗಾದರೆ ದುಬೈನಲ್ಲಿ 'ದಿ ವಿಲನ್' ಸಿನಿಮಾದ ಹಾಡುಗಳ ಸಂಭ್ರಮ ಯಾವಾಗ? ಯಾರೆಲ್ಲಾ ತಾರೆಯರು ಆಡಿಯೋ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಇದ್ಯಾ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ದುಬೈನಲ್ಲಿ 'ದಿ ವಿಲನ್' ಹಾಡುಗಳ ಸಂಭ್ರಮ

  ದುಬೈನಲ್ಲಿ 'ದಿ ವಿಲನ್' ಹಾಡುಗಳ ಸಂಭ್ರಮ

  'ದಿ ವಿಲನ್' ಸಿನಿಮಾದ ಹಾಡುಗಳನ್ನು ಇದೇ ತಿಂಗಳು ಅಂದರೆ ಆಗಸ್ಟ್ 17 ರಂದು ದುಬೈನ ಬುರ್ಜ್ ಪಾರ್ಕ್ ನಲ್ಲಿ ನಡೆಯಲಿದೆ. ಸಿನಿಮಾತಂಡ ಈಗಾಗಲೇ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದು ಮುಂದಿನ ವಾರಾಂತ್ಯದಲ್ಲಿ ಚಿತ್ರತಂಡ ದುಬೈಗೆ ಹಾರಲಿದೆ.

  ಹಾಡಿಗೆ ನೃತ್ಯ ಮಾಡಲಿರುವ ಕಲಾವಿದರು

  ಹಾಡಿಗೆ ನೃತ್ಯ ಮಾಡಲಿರುವ ಕಲಾವಿದರು

  ದುಬೈನ ಬುರ್ಜ್ ಪಾರ್ಕ್ ನಲ್ಲಿ ಆಡಿಯೋ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ 'ದಿ ವಿಲನ್' ಚಿತ್ರದ ಹಾಡುಗಳಿಗೆ ಕನ್ನಡದ ತಾರೆಯರು ನೃತ್ಯ ಮಾಡಲಿದ್ದಾರೆ.

  ಕಾರುಣ್ಯ ರಾಮ್- ರಾಧಿಕಾ ಚೇತನ್

  ಕಾರುಣ್ಯ ರಾಮ್- ರಾಧಿಕಾ ಚೇತನ್

  ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ನಟಿಯರಾದ ರಾಧಿಕಾ ಚೇತನ್ ಹಾಗೂ ಕಾರುಣ್ಯ ರಾಮ್ 'ದಿ ವಿಲನ್' ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನೃತ್ಯ ಮಾಡಿ ಅಲ್ಲಿಯ ಕನ್ನಡ ಸಿನಿಮಾ ಕಲಾವಿದರನ್ನು ರಂಜಿಸಲಿದ್ದಾರಂತೆ. ಅಭಿಮಾನಿಗಳು ಭಾಗಿ ಆಗಲು ಅವಕಾಶವಿದ್ದು ಕಾರ್ಯಕ್ರಮಕ್ಕೆ ಟಿಕೆಟ್ ಖರೀದಿ ಮಾಡಬೇಕಿದೆ.

  'ದಿ ವಿಲನ್' ಸಿನಿಮಾ ಬಗ್ಗೆ

  'ದಿ ವಿಲನ್' ಸಿನಿಮಾ ಬಗ್ಗೆ

  'ದಿ ವಿಲನ್' ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ. ಸಿ ಆರ್ ಮನೋಹರ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ಸುದೀಪ್, ಶಿವರಾಜ್ ಕುಮಾರ್ ಜೊತೆಯಲ್ಲಿ ಆಮಿ ಜಾಕ್ಸನ್ ನಾಯಕಿಯಾಗಿ ಅಭಿನಯ ಮಾಡಿದ್ದಾರೆ. ಸದ್ಯ ಟೀಸರ್ ಬಿಡುಗಡೆ ಮಾಡಿರುವ ತಂಡ ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದೆ.

  English summary
  Kannada 'The Villain' audio release ceremony will be held august 17th at Dubai Burj Park . Sudeep and Shivarajkumar acted in The Villain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X