For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಆಡಿಯೋ ಬಗ್ಗೆ ಎಲ್ಲರಿಗೂ ಶಾಕ್ ಕೊಟ್ಟ ಪ್ರೇಮ್.!

  By Bharath Kumar
  |
  TheVillain : ದಿ ವಿಲನ್ ಆಡಿಯೋ ರಿಲೀಸ್ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ಪ್ರೇಮ್..! | Filmibeat Kannada

  ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಚಿತ್ರದ ಹಾಡುಗಳು ಭರ್ಜರಿ ಸದ್ದು ಮಾಡುತ್ತಿದೆ. ಈ ಮಧ್ಯೆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.

  'ದಿ ವಿಲನ್' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ದುಬೈನಲ್ಲಿ ನೆರವೇರಿಸಲು ಚಿತ್ರತಂಡ ನಿರ್ಧರಿಸಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ '2.0' ಸಿನಿಮಾ ಆಡಿಯೋ ರಿಲೀಸ್ ಮಾಡಿದ್ದ ವೇದಿಕೆಯಲ್ಲಿ 'ದಿ ವಿಲನ್' ಚಿತ್ರದ ಧ್ವನಿ ಸುರಳಿ ಲೋಕಾರ್ಪಣೆ ಮಾಡುವ ಪ್ಲಾನ್ ಇದೆ ಎನ್ನಲಾಗಿತ್ತು.

  '2.0' ಚಿತ್ರ ಸದ್ದು ಮಾಡಿದ್ದ ಜಾಗದಲ್ಲಿ 'ದಿ ವಿಲನ್' ಹಾಡುಗಳ ಅಬ್ಬರ '2.0' ಚಿತ್ರ ಸದ್ದು ಮಾಡಿದ್ದ ಜಾಗದಲ್ಲಿ 'ದಿ ವಿಲನ್' ಹಾಡುಗಳ ಅಬ್ಬರ

  ಆದ್ರೀಗ, ನಿರ್ದೇಶಕ ಪ್ರೇಮ್ ಸರ್ಪ್ರೈಸ್ ಕೊಟ್ಟಿದ್ದಾರೆ. 'ದಿ ವಿಲನ್' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಯಾವಾಗ ಮತ್ತು ಎಲ್ಲಿ ಎಂಬ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಇದು ಕೆಲವರಿಗೆ ನಿರಾಸೆ ಮೂಡಿಸಿದ್ದರೇ, ಮತ್ತೆ ಕೆಲವರಿಗೆ ಖುಷಿಕೊಟ್ಟಿದೆ. ಎಲ್ಲರೂ ಅಂದುಕೊಂಡಿದ್ದೇ ಒಂದು, ನಿರ್ದೇಶಕ ಪ್ರೇಮ್ ಹೇಳಿದ್ದೇ ಇನ್ನೊಂದು. ಮುಂದೆ ಓದಿ....

  ಬೆಂಗಳೂರಲ್ಲೇ ಆಡಿಯೋ ರಿಲೀಸ್

  ಬೆಂಗಳೂರಲ್ಲೇ ಆಡಿಯೋ ರಿಲೀಸ್

  ಬಹುನಿರೀಕ್ಷೆಯ 'ದಿ ವಿಲನ್' ಚಿತ್ರದ ಆಡಿಯೋ ಆಗಸ್ಟ್ 19 ರಂದು ಭಾನುವಾರ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಸ್ವತಃ ಚಿತ್ರದ ನಿರ್ದೇಶಕ ಪ್ರೇಮ್ ಖಚಿತಪಡಿಸಿದ್ದಾರೆ. ಈ ಮೂಲಕ ದುಬೈನಲ್ಲಿ ಕಾರ್ಯಕ್ರಮವಿದ್ರೆ ನಾವು ಹೋಗಲು ಸಾಧ್ಯವಿಲ್ಲ ಎಂದುಕೊಂಡಿದ್ದ ಅಭಿಮಾನಿಗಳಿಗೆ ಖುಷಿ ನೀಡಿದೆ.

  ಬೆಂಗಳೂರಲ್ಲಿ ಎಲ್ಲಿ.?

  ಬೆಂಗಳೂರಲ್ಲಿ ಎಲ್ಲಿ.?

  ಬೆಂಗಳೂರಿನ ಹೆಬ್ಬಾಳದ ಬಳಿಯಿರುವ ಮಾನ್ಯತಾ ಟೆಕ್ ಪಾರ್ಕ್ ನ 'ವೈಟ್ ಆರ್ಕೆಡ್'ನಲ್ಲಿ ಭಾನುವಾರ ಸಂಜೆ 6 ಗಂಟೆಗೆ 'ದಿ ವಿಲನ್' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಇದನ್ನ ಟ್ವಿಟ್ಟರ್ ನಲ್ಲಿ ಪ್ರೇಮ್ ಸ್ಪಷ್ಟಪಡಿಸಿದ್ದಾರೆ.

  ದುಬೈ ಪ್ಲಾನ್ ಏನ್ ಆಯ್ತು.?

  ದುಬೈ ಪ್ಲಾನ್ ಏನ್ ಆಯ್ತು.?

  ಆದ್ರೆ, ದುಬೈನಲ್ಲಿ ಆಡಿಯೋ ಬಿಡುಗಡೆ ಮಾಡುವ ಪ್ಲಾನ್ ಏನ್ ಆಯ್ತು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಒಂದು ಮೂಲದ ಪ್ರಕಾರ 'ವಿಲನ್' ಚಿತ್ರದ ಆಡಿಯೋ ಎರಡು ಕಡೆ ರಿಲೀಸ್ ಮಾಡುವ ಸಾಧ್ಯತೆ ಇದ್ದು, ದುಬೈನಲ್ಲೂ ವಿಶೇಷ ಕಾರ್ಯಕ್ರಮ ಜರುಗಿಸುವ ಯೋಚನೆ ಇದೆ ಎನ್ನಲಾಗಿದೆ.

  'ದಿ ವಿಲನ್' ಆಲ್ಬಂ ನಲ್ಲಿ ಸದ್ದು ಗದ್ದಲದ ಜೊತೆಗೆ ಮೆಲೋಡಿಗೂ ಜಾಗವಿದೆ'ದಿ ವಿಲನ್' ಆಲ್ಬಂ ನಲ್ಲಿ ಸದ್ದು ಗದ್ದಲದ ಜೊತೆಗೆ ಮೆಲೋಡಿಗೂ ಜಾಗವಿದೆ

  ಅತಿಥಿಗಳ ಪಟ್ಟಿ ದೊಡ್ಡದಿರಬಹುದು.!

  ಅತಿಥಿಗಳ ಪಟ್ಟಿ ದೊಡ್ಡದಿರಬಹುದು.!

  ಭಾನುವಾರ ನಡೆಯಲಿರುವ 'ದಿ ವಿಲನ್' ಚಿತ್ರದ ಆಡಿಯೋ ಕಾರ್ಯಕ್ರಮಕ್ಕೆ ಯಾವೆಲ್ಲಾ ಅತಿಥಿಗಳು ಬರಲಿದ್ದಾರೆ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಇಬ್ಬರು ಸೂಪರ್ ಸ್ಟಾರ್ ಗಳು ಒಟ್ಟಿಗೆ ಅಭಿನಯಿಸಿರುವುದ್ರಿಂದ ಗೆಸ್ಟ್ ಗಳ ಪಟ್ಟಿ ಕೂಡ ದೊಡ್ಡದಾಗಿಯೇ ಇರಲಿದೆ ಎಂಬ ನಿರೀಕ್ಷೆ ಇದೆ. ಕಾದುನೋಡೋಣ.

  English summary
  Kannada actor Shiva Rajkumar and Kiccha Sudeep starrer the villain movie audio release date and place announce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X